Asianet Suvarna News Asianet Suvarna News

ಚಿತ್ರಮಂದಿರಗಳಿಗೂ ಕೊರೋನಾ ಕಾಟ; ಪ್ರೇಕ್ಷಕರ ಸಂಖ್ಯೆ ಕುಸಿತ!

ಜಗತ್ತಿನಾದ್ಯಂತ ತೀವ್ರ ಆತಂಕ ಹುಟ್ಟಿಸಿರುವ ಕೊರೋನಾ ವೈರಸ್‌ ಭೀತಿಗೆ ಕನ್ನಡ ಚಿತ್ರೋದ್ಯಮ ಕೂಡ ತತ್ತರಿಸಿದೆ. ವೈರಸ್‌ ಹರಡುವ ಭೀತಿಯ ಬಿಸಿ ಈಗ ಚಿತ್ರಮಂದಿರಗಳಿಗೂ ತಟ್ಟಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳು ಹಾಗೂ ವಿವಿಧ ಮಾಲ್‌ಗಳಲ್ಲಿನ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಒಳ್ಳೆಯ ಚಿತ್ರಗಳಿದ್ದರೂ ಈಗಲ್ಲಿ ಪ್ರೇಕ್ಷಕರೇ ಇಲ್ಲ ಎನ್ನುವ ಸ್ಥಿತಿ ಕಂಡು ಬರುತ್ತಿದೆ.

reduces in audience Covid-19 affects kannada Movie theaters
Author
Bangalore, First Published Mar 10, 2020, 8:54 AM IST

ಮೊದಲೇ ಪ್ರೇಕ್ಷಕರ ಕೊರತೆಯಿಂದ ನಲುಗಿರುವ ರಾಜ್ಯದ ಚಿತ್ರಮಂದಿರಗಳಿಗೆ ಈಗ ಕೊರೋನಾ ವೈರಸ್‌ ಭೀತಿ ಅಪ್ಪಳಿದ್ದು, ಗಾಯದ ಮೇಲೆ ಬರೆ ಎಳೆದಂತಹ ಅನುಭವ ಚಿತ್ರಮಂದಿರಗಳ ಮಾಲೀಕರದ್ದು. ವೈರಸ್‌ ಹರಡುವ ಭೀತಿಯ ಪರಿಣಾಮವಾಗಿ ಬೆಂಗಳೂರಿನ ಕೆ.ಜಿ. ರಸ್ತೆಯ ನರ್ತಕಿ, ಸಂತೋಷ ಹಾಗೂ ಗಾಂಧಿನಗರದ ತ್ರಿವೇಣಿ ಚಿತ್ರಮಂದಿರಗಳಲ್ಲಿ ಸೋಮವಾರ ಬೆಳಗ್ಗೆ ಮತ್ತು ಮಧ್ಯಾಹ್ನದ ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆ ತೀರಾ ಕಡಿಮೆ ಇತ್ತು. ಇದೇ ವಾತಾವರಣ ಬೆಂಗಳೂರಿನ ಮಾಗಡಿ ರಸ್ತೆಯ ವೀರೇಶ್‌ ಹಾಗೂ ರಾಜಾಜಿನಗರದ ನವರಂಗ್‌ ಚಿತ್ರಮಂದಿರಗಳಲ್ಲೂ ಕಂಡು ಬಂತು.

ಕೊರೋನಾ ವೈರಸ್‌ ಭೀತಿ: ಬಣ್ಣದೋಕುಳಿಯಿಂದ ದೂರ ಉಳಿದ ಯುವ ಜನತೆ!

ಸಿನಿಮಾ ಚೆನ್ನಾಗಿದ್ದರೂ ಇವತ್ತು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಭೀತಿಯ ನಡುವೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರಾ? ಮೂರ್ನಾಲ್ಕು ದಿನಗಳಿಂದ ಜನರ ಸಂಖ್ಯೆ ಕಡಿಮೆ ಆಗಿದೆ. ಸಿನಿಮಾ ರಿಲೀಸ್‌ ಮಾಡುವವರು ಎಚ್ಚರ ವಹಿಸಿದರೆ ಸೂಕ್ತ.  - ಉಮೇಶ್‌ ಬಣಕಾರ್‌,ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ

