Asianet Suvarna News Asianet Suvarna News

ಕೊರೋನಾ ವೈರಸ್‌ ಭೀತಿ: ಬಣ್ಣದೋಕುಳಿಯಿಂದ ದೂರ ಉಳಿದ ಯುವ ಜನತೆ!

ಕೊರೋನಾ ಭೀತಿ: ಹೋಳಿ ಆಚರಣೆ ರದ್ದು| ಕೆಲವೆಡೆ ಮಾತ್ರ ನೈಸರ್ಗಿಕ ಬಣ್ಣ ಬಳಸಿ ಹೋಳಿ ಆಚರಣೆ| ರಸ್ತೆ, ಗಲ್ಲಿಗಳಲ್ಲಿ ಕಾಣುತ್ತಿದ್ದ ಸಂಭ್ರಮ ಮಾಯ| ಹೋಟೆಲ್‌, ಪಬ್‌ಗಳಲ್ಲಿ ಆಯೋಜಿಸಿದ್ದ ಪೂಲ್‌ ಪಾರ್ಟಿಗೆ ನಗರ ನಿರುತ್ಸಾಹ| 

Youth Did Not Celebrate Holi Festival in Bengaluru for specter of Coronavirus
Author
Bengaluru, First Published Mar 10, 2020, 8:44 AM IST

ಬೆಂಗಳೂರು(ಮಾ.10): ವಿಶ್ವದೆಲ್ಲೆಡೆ ಸಂಚಲನ ಸೃಷ್ಟಿಸಿರುವ ಕೊರೋನಾ ವೈರಸ್‌ ಬಿಸಿ ‘ಹೋಳಿ ಹುಣ್ಣಿಮೆ ಹಬ್ಬ’ ಆಚರಣೆಗೂ ತಟ್ಟಿದೆ. ಸೋಂಕು ಹರಡುವ ಭೀತಿಯಿಂದಾಗಿ ಈ ವರ್ಷ ಜನತೆ ಹೋಳಿ ಆಚರಣೆಯಿಂದ ದೂರ ಸರಿದಿದ್ದಾರೆ.

ಪ್ರತಿ ವರ್ಷ ಬಣ್ಣದ ಹಬ್ಬ ಆಚರಿಸುತ್ತಿದ್ದ ರಾಜಧಾನಿಯ ಜನರು ಬಣ್ಣದೋಕುಳಿಯಲ್ಲಿ ಮಿಂದೇಳುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಸೋಂಕು ಹರಡುವ ಭೀತಿಯಿಂದ ಹಬ್ಬ ಆಚರಣೆಗೆ ಮಂಕು ಕವಿದಿತ್ತು. ಮಕ್ಕಳು, ಯುವಕರು, ಮಹಿಳೆಯರು ಸಡಗರ ಸಂಭ್ರಮದ ಹೋಳಿ ಆಚರಣೆಗೆ ಇಳಿದಿರಲಿಲ್ಲ. ಆದರೆ, ಕೆಲವೆಡೆ ಮಾತ್ರ ನೈಸರ್ಗಿಕ ಬಣ್ಣ ಬಳಸಿ ಹೋಳಿ ಆಚರಿಸಲಾಗಿದೆ. ಹೋಳಿ ಹಬ್ಬದಲ್ಲಿ ರಸ್ತೆಗಳು, ಗಲ್ಲಿ ಗಲ್ಲಿಗಳಲ್ಲೂ ಕಾಣುತ್ತಿದ್ದ ಸಂಭ್ರಮ ಮಾಯವಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಹೋಳಿ ಕಾರ್ಯಕ್ರಮವು ಹಲವು ವಿಶೇಷತೆಗಳಿಂದ ಕೂಡಿರುತ್ತದೆ. ಒಳಾಂಗಣ ಮತ್ತು ಹೊರಾಂಗಣ ಆಟಗಳಂತಹ ಹಲವಾರು ಪಾರ್ಟಿಗಳು ಸಜ್ಜುಗೊಳ್ಳುತ್ತವೆ. ಕಲಾತ್ಮಕ ಪ್ರದರ್ಶನದೊಂದಿಗೆ ಮೋಜು ಮಸ್ತಿಯೊಂದಿಗೆ ಹೋಳಿ ಆಚರಿಸಲಾಗುತ್ತದೆ. ಕೆಲವೆಡೆ ಜನರು ಬೀದಿಗಿಳಿದು ಆಚರಣೆಯಲ್ಲಿ ತೊಡಗುತ್ತಾರೆ. ಮತ್ತೆ ಕೆಲವೆಡೆ ಸಾಂಪ್ರದಾಯಿಕವಾಗಿ ಬಣ್ಣಗಳನ್ನು ಹಚ್ಚಿಕೊಂಡು ಹಬ್ಬ ಆಚರಿಸುತ್ತಾರೆ. ಉದ್ಯಾನವನಗಳು, ಕಾಲೇಜು ಹೊರ ಪ್ರದೇಶಗಳಲ್ಲಿ ಬಣ್ಣಗಳ ಲೋಕವೇ ಅನಾವರಣಗೊಳ್ಳುತ್ತದೆ. ಆದರೆ, ಈ ವರ್ಷ ಇದಕ್ಕೆಲ್ಲ ಬ್ರೇಕ್‌ ಬಿದ್ದಿದೆ.

ಹಿಂದಿನ ವರ್ಷದಂತೆ ಈ ಬಾರಿಯೂ ನಗರದ ಹಲವು ಸ್ಥಳಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು, ಸ್ಟಾರ್‌ ಹೋಟೆಲ್‌ಗಳು, ಪಬ್‌, ರೆಸ್ಟೋರೆಂಟ್‌ಗಳಲ್ಲಿ ಹೋಳಿ ಹಬ್ಬಕ್ಕಾಗಿ ಪೂಲ್‌ ಪಾರ್ಟಿ, ರೈನ್‌ ಡ್ಯಾನ್ಸ್‌ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಆದರೆ, ಹಿಂದಿನ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಬಣ್ಣಗಳ ಹಬ್ಬದ ಕುರಿತು ಯಾರಲ್ಲೂ ಉತ್ಸುಕತೆಯೂ ಕಂಡುಬರಲಿಲ್ಲ. ಶಾಲಾ-ಕಾಲೇಜುಗಳು ಸಹ ಎಂದಿನಂತೆ ನಡೆದವು.

ಇನ್ನು ಪಿಯುಸಿ ಪರೀಕ್ಷೆಯೂ ಇರುವುದರಿಂದ ಕೆಲ ವಿದ್ಯಾರ್ಥಿಗಳು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ವಸತಿ ಪ್ರದೇಶಗಳ ಪ್ರಮುಖ ಬೀದಿಗಳಲ್ಲಿ ಪೊಲೀಸರು ವಿಶೇಷ ಗಸ್ತು ತಿರುಗುತ್ತಿದ್ದು, ರಸ್ತೆ ಮಧ್ಯೆ ಸಂಭ್ರಮಾಚರಣೆ, ಗುಂಪು ಸೇರಿ ಜನಸಾಮಾನ್ಯರಿಗೆ ಬಣ್ಣ ಎರಚಲು ಮುಂದಾಗುವುದನ್ನು ತಡೆಯುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂತು.
 

Follow Us:
Download App:
  • android
  • ios