Rishab Shetty: ತುಳುನಾಡ ಸಂಸ್ಕೃತಿಯ 'ಕಾಂತಾರ' ಟೀಸರ್‌ 15 ಲಕ್ಷ ವೀಕ್ಷಣೆ

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ತನ್ನ ದೃಶ್ಯ ವೈಭವದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹೊಂಬಾಳೆ ಫಿಲಂನ ವಿಜಯ್‌ ಕಿರಗಂದೂರು ನಿರ್ಮಿಸಿರುವ ಈ ಚಿತ್ರದ ಟೀಸರ್‌ ‘ಕೆಜಿಎಫ್‌ 2’ ಅಬ್ಬರದ ನಡುವೆಯೂ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆ ದಾಖಲಿಸಿದೆ.

Rishab Shetty Starrer Kannada Movie Kantara Teaser Released gvd

ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ (Kantara) ಚಿತ್ರ ತನ್ನ ದೃಶ್ಯ ವೈಭವದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹೊಂಬಾಳೆ ಫಿಲಂನ ವಿಜಯ್‌ ಕಿರಗಂದೂರು (Vijay Kiragandur) ನಿರ್ಮಿಸಿರುವ ಈ ಚಿತ್ರದ ಟೀಸರ್‌ ‘ಕೆಜಿಎಫ್‌ 2’ (KGF 2) ಅಬ್ಬರದ ನಡುವೆಯೂ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆ ದಾಖಲಿಸಿದೆ. ರಾಜ್ಯದ ಪ್ರೇಕ್ಷಕರು ಮಾತ್ರವಲ್ಲ, ಹೊರ ರಾಜ್ಯದ ಪ್ರೇಕ್ಷಕರೂ ಟೀಸರ್‌ ಅನ್ನು ಮನಸಾರೆ ಮೆಚ್ಚಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮಾಡಿದ್ದಾರೆ. ತುಳುನಾಡ ಸಂಸ್ಕೃತಿಯನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ರಿಷಬ್‌ ಸಹಜ ನಟನೆ, ಅರವಿಂದ ಕಶ್ಯಪ್‌ ಅವರ ಸಿನಿಮಾಟೋಗ್ರಫಿ, ರಾಜ್‌ ಬಿ ಶೆಟ್ಟಿ ಅವರ ಕೊರಿಯೋಗ್ರಫಿ, ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ, ಟೀಸರ್‌ನಲ್ಲೇ ಗಮನ ಸೆಳೆಯುವಂತಿದೆ.

ಕಾಂತಾರ ಎಂದರೆ ದಟ್ಟ ಅಡವಿ ಎಂದರ್ಥ. ಕಠಿಣ ದಾರಿ ಎಂಬ ಅರ್ಥವೂ ಉಂಟು. ಅಡವಿ ನಿಗೂಢತೆಯನ್ನು ತನ್ನೊಗಿಟ್ಟುಕೊಂಡಿರುತ್ತದೆ. ಅದೇ ಥರ ಕಾಂತಾರ ಕೂಡ ನಿಗೂಢತೆಯನ್ನು ತನ್ನೊಳಗೆ ಇಟ್ಟುಕೊಂಡಿರುವ ಕತೆ ಅನ್ನುವುದು ರಿಷಬ್‌ ಶೆಟ್ಟಿ ಮಾತು. ಅರಣ್ಯ ಮತ್ತು ಮಾನವನ ನಡುವಿನ ಸಂಘರ್ಷದ ಕಥಾ ಹಂದರ ಹೊಂದಿರುವ ಸಿನಿಮಾ ಇದು. ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರಿನಲ್ಲಿ ಅರಣ್ಯವನ್ನು ಧರಿಸಿರುವ ದೈವದ ಕಾಲು, ಕಾಡ್ಗಿಚ್ಚು, ಕೋಣ ಓಡಿಸುತ್ತಿರುವ ತರುಣ, ದಿಕ್ಕೆಟ್ಟು ಹೋಗುತ್ತಿರುವ ಹಂದಿಗಳು ಕಾಣಿಸಿಕೊಳ್ಳುತ್ತವೆ. ಆ ಪ್ರಕಾರ ಹೇಳುವುದಾದರೆ ಈ ಸಿನಿಮಾದಲ್ಲಿ ದಕ್ಷಿಣ ಕನ್ನಡದ ಸಂಸ್ಕೃತಿ, ಸಂಪ್ರದಾಯವನ್ನು ಕಾಡುವಂತೆ ಚಿತ್ರಿಸಲಾಗುತ್ತದೆ.

