ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ಬೇಕು; ಬಾಲಿವುಡ್ ನಟಿ ಜಾನ್ವಿ ಕಪೂರ್

ಬಾಲಿವುಡ್ ನಟಿ ಜಾನ್ವಿ ಕಪೂರ್ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಬೇಕೆನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ. 

bollywood Actress Janhvi Kapoor About Kantara and rishab Shetty sgk

ಸ್ಯಾಂಡಲ್ ವುಡ್ ಸ್ಟಾರ್, ಕಾಂತಾರ ಹೀರೋ ರಿಷಬ್ ಶೆಟ್ಟಿ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಅಭಿಮಾನಿಗಳ ಬಳಗ ದುಪ್ಪಟ್ಟಾಗಿದೆ. ಮಾರುಕಟ್ಟೆ ವಿಸ್ತರಿಸಿದೆ. ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಬಾಲಿವುಡ್‌ನ ಅನೇಕ ಮಂದಿ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಅನೇಕರು ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೀಗ ಬಾಲಿವುಡ್‌ನ ಮತ್ತೋರ್ವ ಖ್ಯಾತ ಜಾನ್ವಿ ಕಪೂರ್ ರಿಷಬ್ ಜೊತೆ ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ. 

ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಾನ್ವಿ ಈ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಶೆಟ್ಟಿಯನ್ನು ಹಾಡಿಹೊಗಳಿರುವ ಜಾನ್ವಿ ಕಪೂರ್ ಅವರ ಜೊತೆ ಸಿನಿಮಾ ಮಾಡಬೇಕು ಎಂದಿದ್ದಾರೆ. ರಿಷಬ್ ಶೆಟ್ಟಿಯನ್ನು ತುಂಬಾ ಇಷ್ಟಪಡುತ್ತೇನೆ. ಕಾಂತಾರ ಕೊನೆಯ 30 ನಿಮಿಷಾಗಳು ಅವರು ಏನು ಮಾಡಿದ್ದಾರೆ ಎಂಬುದು ನಿಜಕ್ಕೂ ಗಮನಾರ್ಹವಾಗಿದೆ. ಕಾಂತಾರ ಹೇಗಾಯಿತು ನೋಡಿ. ತುಂಬಾ ವಿಭಿನ್ನವಾಗಿದೆ. ಆ ಸ್ಥಳ, ಸಮುದಾಯ, ಧಾರ್ಮಿಕ ಪದ್ಧತಿ, ಪ್ರತಿಯೊಬ್ಬರೂ ರಿಲೇಟ್ ಆಗಲು ಸಾಧ್ಯವಾಯಿತು. ಏಕೆಂದರೆ ತಮ್ಮ ಪರಿಸರವನ್ನು ಪ್ರಾಮಾಣಿಕವಾಗಿ ಮತ್ತು ನಿಖರವಾಗಿ ಚಿತ್ರಸಿದ್ದಾರೆ' ಎಂದು ಹೇಳಿದ್ದಾರೆ. 

ರಿಷಬ್ ಮಾತ್ರವಲ್ಲದೇ ಜಾನ್ವಿ ಸೌತ್ ಸಿನಿಮಾ ಮಾಡಲು ಆಸಕ್ತರಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸೌತ್ ಕನೆಕ್ಷನ್ ಹೊಂದಿರುವ ನಟಿ ಜಾನ್ವಿ ಹೆಚ್ಚಾಗಿ ಹೈದರಾಬಾದ್‌ನಲ್ಲಿ ಇರುತ್ತಾರೆ. ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಾಗಿ ಹೇಳಿದ ಜಾನ್ವಿ ತೆಲುಗು ಸ್ಟಾರ್‌ಗ ಬಗ್ಗೆಯೂ ಮಾತನಾಡಿದ್ದಾರೆ. ತೆಲುಗು ಸ್ಟಾರ್‌ಗಳಾದ ಅಲ್ಲು ಅರ್ಜುನ್, ಜೂ ಎನ್ ಟಿ ಆರ್ ಜೊತೆ ನಟಿಸಬೇಕೆಂದು ಹೇಳಿದ್ದಾರೆ. ಇನ್ನು ನಿರ್ದೇಶಕರಾದ ಸುಕುಮಾರ್, ಕೊರಟಾಲ ಶಿವ ಜೊತೆ ಕೆಲಸ ಮಾಡುಬೇಕೆಂದು ಹೇಳಿಕೊಂಡರು.ಜೊತೆಗೆ ಫಹಾದ್ ಪಾಸಿಲ್ ತುಂಬಾ ಇಷ್ಟವಾಗುತ್ತಾರೆ ಎಂದು ಹೇಳಿದ್ದಾರೆ. ನಟ ರಿಷಬ್ ಶೆಟ್ಟಿ ಜೊತೆಯೂ ಕೆಲಸ ಮಾಡಬೇಕೆಂದು ಜಾನ್ವಿ ಕಪೂರ್ ಬಹಿರಂಗ ಪಡಿಸಿದ್ದಾರೆ. 

