Asianet Suvarna News Asianet Suvarna News

ಟಿವಿಯಿಲ್ಲಿ ಬರ್ತಿದೆ ರಿಷಬ್ ಶೆಟ್ಟಿಯ ಡಿವೈನ್ ಬ್ಲಾಕ್‌ಬಸ್ಟರ್ 'ಕಾಂತಾರ'; ಯಾವ ಡೇಟ್, ಎಷ್ಟೊತ್ತಿಗೆ?

ಸಂಕ್ರಾಂತಿ ಹಬ್ಬಕ್ಕೆ ಕಾಂತಾರ ರಿಲೀಸ್. ಡಿವೈನ್ ಸ್ಟೋರಿ ನೋಡಲು ರೆಡಿಯಾದ ಸಿನಿ ರಸಿಕರು....

Rishab Shetty Sapthami gowda Kanatara film release on TV Januray 15 Star Suvarna vcs
Author
First Published Jan 9, 2023, 9:52 AM IST

ಡಿಫರೆಂಟ್ ಡೈರೆಕ್ಟರ್‌ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮತ್ತು ಬೋಲ್ಡ್‌ ಹುಡುಗಿ ಸಪ್ತಮಿ ಗೌಡ ಅಭಿನಯಿಸಿರುವ ಕಾಂತಾರ ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜನವರಿ 8ರಂದು ಕಾಂತಾರ ಸಿನಿಮಾ 100 ದಿನ ಬ್ಲಾಕ್‌ ಬಸ್ಟರ್ ಗ್ರ್ಯಾಂಡ್ ಹಿಟ್ ಪೂರೈಸಿದೆ. ಸಾಮಾಜಿಕ ಜಾಲತಾಣದ ಮೂಲಕ ಸಿನಿಮಾ ಯಶಸ್ಸಿಗೆ ಬೆಂಬಲವಾದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಥಿಯೇಟರ್ ರಿಲೀಸ್ ನಂತರ ಓಟಿಟಿಯಲ್ಲಿ ಕಾಂತಾರ ರಿಲೀಸ್ ಆಯ್ತು ಈಗ ಟಿವಿ ಪ್ರಸಾರಕ್ಕೆ ಸಜ್ಜಾಗಿದೆ. 

ಹೌದು! ಜನವರಿ 15ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಕಾಂತಾರ ಸಿನಿಮಾ ಪ್ರಸಾರವಾಗಲಿದೆ. ಸಂಕ್ರಾಂತಿ ಹಬ್ಬದ ದಿನ ಈ ಸಿನಿಮಾವನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಎರಡು ಮೂರು ಸಲ ಸಿನಿಮಾ ನೋಡಿದವರು ಕೂಡ ಮೊದಲ ಸಲ ನೋಡುತ್ತಿರುವ ಹಾಗೆ ಟಿವಿ ರಿಲೀಸ್‌ಗೆ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಕಾಂತಾರ ಕ್ರೇಜ್ ಕಡಿಮೆ ಆಗಿಲ್ಲ ಎನ್ನಬಹುದು. ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕಾಂತಾರ ಸಿನಿಮಾ 500- 600 ಕೋಟಿ ಕಲೆಕ್ಷನ್ ಮಾಡಿದೆ. ಸೆಪ್ಟೆಂಬರ್ 30ರಂದು ಕನ್ನಡ ಭಾಷೆಯಲ್ಲಿ, ಅಕ್ಟೋಬರ್ 14ರಂದು ಹಿಂದಿ ಭಾಷೆಯಲ್ಲಿ ಹೀಗೆ ಒಂದೊಂದು ತಿಂಗಳು ಸಮಯದಲ್ಲಿ ಸಿನಿಮಾ ಬಹುತೇಕ ಭಾಷೆಗಳಲ್ಲಿ ರಿಲೀಸ್ ಕಂಡಿತ್ತು. 