ಬೆಂಗಳೂರು ಸಿನಿಮೋತ್ಸವದಲ್ಲಿ ಪೆದ್ರೋ ಕಡೆಗಣನೆ: ರಿಷಬ್ ಶೆಟ್ಟಿ ಆರೋಪ

ನಿರ್ದೇಶಕ ರಿಷಬ್‌ ಶೆಟ್ಟಿ ಆ ಮಾತನ್ನು ಅನುಮೋದಿಸುತ್ತಲೇ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಾರೆ. ‘ಎರಡು ವರ್ಷದ ಹಿಂದಿನಿಂದಲೂ ಹೊಂಬಾಳೆ ಫಿಲಂಸ್‌ಗೆ ಸಿನಿಮಾ ಮಾಡುವ ಮಾತುಕತೆ ನಡೆಯುತ್ತಿತ್ತು. ಆದರೆ ಒಂದು ಒಳ್ಳೆಯ ಕತೆ ಬೇಕಿತ್ತು. ಈ ಸಲ ಲಾಕ್‌ಡೌನ್‌ ಸಂದರ್ಭ ಊರಿಗೆ ಹೋದಾಗ ಈ ಕತೆ ಬರೆದೆ. ನನ್ನ ಊರು ಕುಂದಾಪುರದ ಕೆರಾಡಿಯಲ್ಲಿ ಬಹುತೇಕ ಚಿತ್ರೀಕರಣ ನಡೆಯುತ್ತದೆ. ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಹೊರತಾಗಿ ಕಿಶೋರ್‌, ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

'ಪೆದ್ರೋ' ಸಿನಿಮಾ ಆಯ್ಕೆಯಾಗದ್ದಕ್ಕೆ ನಟ ರಿಷಬ್‌, ನಟೇಶ್‌ ಬೇಸರ: ‘ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ’ಕ್ಕೆ (Bengaluru International Film Festival) ರಿಷಬ್‌ ಶೆಟ್ಟಿ (Rishab Shetty) ನಿರ್ಮಾಣದ, ನಟೇಶ್‌ ಹೆಗ್ಡೆ (Natesh Hegde) ನಿರ್ದೇಶನದ ‘ಪೆದ್ರೋ’ (Pedro) ಸಿನಿಮಾ ಆಯ್ಕೆಯಾಗದ ಕಾರಣಕ್ಕೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ‘ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ವಿಮರ್ಶಕರಿಂದ ಮೆಚ್ಚುಗೆ ಪಡೆದ ಪೆದ್ರೋ ಚಿತ್ರ ಬೆಂಗಳೂರು ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ’ ಎಂದು ರಿಷಬ್‌ ಶೆಟ್ಟಿ ಪತ್ರದ (Letter) ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿಗೆ ಹೆಣ್ಣು ಮಗ ಜನನ!

ಈ ಕುರಿತು ನಿರ್ದೇಶಕ ನಟೇಶ್‌ ಹೆಗ್ಡೆಯವರು, ‘ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ (Sunil Puranik) ಅವರು ಪತ್ರಿಕಾ ಹೇಳಿಕೆಯೊಂದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಂಶ ಚಿತ್ರದಲ್ಲಿದೆ ಎಂದು ಹೇಳಿದ್ದಾರೆ. ಅದನ್ನು ಓದಿ ನನಗೆ ಬಹಳ ಬೇಸರವಾಗಿದೆ ಎಂದು ಹೇಳಿದ್ದಾರೆ. ಚಿತ್ರತಂಡದ ಆಕ್ಷೇಪಕ್ಕೆ ಸ್ಪಷ್ಟನೆ ಪಡೆಯಲು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಅವರನ್ನು ಸಂಪರ್ಕಿಸಿದಾಗ ‘ಈ ವಿವಾದ ಅಗತ್ಯವಿರಲಿಲ್ಲ. ಮೊದಲನೆಯದಾಗಿ ನಾನು ಪೆದ್ರೋ ಸಿನಿಮಾ ನೋಡಿಲ್ಲ. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಂಶವಿದೆ ಎಂಬ ಮಾತನ್ನು ನಾನು ಎಲ್ಲಿಯೂ ಹೇಳಿಲ್ಲ. ಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಆಯ್ಕೆ ಮಾಡುವುದು ತೀರ್ಪುಗಾರರು. ಅವರಿಗೆ ಕೆಲವು ಗೈಡ್‌ಲೈನ್ಸ್‌ ಇರುತ್ತದೆ. ಸಿನಿಮಾ ಆಯ್ಕೆ ತೀರ್ಪುಗಾರರ ನಿರ್ಧಾರ. ಆದಾಗ್ಯೂ ಅವರ ತಂಡಕ್ಕೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಅದಕ್ಕೂ ಮೀರಿ ತೇಜೋವಧೆಗೆ ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಆಲೋಚನೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.
 

Latest Videos
Follow Us:
Download App:
  • android
  • ios