ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಸೋಮವಾರ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ರು. ಈ ಸಮಯದಲ್ಲಿ ಕೊಲೆ ಆರೋಪಿ ದರ್ಶನ್ ಬ್ಯಾರಕ್ ಗೆ ಭೇಟಿ ನೀಡಿದ್ದು ದರ್ಶನ್ ಸಮಸ್ಯೆಗಳ ಬಗ್ಗೆ ವಿಚಾರಿಸಿದ್ದಾರಂತೆ. ಭೇಟಿ ವೇಳೆ ದರ್ಶನ್ ಹೇಳಿದ್ದೇನು? ಈ ಸ್ಟೋರಿ ನೋಡಿ..
ಒಂದು ಕಡೆಗೆ 'ದಿ ಡೆವಿಲ್ (The Devil) ಸಿನಿಮಾ ಥಿಯೇಟರ್ಒಳಗೆ ಪ್ರದರ್ಶನ ಆಗ್ತಿದೆ, ಇನ್ನೊಂದು ನಟ ದರ್ಶನ್‌ಗೆ (Darshan Thoogudeepa) ಟ್ರಯಲ್ ಭೀತಿ ಶುರುವಾಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ಇಂದಿನಿಂದ ಶುರುವಾಗ್ತಾ ಇದ್ದು, ಈಗಾಗ್ಲೇ ಕೊಲೆ ನಡೆದ ಜಾಗವನ್ನ ಪಬ್ಲಿಕ್ ಪ್ರಾಸಿಕ್ಯೂಟರ್ಸ್ ಪರಿಶೀಲನೆ ಮಾಡಿದ್ದಾರೆ. ರೇಣುಕಾಸ್ವಾಮಿ ತಂದೆ-ತಾಯಿ ಕೂಡ ಬಂದು ಕೋರ್ಟ್ಮುಂದೆ ಸಾಕ್ಷಿ ನುಡಿಯಲಿದ್ದಾರೆ.
ಥಿಯೇಟರ್ ನಲ್ಲಿ ಡೆವಿಲ್.. ದಾಸನಿಗೆ ಟ್ರಬಲ್..!
ಯೆಸ್ ದರ್ಶನ್ ನಟನೆಯ ಡೆವಿಲ್ ಸಿನಿಮಾ ಥಿಯೇಟರ್ ಅಂಗಳದಲ್ಲಿ ಸದ್ದು ಮಾಡ್ತಾ ಇರೋದು ಗೊತ್ತೇ ಇದೆ. ಇದರ ನಡುವೆ ದರ್ಶನ್‌ಗೆ ಅಸಲಿ ಟ್ರಬಲ್ ಇಲ್ಲಿಂದ ಶುರುವಾಗಿದೆ. ಯಾಕಂದ್ರೆ ಇಂದಿನಿಂದ ಸೆಷೆನ್ಸ್ ಕೋರ್ಟ್ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ನಡೆಯಲಿದೆ.
ರೇಣುಕಾ ಕೊಲೆ ನಡೆದ ಸ್ಥಳಕ್ಕೆ ಎಸ್ಪಿಪಿ ವಿಸಿಟ್
ಹೌದು ಇಂದಿನಿಂದ ಮರ್ಡರ್ ಕೇಸ್ ಟ್ರಯಲ್ ನಡೆಯಲಿರೋದ್ರಿಂದ ಎಸ್ಪಿಪಿ ಪ್ರಸನ್ನ ಕುಮಾರ್ ಮತ್ತು , ಎಎಸ್ಪಿಪಿ ಸಚಿನ್ ಮಂಗಳವಾರ ಕೊಲೆ ನಡೆದ ಸ್ಥಳಕ್ಕೆ , ಬಾಡಿ ಎಸೆದ ಜಾಗಕ್ಕೆ ವಿಸಿಟ್ ಮಾಡಿದ್ದಾರೆ. ಎಸಿಪಿ ಚಂಚನ್ ಇವರಿಗೆ ಕೊಲೆ ನಡೆದ ಸ್ಥಳ ಮತ್ತು ಘಟನೆ ನಡೆದ ರೀತಿಯನ್ನ ವಿವರಿಸಿದ್ದಾರೆ.
ಹಲ್ಲೆ ನಡೆದ ಶೆಡ್, ಶವ ಎಸೆದ ಮೋರಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ವಿವರ ಪಡೆದಿರೋ ಪ್ಯಾಸಿಕ್ಯೂಷನ್ ಇಂದಿನಿಂದ ಕೋರ್ಟ್ ಎದುರು ವಾದಮಂಡನೆ ಮಾಡಲಿದ್ದಾರೆ. ಕೋರ್ಟ್ ಫ್ರೇಮ್ ಮಾಡಿರೋ ಆರೋಪಗಳನ್ನ ಸಾಬೀತು ಪಡಿಸಲಿದ್ದಾರೆ.
ಕೋರ್ಟ್ಕಟಕಟಗೆ ರೇಣುಕಾ ಪೋಷಕರು
ಹೌದು ಕೊಲೆಯಾದ ರೇಣುಕಾಸ್ವಾಮಿ ತಂದೆ ತಾಯಿಯನ್ನ ಕೂಡ ಈ ಕೇಸ್ನಲ್ಲಿ ಸಾಕ್ಷಿಯನ್ನಾಗಿಸಿದ್ದು, ಇವರುಗಳು ಇಂದು ಕೋರ್ಟ್ ಎದುರು ಮಗನ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡಲಿದ್ದಾರೆ. ಇಂದಿನಿಂದ ಕೋರ್ಟ್ನಲ್ಲಿ ಈ ಕೇಸ್ ವಿಚಾರಣೆ ನಡೆಯಲಿದೆ.
ಡಿಜಿಪಿ ಅಲೋಕ್ ಬಳಿ ದರ್ಶನ್ ಹೇಳಿದ್ದೇನು?
ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಸೋಮವಾರ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ರು. ಈ ಸಮಯದಲ್ಲಿ ಕೊಲೆ ಆರೋಪಿ ದರ್ಶನ್ ಬ್ಯಾರಕ್ ಗೆ ಭೇಟಿ ನೀಡಿದ್ದು ದರ್ಶನ್ ಸಮಸ್ಯೆಗಳ ಬಗ್ಗೆ ವಿಚಾರಿಸಿದ್ದಾರಂತೆ.
ಇತ್ತೀಚಿಗೆ ಡೆವಿಲ್ ರಿಲೀಸ್ಗೂ ಮುನ್ನ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀ ಜೊತೆಗೆ ಮಾತನಾಡಿದ್ರು. ಡೆವಿಲ್ ಒಂದು ಅಗ್ನೀಪರೀಕ್ಷೆ ಆದ್ರೆ ಅದಕ್ಕೂ ದೊಡ್ಡ ಅಗ್ನಿ ಪರೀಕ್ಷೆ ದರ್ಶನ್‌ಗೆ ಇಂದಿನಿಂದ ಶುರುವಾಗ್ತಾ ಇದೆ..! ಈ ಅಗ್ನಿಪರೀಕ್ಷೆಯಲ್ಲಿ ದರ್ಶನ್ ಗೆದ್ದು ಬರಹುದಾ..? ಕಾದುನೋಡಬೇಕಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..


