ರಾಬರ್ಟ್ ಸಿನಿಮಾಗೆ ಪೈರಸಿ ಕಾಟ ಶುರುವಾಗಿದೆ. ಸಿನಿಮಾ ರಿಲೀಸ್ ಆಗಿ ಒಂದೇ ರಾಬರ್ಟ್ ಸಿನಿಮಾ ಫುಲ್ ಮೂವಿ ಡೌನ್‌ಲೋಡ್ ಆಪ್ಶನ್‌ಗಳು ಆನ್‌ಲೈನ್‌ನಲ್ಲಿ ಸಿಗುತ್ತಿರುವುದು ಚಿತ್ರತಂಡಕ್ಕೆ ತಲೆ ನೋವಾಗಿದೆ.

ಸೋಷಿಯಲ್ ಮಿಡಿಯಾದಲ್ಲಿ ಸಿನಿಮಾ ಪೈರಸಿ ಕಾಟ ಹೆಚ್ಚಿದ್ದು, ಪೈರಸಿ ಮಾಡಿದವ್ರ ವಿರುದ್ಧ ರಾಬರ್ಟ್ ತಂಡ ಗರಂ ಆಗಿದ್ದಾರೆ. ಸದ್ಯ ಲಿಂಕ್ಸ್ ತೆಗಿಸಿ ಪೈರಸಿ ವಿಡಿಯೋ ಡಿಲೀಟ್ ಮಾಡಿಸುವುದರಲ್ಲಿ ಟೀಂ ಬ್ಯುಸಿಯಾಗಿದೆ.

ದರ್ಶನ್ ಕಟೌಟ್‌ಗೆ ಮದ್ಯದ ಅಭೀಷೇಕ, ಮದ್ಯದ ಅಮಲಿನಲ್ಲಿ ತೇಲಿದ ಡಿ ಬಾಸ್ ಫ್ಯಾನ್ಸ್

ಸಿನಿಮಾ ಟೊರೆಂಟ್ ಸೈಟ್‌ನಲ್ಲಿ ರಿಲೀಸ್ ಆಗಿದೆ ಎನ್ನಲಾಗುತ್ತಿದೆ. ಹಾಗೆಯೇ ತಮಿಳ್ ರಾಕರ್ಸ್, ತಮಿಳ್‌ಗನ್‌ನಲ್ಲಿಯೂ ಸಿನಿಮಾ ಲಭ್ಯವಾಗುತ್ತಿರುವುದು ಚಿತ್ರತಂಡಕ್ಕೆ ಕಿರಕಿರಿಯಾಗಿದೆ.

ಟೆಲಿಗ್ರಾಮ್ ಮತ್ತು ಇತರ ಸಿನಿಮಾ ಕದಿಯುವ ವೆಬ್‌ಸೈಟ್‌ಗಳಲ್ಲಿ ರಾಬರ್ಟ್ ಸಿನಿಮಾ ಲೀಕ್ ಆಗಿದೆ. ದುರದೃಷ್ಟವಶಾತ್, ಹಠಾತ್ ಲೀಕ್‌ನಿಂದಾಗಿ ಚಿತ್ರದ ಬಾಕ್ಸ್‌ ಆಫೀಸ್ ಕಲೆಕ್ಷನ್ ಸಂಗ್ರಹದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಸಂತೋಷ್ ಥಿಯೇಟರ್‌ ವಿಸಿಟ್ ಮಾಡಿದ್ರಾ ದರ್ಶನ್ ?

ರಿಲೀಸ್ ಆದ ಮೊದಲ ದಿನವೇ ಬಿಗ್ ಸಕ್ಸಸ್ ಭರವಸೆ ಮೂಡಿಸಿರುವ ಸಿನಿಮಾಗೆ ಪೈರಸಿ ಕಾಟ ತಪ್ಪಿಲ್ಲ. ಇತ್ತೀಚೆಗಷ್ಟೇ ನಟ, ನಿರ್ದೇಶಕ ರಿಷಭ್ ಶೆಟ್ಟಿ ಪೈರಸಿ ಕಾಟದ ಬಗ್ಗೆ ಮಾತನಾಡಿದ್ದರು.