‘ಒಂದೆಡೆ ಪರಭಾಷೆ ಸಿನಿಮಾಗಳ ದಾಳಿ, ಮತ್ತೊಂದೆಡೆ ಮನರಂಜನೆಯ ಪರ್ಯಾಯ ವೇದಿಕೆಗಳ ಪರಿಣಾಮ ಚಿತ್ರಮಂದಿರಗಳ ಪರಿಸ್ಥಿತಿ ಮೊದಲಿನಂತಿಲ್ಲ. ಪ್ರೇಕ್ಷಕರ ಕೊರತೆಯಿಂದಾಗಿ ಈಗಾಗಲೇ ಸಾಕಷ್ಟುಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಕೆಲವು ಮಾಲ್‌ಗಳಾಗಿ ಪರಿವರ್ತನೆಗೊಂಡಿವೆ. ಇಂತಹ ಸಂಕಷ್ಟದ ದಿನಗಳಲ್ಲೀಗ ಕೊರೋನಾ ಭೀತಿ ರಾಜ್ಯದ ಚಿತ್ರಮಂದಿರಗಳಿಗೆ ಆವರಿಸಿದ್ದು ದುರಂತ’ ಎನ್ನುತ್ತಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌.

ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದ್ದು ನಿಜ. ಆದರೆ ಅದು ಕೊರೋನಾ ಭೀತಿಯಿಂದಲೇ ಆಗಿದ್ದಾ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೂ ಕಮ್ಮಿ ಸಂಖ್ಯೆಯಲ್ಲಿ ಶೇಕಡಾ 5ರಷ್ಟುಜನ ಕೊರೋನಾ ಭೀತಿಯಿಂದಲೇ ಚಿತ್ರಮಂದಿರಕ್ಕೆ ಬಂದಿಲ್ಲ ಎನ್ನುವುದು ಹೌದು. ಸದ್ಯದ ಜನರ ಅನಿಸಿಕೆ ಹಾಗೆಯೇ ಇದೆ.ಕೆ.ವಿ. ಚಂದ್ರಶೇಖರ್‌,ವೀರೇಶ್‌ ಚಿತ್ರಮಂದಿರದ ಮಾಲೀಕರು

ಕೇವಲ ಚಿತ್ರಮಂದಿರಗಳಿಗೆ ಮಾತ್ರವಲ್ಲ, ಕೊರೋನಾ ಭಯ ಮಲ್ಟಿಪ್ಲೆಕ್ಸ್‌ಗಳಿಗೂ ಆವರಿಸಿದೆ. ಒರಾಯನ್‌ ಮಾಲ್‌, ಮಂತ್ರಿ ಸ್ಕೆ$್ವೕರ್‌, ಪಿವಿಆರ್‌, ಐನಾಕ್ಸ್‌ ಸೇರಿದಂತೆ ವಿವಿಧೆಡೆಗಳಲ್ಲಿನ ಮಲ್ಟಿಪ್ಲೆಕ್ಸ್‌ಗಳಲ್ಲೂ ಪ್ರೇಕ್ಷಕರ ಸಂಖ್ಯೆ ಕುಸಿದಿರುವುದನ್ನು ಮಲ್ಟಿಪ್ಲೆಕ್ಸ್‌ ಮೂಲಗಳೇ ಖಚಿತಪಡಿಸಿವೆ.

ಬೆಂಗಳೂರಲ್ಲಿ ರಸ್ತೆಬದಿ ತೆರೆದ ಆಹಾರ ಮಾರಾಟಕ್ಕೆ ಬ್ರೇಕ್‌

ಸಿನಿಮಾ ಪ್ರದರ್ಶನಕ್ಕೆ ಸಣ್ಣ ಪ್ರಮಾಣದಲ್ಲಿ ಕೊರೋನಾ ಎಫೆಕ್ಟ್ ಆಗಿದ್ದು ನಿಜ. ಭಯದಿಂದ ಜನ ಥಿಯೇಟರ್‌ಗೆ ಬರ್ತಿಲ್ಲ. ಮೂರ್ನಾಲ್ಕು ದಿನದಿಂದ ಹಾಗೆ ಆಗಿದೆ.- ಜ್ಯೋತಿ,ವ್ಯವಸ್ಥಾಪಕರು, ಜಿಟಿ ಮಾಲ್‌

Follow Us:
Download App:
  • android
  • ios