ಶೆಟ್ರೇ ಚೆನ್ನಾಗಿ ನೋಡ್ಕೊಂಡ್ರು ತಾನೆ ಕಿರಿಕ್ ಆಗಿದ್ರೆ ಹೇಳಿ; ಅಭಿಮಾನಿ ಕಾಮೆಂಟ್‌ಗೆ ರಿಷಬ್ ರಿಯಾಕ್ಷನ್ ವೈರಲ್

ಅಂದಹಾಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರಿಗೆ ಹೇಳಿಕಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ. ದೊಡ್ಡ ಮಟ್ಟದ ಗೆಲುವಿಗೆ ಕಾಯುತ್ತಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಮಿಂಚಿರುವ ಜಾನ್ವಿ ನಿರೀಕ್ಷೆಯ ಗೆಲವು ದಾಖಲಿಸಿಲ್ಲ. ಬಾಲಿವುಡ್ ಬಳಿಕ ಸೌತ್ ಕಡೆ ಮುಖ ಮಾಡಲು ಸಜ್ಜಾಗಿರುವ ಜಾನ್ವಿ ಜೂ ಎನ್ ಟಿ ಆರ್ ಮುಂದಿನ ಸಿನಿಮಾಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಈ ಬಗ್ಗೆ ಎನ್ ಟಿ ಆರ್ ಸಿನಿಮಾತಂಡದ ಕಡೆಯಿಂದ ಅಥವಾ ಜಾನ್ವಿ ಕಡೆಯಿಂದ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಜೂ ಎನ್ ಟಿ ಆರ್ ಮುಂದಿನ ಸಿನಿಮಾದಲ್ಲಿ ಜಾನ್ವಿ ನಟಿಸಿದ್ರೂ ಅಚ್ಚರಿ ಏನಿಲ್ಲ. 

ಇದು ಟೈಂ ಪಾಸ್ ಅಷ್ಟೆ, ಮದ್ವೆ ದೊಡ್ಡ ಸ್ಟಾರ್ ಜೊತೆ; ಬಾಯ್‌ಫ್ರೆಂಡ್ ಜೊತೆ ಬಂದ ಜಾನ್ವಿ ಕಾಲೆಳೆದ ನೆಟ್ಟಿಗರು

ಅಂದಹಾಗೆ ತನ್ನ ಆಸೆಯಂತೆ ಜಾನ್ವಿ ಕನ್ನಡದ  ಸ್ಟಾರ್ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ. ಜಾಮ್ವಿ ಬೇಡಿಕೆಯಂತೆ ರಿಷಬ್ ತಮ್ಮ ಮುಂದಿನ ಸಿನಿಮಾಗಳಲ್ಲಿ ಅವಕಾಶ ಕೊಡ್ತಾರಾ ಕಾದು ನೋಡಬೇಕಿದೆ. ಸದ್ಯ ಕಾಂತಾರ ಸಕ್ಸಸ್‌ನಲ್ಲಿರುವ ರಿಷಬ್ ಶೆಟ್ಟಿ ಸಂತಸದಲ್ಲಿರುತ್ತಾರೆ. ಇನ್ನು ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ರಿಷಬ್ ಮುಂದಿನ ಸಿನಿಮಾಗಳ ಮೇಲೆ ಕುತೂಹಲ ಜೊತೆಗೆ ನಿರೀಕ್ಷೆ  ಹೆಚ್ಚಾಗಿದೆ. 

Latest Videos
Follow Us:
Download App:
  • android
  • ios