ಬಾಕ್ಸ್‌ ಆಫೀಸ್ ಕಲೆಕ್ಷನ್ ಯಾರಿಗೆ ಹೆಚ್ಚು..? ಡಿಬಾಸ್ & ಯಶ್ ಫ್ಯಾನ್ಸ್ ಮಧ್ಯೆ ಕಿರಿಕ್ 

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಆಗಿ ಈಗಾಗಲೇ ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಡಿಬಾಸ್ ಮತ್ತು ಯಶ್ ಅಭಿಮಾನಿಗಳ ಮಧ್ಯೆ ಜಗಳ ನಡೆಯುತ್ತಿದೆ.

ಯಾವ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚು ಎನ್ನುವ ಚರ್ಚೆ ಸಿಕ್ಕಾಪಟ್ಟೆ ಜೋರಾಗಿದೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾ ತುಂಬಾ ಇದೇ ವಿಚಾರವಾಗಿ ಕಿತ್ತಾಡುತ್ತಿದ್ದಾರೆ.

ರಾಬರ್ಟ್ ಚಿತ್ರ ವಿಮರ್ಶೆ: ಹೀರೋಗಿಲ್ಲ ಶಾದಿಭಾಗ್ಯ, ರೊಮ್ಯಾನ್ಸ್‌ಗೆ ಅಡ್ಡಿ ಇಲ್ಲ

ಕೆಜಿಎಫ್ ಸಿನಿಮಾ ಸಿಕ್ಕಾಪಟ್ಟೆ ಕಲೆಕ್ಷನ್ ಪಡೆದ ಕನ್ನಡ ಸಿನಿಮಾವಾಗಿ ಮೂಡಿ ಬಂದಿತ್ತು. ಇದೀಗ ಎಲ್ಲಾ ಕಡೆ ರಾಬರ್ಟ್ ಹವಾ ಹೆಚ್ಚಾಗಿದ್ದು ರಾಬರ್ಟ್ ಸಿನಿಮಾ ಕೆಜಿಎಫ್ ರೆಕಾರ್ಡ್ ದಾಟಿದೆ ಎಂಬುದು ಚರ್ಚೆಯ ವಿಚಾರ.

Scroll to load tweet…

ಇನ್ನು ಕೆಲವರು ಕೆಜಿಎಫ್ ಬೇರೆ ರಾಜ್ಯದಲ್ಲಿ ಪಡೆದ ಕಲೆಕ್ಷನ್ ಒಟ್ಟಾಗಿ ಒಂದು ದಿನ 18 ಕೋಟಿ ದಾಟಿದ್ರೆ ರಾಬರ್ಟ್ ಕರ್ನಾಟಕದಲ್ಲಿಯೇ 17 ಕೋಟಿ ದಾಟಿದೆ ಎನ್ನುತ್ತಿದ್ದಾರೆ. ಅಂತೂ ಫ್ಯಾನ್ಸ್ ನಡುವಿನ ಚರ್ಚೆ ಜೋರಾಗಿದೆ.

Scroll to load tweet…
Scroll to load tweet…
Scroll to load tweet…