ಶಿವಮೊಗ್ಗಕ್ಕೆ ಬರಲಿದ್ದಾರೆ ಆಶಾ ಭಟ್ | ಇನ್‌ಸ್ಟಾಗ್ರಾಂ ಲೈವ್ ಬಂತು ಹ್ಯಾಪಿ ನ್ಯೂಸ್ ಕೊಟ್ಟ ನಟಿ

ಸದ್ಯ ರಾಬರ್ಟ್‌ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಿಕ್ಕಾಪಟ್ಟೆ ಮೆಚ್ಚುಗೆಯನ್ನು ಪಡೆಯುತ್ತಾ, ಎಲ್ಲರ ಮನಸು ಗೆದ್ದು ಮುನ್ನುಗುತ್ತಿದೆ.

ನಟಿ ಆಶಾ ಭಟ್ ಮೊದಲ ಸಿನಿಮಾವನ್ನೇ ಡಿಬಾಸ್ ಜೊತೆ ಮಾಡಿ ಫಸ್ಟ್ ಎಟೆಂಪ್ಟ್‌ನಲ್ಲೇ ಕನ್ನಡಿಗರ ಮನಸು ಗೆದ್ದಿದ್ದಾರೆ. ಆಶಾ ಭಟ್ ಶಿವಮೊಗ್ಗದ ಚೆಲುವೆ.

ಆಂಧ್ರದಲ್ಲಿ ರಾಬರ್ಟ್ ಮೊದಲ ದಿನದ ಕಲೆಕ್ಷನ್ ಎಷ್ಟು?; ಕರ್ನಾಟಕವೇ ಟಾಪ್!

ಇತ್ತೀಚೆಗೆ ಇನ್‌ಸ್ಟಾಗ್ರಾಂ ಲೈವ್ ಬಂದ ನಟಿ ಫ್ಯಾನ್ಸ್ ಜೊತೆ ಮಾತನಾಡಿದ್ದಾರೆ. ಸಿನಿಮಾ ಬಗ್ಗೆ, ನಟನೆ ಬಗ್ಗೆ ಇತರ ವಿಚಾರಗಳು ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಈ ಸಂದರ್ಭ ಬಹಳಷ್ಟು ಜನರ ಪ್ರಶ್ನೆ ನಟಿ ಯಾವಾಗ ಶಿವಮೊಗ್ಗಕ್ಕೆ ಬರ್ತಾರೆ ಅನ್ನೋದೆ ಆಗಿತ್ತು. ಇದಕ್ಕೆ ಉತ್ತರಿಸಿದ ನಟಿ ಖಂಡಿತವಾಗಿಯೂ ಶಿವಮೊಗ್ಗಕ್ಕೆ ಬರೋದಾಗಿ ಭರವಸೆ ಕೊಟ್ಟಿದ್ದಾರೆ.

ರಿಲೀಸ್ ಆದ ಒಂದೇ ದಿನಕ್ಕೆ ಫ್ರೀ ಡೌನ್‌ಲೋಡ್: ರಾಬರ್ಟ್‌ಗೆ ಪೈರಸಿ ಕಾಟ

ಸದ್ಯ ರಾಬರ್ಟ್ ಪೋಸ್ಟ್ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಆಗಿರೋದ್ರಿಂದ ಬೆಂಗಳೂರಿನಲ್ಲಿಯೇ ಉಳಿದುಕೊಂಡಿರುವುದಾಗಿ ನಟಿ ಹೇಳಿದ್ದು, ಶಿವಮೊಗ್ಗಕ್ಕೆ ಬರುವಾಗ ಡೇಟ್ ಮುಂಚಿತವಾಗಿ ಎನೌನ್ಸ್ ಮಾಡುವುದಾಗಿ ನಟಿ ಹೇಳಿದ್ದಾರೆ.

View post on Instagram