ಆರ್‌ಆರ್‌ಆರ್‌ ಸಿನಿಮಾ ಆಸ್ಕರ್‌ಗೆ ರೇಸ್‌ ಸೇರಿದ ಬೆನ್ನಲೆ ಕಾಂತಾರ ಸಿನಿಮಾ ಕೂಡ ಎಂಟ್ರಿ. ಮಾಹಿತಿ ಬಿಟ್ಟುಕೊಟ್ಟ ವಿಜಯ್ ಕಿರಗಂದೂರು... 

ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಇದೀಗ ಆಸ್ಕರ್‌ ರೇಸ್‌ ಸೇರುತ್ತಿದೆ ಎಂದು ನಿರ್ಮಾಪಕರಾದ ವಿಜಯ್ ಕಿರಗಂದೂರು ಮಾಹಿತಿ ಕೊಟ್ಟಿದ್ದಾರೆ. ದಿನಕ್ಕೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಕಾಂತಾರ ಸಿನಿಮಾ ಓಟಿಟಿ ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾದ ದಿನದಿಂದ ಇನ್ನು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದೆ. ವಿಶ್ವಾದ್ಯಂತ ಮೆಚ್ಚುಗೆ ಪಡೆದುಕೊಂಡು 500 ಕೋಟಿ ಕೆಲಕ್ಷನ್ ಮಾಡಿದೆ. ರಾಜಮೌಳಿ ಸಿನಿಮಾ ಮಾತ್ರವಲ್ಲ ರಿಷಬ್‌ ಸಿನಿಮಾ ಕೂಡ ಆಸ್ಕರ್‌ ರೇಸ್‌ನಲ್ಲಿದೆ... 

'ಆಸ್ಕರ್‌ ನಾಮಿನೇಷನ್‌ಗೆ ನಾವು ಕಾಂತಾರ ಸಿನಿಮಾವನ್ನು ಸಲ್ಲಿಸಿದ್ದೇವೆ, ನಮ್ಮ ಫಿಂಗರ್ ಕ್ರಸ್‌ ಮಾಡಿಕೊಂಡು ಫೈನಲ್‌ ನಾಮಿನೇಷನ್‌ಗೆ ಕಾಯುತ್ತಿರುವೆವು. ಕಾಂತಾರ ಒಂದು ಕಥೆಯಾಗಿ ತುಂಬಾ ಬೇರೊಂದಿದೆ ಇದರಿಂದ ಪ್ರಪಂಚದಾದ್ಯಂತ ಧ್ವನಿಯನ್ನು ಕಂಡುಕೊಳ್ಳಬಹುದು ಎಂದು ನಾವು ಭಾವಿಸುತ್ತೇವೆ' ಎಂದು ಹೊಂಬಾಳೆ ಫಿಲ್ಮ ಸಹಸಂಸ್ಥಾಪಕರಾದ ವಿಜಯ್ ಕಿರಗಂದೂರು ಇಂಡಿಯಾ ಟು ಡೇ ಸಂದರ್ಶನದಲ್ಲಿ ಹೇಳಿದ್ದಾರೆ. ಕಾಂತಾರ ಚಲನಚಿತ್ರವನ್ನು ಅಕಾಡೆಮಿ ಪ್ರಶಸ್ತಿಗಳಿಗೆ 'For your consideration' ವಿಭಾಗದ ಅಡಿಯಲ್ಲಿ ಕಳುಹಿಸಲಾಗಿದೆ ಎನ್ನಲಾಗಿದೆ. ಈ ಮೂಲಕ ಆಸ್ಕರ್‌ಗೆ ಕಳುಹಿಸುತ್ತಿರುವ ಮೊದಲ ಕನ್ನಡದ ಸಿನಿಮಾ ಇದಾಗಲಿದೆ. 

RRR ಆಸ್ಕರ್:

 ಭಾರತದಾದ್ಯಂತ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದ ಆರ್‌ಆರ್‌ಆರ್‌ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರ ಗಮನ ಸೆಳೆದಿದೆ. ಈ ನಡುವೆ ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಆರ್‌ಆರ್‌ಆರ್ ಐವರು ಆಸ್ಕರ್ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಜನಪ್ರಿಯ ನಿಯತಕಾಲಿಕೆ ಭವಿಷ್ಯ ನುಡಿದಿದೆ. ಈ ಚಿತ್ರದ ಯಶಸ್ಸಿನಿಂದ ಉತ್ತೇಜಿತರಾದ ಎಸ್ಎಸ್ ರಾಜಮೌಳಿ ಅವರು ಆಸ್ಕರ್ ನಾಮನಿರ್ದೇಶನವನ್ನು ಪಡೆಯಲು ಆರ್‌ಆರ್‌ಆರ್‌ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದ್ದಾರೆ, ಇದು ಈ ಚಿತ್ರದ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

