ರಾಮ್‌ಕುಮಾರ್ ಪುತ್ರಿ ಧನ್ಯಾ 'ನಿನ್ನ ಸನಿಹಕೆ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, 'ದಿ ಜಡ್ಜ್‌ಮೆಂಟ್', 'ಪೌಡರ್', 'ಕಾಲಾಪ್ಥರ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ವೃತ್ತಿಜೀವನದ ಮೇಲೆ ಗಮನ ಹರಿಸಿದ್ದು, ಮದುವೆ ಬಗ್ಗೆ ಯೋಚಿಸುತ್ತಿಲ್ಲ. ಕುಟುಂಬಕ್ಕೆ ಹೊಂದಿಕೊಳ್ಳುವ, ಗೌರವ ಕೊಡುವ ವ್ಯಕ್ತಿ ಸಿಕ್ಕರೆ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಚಿತ್ರರಂಗ ಪ್ರವೇಶಕ್ಕೆ ಕುಟುಂಬದವರ, ವಿಶೇಷವಾಗಿ ಪುನೀತ್ ರಾಜ್‌ಕುಮಾರ್ ಬೆಂಬಲ ದೊರೆತಿದೆ ಎಂದಿದ್ದಾರೆ.

ನಟ ರಾಮ್‌ಕುಮಾರ್ ಮತ್ತು ಅಣ್ಣಾವ್ರ ಪುತ್ರಿ ಪೂರ್ಣಿಮಾ ರಾಜ್‌ಕುಮಾರ್ ಮುದ್ದಿನ ಪುತ್ರಿ ಧನ್ಯಾ ರಾಮ್‌ಕುಮಾರ್ 'ನಿನ್ನ ಸನಿಹಕೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಪಿಆರ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಧನ್ಯಾ ಮಾಡಲ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಮೊದಲ ಸಿನಿಮಾ ಸೂಪರ್ ಹಿಟ್ ಆದ ಮೇಲೆ ದಿ ಜಡ್ಜ್‌ಮೆಂಟ್, ಪೌಡರ್ ಹಾಗೂ ಕಾಲಾಪ್ಥರ್ ಸಿನಿಮಾದಲ್ಲಿ ನಟಿಸಿದ್ದರು. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಿಗೆ ರೆಡಿಯಾಗುತ್ತಿರುವ ಧನ್ಯಾ ತಮ್ಮ ಮದುವೆ ಬಗ್ಗೆ ಇರುವ ಆಲೋಚನೆಯನ್ನು ಹಂಚಿಕೊಂಡಿದ್ದಾರೆ.

'ನಂಗೆ ಜೀವನದಲ್ಲಿ ಯಾರಾದರೂ ಇಷ್ಟ ಆದ್ರೆ ಆ ವಿಚಾರವನ್ನು ತಂದೆ ಮತ್ತು ತಾಯಿ ಜೊತೆ ಚರ್ಚೆ ಮಾಡುತ್ತೀನಿ. ನಮ್ಮನ್ನು ಹಾಗೆ ಬೆಳೆಸಿರುವುದು...ಯಾವುದೇ ವಿಚಾರವನ್ನು ಮುಚ್ಚಿಡಬೇಕು ಮಾಡಬೇಕು ಅಂತ ಹೇಳಿಕೊಟ್ಟಿಲ್ಲ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ನಾನು ವೃತ್ತಿ ಜೀವನದ ಬಗ್ಗೆ ಯೋಚನೆ ಮಾಡುತ್ತಿದ್ದೀನಿ ಕೆಲಸದ ಮೇಲೆ ನನ್ನ ಫೋಸಕ್ ಇದೆ. ಈ ದಾರಿಯಲ್ಲಿ ನನಗೆ ಇಷ್ಟ ಆಗುವವರು ಯಾರಾದರೂ ಸಿಕ್ಕರೆ ಅವರಿಗೂ ನನ್ನ ಖಂಡರೆ ಇಷ್ಟ ಇದ್ರೆ ನನಗೆ ಗೌರವ ಕೊಡುವವರು ಆಗಿದ್ದರೆ ಅದನ್ನು ನಾನು ಬೆಳೆಸಿಕೊಂಡು ಹೋಗುತ್ತೀನಿ. ಮದುವೆ ಆಗುವ ಸಮಯದಲ್ಲಿ ಮದುವೆ ಆಗುತ್ತೀನಿ. ನನಗೆ ಗೌರವ ತುಂಬಾನೇ ಮುಖ್ಯ ಏಕೆಂದರೆ ಪ್ರತಿಯೊಬ್ಬರು ಲವ್ ಮಾಡುತ್ತಾರೆ ಆದರೆ ಗೌರವ ಕೊಡುವುದು ತುಂಬಾನೇ ಮುಖ್ಯ. ನನ್ನ ಫ್ಯಾಮಿಲಿಗೆ ಹೊಂದಿಕೊಳ್ಳುವವರು ಆಗಿರಬೇಕು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಧನ್ಯಾ ಮಾತನಡಿದ್ದಾರೆ. 

