'ಕಿರಿಕ್ ಪಾರ್ಟಿ' ಸಂಭ್ರಮದಲ್ಲಿ ರಶ್ಮಿಕಾ ಹೆಸರು ಕೈ ಬಿಟ್ಟ ರಿಷಬ್; ಮುಂದುವರೆದ ಇಬ್ಬರ ಕೋಲ್ಡ್ ವಾರ್
ರಿಷಬ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಕೋಲ್ಡ್ ವಾರ್ ಮುಂದುವರೆದಿದೆ.
ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವಿನ ಕೋಲ್ಡ್ ವಾರ್ ಮುಂದುವರೆದಿದೆ. ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೆಸರು ಹೇಳದೆ ಕೇವಲ ಸನ್ನೆ ಮೂಲಕ ಮಾತನಾಡಿದ್ದರು. ರಶ್ಮಿಕಾ ಅವರ ಸನ್ನೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೇ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ತನ್ನ ಚಿತ್ರರಂಗಕ್ಕೆ ಪರಿಚಯಿಸಿದ ಸಂಸ್ಥೆಗೆ ಅವಮಾನ ಮಾಡಿದ್ದಾರೆ ಎಂದು ಕನ್ನಡ ಅಭಿಮಾನಿಗಳು ರಶ್ಮಿಕಾ ವಿರುದ್ಧ ರೊಚ್ಚಿಗೆದ್ದಿದ್ದರು. ಈ ಘಟನೆ ಬಳಿಕ ರಿಷಬ್ ಶೆಟ್ಟಿ ಕೂಡ ರಶ್ಮಿಕಾ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿ ಖಡಕ್ ತಿರುಗೇಟು ನೀಡಿದ್ದರು. ಇಬ್ಬರ ಕೋಲ್ಡ್ ವಾರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಂದಹಾಗೆ ಇಬ್ಬರ ಈ ಶೀತಲ ಸಮರ ಮುಂದುವರೆದಿದೆ.
ಇತ್ತೀಚಿಗಷ್ಟೆ ಕಿರಿಕ್ ಪಾರ್ಟಿ 6 ವರ್ಷ ಪೂರೈಸಿದ ಸಂಭ್ರಮವನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಿರಿಕ್ ಪಾರ್ಟಿಯ ಸಕ್ಸಸ್ ನೆನೆದ ರಿಷಬ್ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ಆದರೆ ರಶ್ಮಿಕಾ ಹೆಸರನ್ನು ಎಲ್ಲಿಯೂ ಹೇಳಲಿಲ್ಲ. ಒಂದಿಷ್ಟು ಪೋಸ್ಟರ್ ಶೇರ್ ಮಾಡಿ ಈ ಸಂಭ್ರಮದ ಭಾಗವಾಗಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ಜೊತೆಗೆ ಸಿನಿಮಾತಂಡದ ಕೆಲವು ಮಂದಿಗೆ ಟ್ಯಾಗ್ ಮಾಡಿದ್ದರು. ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಪರಮ್‌ವಾ ಸ್ಟುಡಿಯೋಗೆ ಟ್ಯಾಗ್ ಮಾಡಿದ್ದರು. ಆದರೆ ರಶ್ಮಿಕಾ ಹೆಸರನ್ನು ಎಲ್ಲಿಯೂ ಹೇಳಿಲ್ಲ. ರಷಬ್ ಹಂಚಿಕೊಂಡ ಪೋಸ್ಟ್ ಅನ್ನೇ ವರಮ್‌ವಾ ಸ್ಟುಡಿಯೋ ಕೂಡ ಶೇರ್ ಮಾಡಿತ್ತು. ರಶ್ಮಿಕಾ ಹೆಸರು ಕೈ ಬಿಡುವ ಮೂಲಕ ಮುನಿಸು ಇನ್ನೂ ಮುಂದುವರೆದೆ ಎನ್ನುವುದನ್ನು ರಿಷಬ್ ಪರೋಕ್ಷವಾಗಿ ಹೇಳಿದ್ದಾರೆ.
ಅಂದಹಾಗೆ ರಶ್ಮಿಕಾ ಕೂಡ ಕಿರಿಕ್ ಪಾರ್ಟಿ 6 ವರ್ಷದ ಸಂಭ್ರಮವನ್ನು ನೆನಪಿಸಿಕೊಂಡಿದ್ದರು. ಮೊದಲ ಚಿತ್ರದ ಪೋಸ್ಟರ್ ಶೇರ್ ಮಾಡಿದ್ದರು. ಆದರೆ ಅವರೂ ಕೂಡ ಯಾರ ಹೆಸರನ್ನು ಟ್ಯಾಗ್ ಮಾಡಿರಲಿಲ್ಲ, ಯಾರನ್ನು ನೆನಪಿಸಿಕೊಂಡಿರಲಿಲ್ಲ. ಪೋಸ್ಟರ್ ಶೇರ್ ಮಾಡಿದ್ದರು ಅಷ್ಟೆ. ಇದನ್ನು ಗಮನಿಸಿದ ಅಭಿಮಾನಿಗಳು ಇಬ್ಬರ ನಡುವೆ ಮುನಿಸು, ಕೋಲ್ಡ್ ವಾರ್ ಮುಂದುವರೆದಿದೆ ಎನ್ನುತ್ತಿದ್ದಾರೆ.
ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ಬೇಕು; ಬಾಲಿವುಡ್ ನಟಿ ಜಾನ್ವಿ ಕಪೂರ್
ಅಂದಹಾಗೆ ರಿಷಬ್ ಪೋಸ್ಟರ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಸಾನ್ವಿ ಜೋಸಫ್ ಪಾತ್ರದಲ್ಲಿ ನಟಿಸಿದ್ದರು. ಸಾನ್ವಿ ಜೋಸಫ್‌ಗೆ ಶ್ರದ್ದಾಂಜಲಿ ಪೋಸ್ಟರ್ ಅನ್ನು ಶೇರ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕಿರಿಕ್ ಪಾರ್ಟಿಯ ಪೇಮಸ್ ಡೈಲಾಗ್ ಇದು ಇದು ಬೇಕಾಗಿರೋದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ರಶ್ಮಿಕಾಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರ ಈ ಕೋಲ್ಡ್ ವಾರ್ ಇನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ.
'ಪ್ರಪಂಚದಾದ್ಯಂತ ಧ್ವನಿ ಕಂಡುಕೊಳ್ಳುತ್ತದೆ';Oscar ರೇಸ್‌ಗೆ ಕಾಂತಾರ ಸಲ್ಲಿಸಿದ ರಿಷಬ್ ಶೆಟ್ಟಿ
ಅಂದಹಾಗೆ ರಿಷಬ್ ಸದ್ಯ ಕಾಂತಾರ ಸಕ್ಸಸ್ ನಲ್ಲಿದ್ದಾರೆ. ಈ ಸಿನಿಮಾ ಬಳಿಕ ರಿಷಬ್ ಇನ್ನೂ ಯಾವುದೇ ಸಿನಿಮಾ ಪ್ರಾರಂಭಿಸಿಲ್ಲ. ಹಾಗಾಗಿ ರಿಷಬ್ ಮುಂದಿನ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಕಾಂತಾರ ದೊಡ್ಡ ಸಕ್ಸಸ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಹಾಗಾಗಿ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳುವ ಸಾಧ್ಯತೆ ಇದೆ.