Hombale Films ಕಾಂತಾರ 2 ನಿರ್ಮಾಣ ಯೋಜನೆ ಇದೆ ಆದರೆ ಕಾಲಮಿತಿ ಇಲ್ಲ: ವಿಜಯ ಕಿರಗಂದೂರು

ಕಾಂತಾರ ಪರ ಕಂಗನಾ:

ಕಾಂತಾರ ಸಿನಿಮಾವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ ಎಂದು ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಈ ಹಿಂದೆಯೇ ಹೇಳಿದ್ದರು. 'ಮುಂದಿನ ವರ್ಷ,ಕಾಂತಾರ ಸಿನಿಮಾವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ. ಈ ವರ್ಷ ಮುಗಿಯೊದ್ರೊಳಗೆ ಇನ್ನು ಅನೇಕ ಉತ್ತಮ ಸಿನಿಮಾಗಳು ಬರಬಹುದು ಎಂದು ನನಗೆ ತಿಳಿದಿದೆ. ಭಾರತಕ್ಕೆ ಜಾಗತಿಕವಾಗಿ ಸರಿಯಾದ ಪ್ರಾತಿನಿಧ್ಯದ ಅಗತ್ಯವಿದೆ. ಭಾರತವು ಒಂದು ಪವಾಡದಂತೆ. ಕಾಂತಾರ ಜಗತ್ತು ಅನುಭವಿಸಲೇಬೇಕಾದ ಸಿನಿಮಾ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ವೀಕ್ಷಿಸಿ ಹೊರಬಂದ ಕಂಗನಾ ವಿಡಿಯೋ ಮೂಲಕ ಕಾಂತಾರ ಸಿನಿಮಾದ ವಿಮರ್ಶೆ ಮಾಡಿದ್ದಾರೆ. 'ನಾನು ಈಗ ಕುಟುಂಬದ ಜೊತೆ ಕಾಂತಾರ ಸಿನಿಮಾ ನೋಡಿ ಹೊರಬಂದೆ. ನಾನು ಇನ್ನು ಶೇಕ್ ಆಗುತ್ತಿದ್ದೀನಿ. ರಿಷಬ್ ಶೆಟ್ಟಿ ನಿಮಗೆ ಹ್ಯಾಟ್ಸ್ ಆಫ್. ಚಿತ್ರಕಥೆ, ನಿರ್ದೇಶನ, ಆಕ್ಟಿಂಗ್, ಆಕ್ಷನ್ ಅದ್ಭುತ, ನಂಬಲಸಾಧ್ಯ' ಎಂದು ಹೇಳಿದ್ದಾರೆ.

Kantara Effect: ಭೂತಕೋಲ ಕಣ್ಣಾರೆ ನೋಡಲು ಧರ್ಮಸ್ಥಳಕ್ಕೆ ಬರ್ತಾರಂತೆ ನಟ ವಿಶಾಲ್‌!

ಕಾಂತಾರ 2 ಮಾಡ್ತಾರಾ?

‘ನಟ ರಿಷಬ್‌ ಶೆಟ್ಟಿನಟಿಸಿ ನಿರ್ದೇಶಿಸಿದ್ದ ಸೂಪರ್‌ ಹಿಟ್‌ ಚಲನಚಿತ್ರ ‘ಕಾಂತಾರ’ದ ಎರಡನೇ ಭಾಗ ‘ಕಾಂತಾರ 2’ ತರಲು ಕಥೆ ಅಭಿವೃದ್ಧಿಪಡಿಸಲಾಗುವುದು. ಚಿತ್ರ ನಿರ್ಮಾಣದ ಯೋಜನೆ ಇದೆ. ಕಾಲಮಿತಿ ಇಲ್ಲ.ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಬ್ಯಾನರ್‌ ಸಂಭ್ರಮದಲ್ಲಿದೆ. ಶೀಘ್ರದಲ್ಲೇ ಚಿತ್ರ ಕಥೆಯ ಪೂರ್ವ ಅಥವಾ ಮುಂದುವರಿದ ಭಾಗದ ಕುರಿತು ಕಥೆ ಸಿದ್ಧಪಡಿಸಲಾಗುವುದು’ ಎಂದು ಸಹಸಂಸ್ಥಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.