ಬಾಡಿ ನೇಚರ್, ಹಾರ್ಮೋನ್‌ ಇಂಬ್ಯಾಲೆನ್ಸ್‌.... ಮುಂದೆ ಏನೂ ಗೊತ್ತಿಲ್ಲ ಅವಳಿಗೆ ಒತ್ತಡ ಹಾಕಲ್ಲ: ಮಹಿತಾ ತಾಯಿ ಹೇಳಿಕೆ

'ನಾನು ಇಂಡಸ್ಟ್ರಿಗೆ ಕಾಲಿಟ್ಟಾಗ ಪ್ರತಿಯೊಬ್ಬರೂ ಸಪೋರ್ಟಿವ್ ಆಗಿದ್ದರು. ನಾನು ನಿರೀಕ್ಷೆ ಮಾಡಿರಲಿಲ್ಲ. ಏನ್ ಅಂತಾರೋ ಒಪ್ಪಿಕೊಳ್ಳುವುದಿಲ್ಲ ಅಂದುಕೊಂಡಿದ್ದೆ ಆದರೆ ತಂದೆ ದಿನ ಕಳೆಯುತ್ತಿದ್ದಂತೆ ಒಪ್ಪಿಕೊಂಡರು ಅಮ್ಮ, ಅಂಕಲ್ ಮತ್ತು ಆಂಟಿ ಎಲ್ಲರೂ ಸಪೋರ್ಟ್ ಮಾಡಿದ್ದರು. ನಿನ್ನ ಸನಿಹಕೆ ಸಿನಿಮಾ ಮುಹೂರ್ತದಲ್ಲಿ ಒಬ್ಬರು ಪ್ರಶ್ನೆ ಮಾಡಿದ್ದರು, ನಿಮ್ಮ ಕುಟುಂಬದಿಂದ ಇಂಡಸ್ಟ್ರಿಗೆ ಬರುತ್ತಿರುವ ಮೊದಲ ಹೆಣ್ಣುಮಗಳು ಎಂದು ಆಗ ಅಪ್ಪು ಮಾಮ ಉತ್ತರಿಸಿದ್ದರು. ಈ ವಿಚಾರದಲ್ಲಿ ಏನಿದೆ? ನಾವು ಬೇಧಭಾವ ಮಾಡಬಾರದು. ನಮ್ಮ ಮನೆಯಿಂದ ಮತ್ತೊಬ್ಬರು ಬರುತ್ತಿದ್ದಾರೆ ಅಂತ ಅಪ್ಪು ಮಾಮ ಹೇಳಿದ್ದರು. ಅವರ ಸಪೋರ್ಟ್‌ನಿಂದ ನಾನು ಸುಲಭವಾಗಿ ಕೆಲಸ ಮಾಡಲು ಆಯ್ತು' ಎಂದು ಧನ್ಯಾ ರಾಮ್‌ಕುಮಾರ್ ಹೇಳಿದ್ದಾರೆ. 

ಸುಸ್ತಾಗಿದೆ ರೆಸ್ಟ್‌ ತಗೋ ಅಂತ ಹೇಳೋ ಅಣ್ಣ ಬೇಕಿತ್ತು; ಹುಟ್ಟುಹಬ್ಬದಂದು ಕಣ್ಣೀರಿಟ್ಟ ಅನುಶ್ರೀ