ಕಾಂತಾರ 2 ಬರುತ್ತಾ:

ಕಾಂತಾರ ಸಿನಿಮಾ ಹಿಟ್ ಆದಾ ಬೆನ್ನಲ್ಲೇ ಭಾಗ 2 ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ವತಃ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್‌ನ ಸಹಸಂಸ್ಥಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ. ನಟ ರಿಷಬ್‌ ಶೆಟ್ಟಿನಟಿಸಿ ನಿರ್ದೇಶಿಸಿದ್ದ ಸೂಪರ್‌ ಹಿಟ್‌ ಚಲನಚಿತ್ರ ‘ಕಾಂತಾರ’ದ ಎರಡನೇ ಭಾಗ ‘ಕಾಂತಾರ 2’ ತರಲು ಕಥೆ ಅಭಿವೃದ್ಧಿಪಡಿಸಲಾಗುವುದು. ಚಿತ್ರ ನಿರ್ಮಾಣದ ಯೋಜನೆ ಇದೆ. ಕಾಲಮಿತಿ ಇಲ್ಲ.ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಬ್ಯಾನರ್‌ ಸಂಭ್ರಮದಲ್ಲಿದೆ. ಶೀಘ್ರದಲ್ಲೇ ಚಿತ್ರ ಕಥೆಯ ಪೂರ್ವ ಅಥವಾ ಮುಂದುವರಿದ ಭಾಗದ ಕುರಿತು ಕಥೆ ಸಿದ್ಧಪಡಿಸಲಾಗುವುದು.ಈ ಹಿಂದೆಯೂ ಕಾಂತಾರ 2 ಕುರಿತು ರಿಷಬ್‌ ಮಾತನಾಡಿದ್ದರು. 'ಕಾಂತಾರ 2 ಸಿನಿಮಾ ಮಾಡುವ ಯೋಜನೆ ಇಲ್ಲ ಆದರೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ನಾವು ಯಾವ ಮಾಹಿತಿ ನೀಡಿಲ್ಲ ಆದರೆ ಜನರೇ ಕಾಂತಾರ 2 ಕಾಂತಾರ 2 ಎನ್ನುತ್ತಿದ್ದಾರೆ' ಎಂದಿದ್ದಾರೆ. 

Rishab Shetty Sapthami gowda Kanatara film release on TV Januray 15 Star Suvarna vcs

ದೈವ ಅನುಮತಿ ಸಿಕ್ಕಿದ್ಯಾ?

ಕೆಲವು ತಿಂಗಳುಗಳ ಹಿಂದೆ ಕಾಂತಾರ 2ನೇ ಭಾಗ ಸಿನಿಮಾ ಮಾಡಲು ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದೈವ ಅನುಮತಿ ಪಡೆಯಲು ಅಣ್ಣಪ್ಪ ಸಂಜುರ್ಲಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. 'ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ' ಎಂದು ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ. 

ಪ್ರಶಾಂತ್‌ 'ರಿಷಬ್‌ ಶೆಟ್ಟಿ'ಯಾಗಿ ಬದಲಾಗಿದ್ದು ಹೇಗೆ? : ಇದು ನಿಮಗೆ ಗೊತ್ತಿರದ ಸೀಕ್ರೆಟ್

ರಿಷಬ್‌ ಶೆಟ್ಟಿಗೆ  ಸಿದ್ಧಶ್ರೀ ಪ್ರಶಸ್ತಿ:

ಜಿಡಗಾ, ಮುಗುಳಖೋಡದ ಮುರುಘರಾಜೇಂದ್ರ ಮಹಾಸ್ವಾಮಿಗಳ ಗುರುವಂದನ ಕಾರ್ಯಕ್ರಮದಲ್ಲಿ ನಡೆದ ಸಮಾರಂಭದಲ್ಲಿ ರಿಷಬ್‌ ಶೆಟ್ಟಿಯವರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯ್ತು. 1 ಲಕ್ಷ ರು ನಗದು ಹಣ, 2 ತೊಲೆ ಬಂಗಾರ ಸದರಿ ಪುರಸ್ಕಾರ ಒಳಗೊಂಡಿದೆ.ಡಾ. ಮುರುಘರಾಜೇಂದ್ರ ಸ್ವಾಮಿಗಳು, ದಾಸೋಹ ಪೀಠದ 9 ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ, ಹಾರಕೂಡ ಶ್ರೀಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದು ರಿಷಬ್‌ ಶೆಟ್ಟಿಯವರಿಗೆ ಆಶಿರ್ವಾದ ಮಾಡಿದರು. 

Follow Us:
Download App:
  • android
  • ios