'ಇದಕ್ಕಿಂತ ದೊಡ್ಡ ಊಟ ಮಾಡಲು ಸಾಧ್ಯವೇ' ಎಂದು ಕೇಳಿದರಂತೆ ನಾಗರಾಜ್. ಅದಕ್ಕೆ'ಫಟ್' ಅಂತ ಹೊಡೆದರಂತೆ ಅಂಬರೀಷ್. 'ನನಗೆ ಎಲ್ಲರೂ ಒಂದೇ, ಅವರು ಇವರು ಅನ್ನೋ ಬೇಧವೇ ಇಲ್ಲ' ಎಂದು ಅಂಬಿ ಹೇಳಿದರಂತೆ. ಏನೇ ಮಾಡಿದರೂ ಓಪನ್ ಆಗಿ ಮಾಡಬೇಕು ಎಂಬುದು ಅಂಬಿ ಸೂಚನೆ. ಈ ಸ್ಟೋರಿ ನೋಡಿ..

ಅಂಬರೀಷ್ ಸೀಕ್ರೆಟ್ ರಿವೀಲ್

ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದ ನಟ ಅಂಬರೀಷ್ (Ambareesh) ಬಗ್ಗೆ ಬಹುತೇಕರಿಗೆ ಹೇಳಬೇಕಾಗಿಲ್ಲ. 'ಮಂಡ್ಯದ ಗಂಡು' ಎಂದೇ ಫೇಮಸ್‌ ಆಗಿರುವ ನಟ ಅಂಬರೀಷ್ ತಮ್ಮ ಜೀವಿತಾವಧಿಯಲ್ಲಿ 'ಕೊಡುಗೈ ದಾನಿ' ಎಂದೇ ಖ್ಯಾತಿ ಗಳಿಸಿದ್ದವರು. ಸಿನಿಮಾರಂಗದಲ್ಲೂ ಅಷ್ಟೇ, ಹಲವು ನಿರ್ಮಾಪಕರು ಕಷ್ಟದಲ್ಲಿದ್ದಾಗ ಅವರು ಸಹಾಯ ಮಾಡಿದ್ದರು ಎಂಬ ಮಾತಿದೆ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ವಟರ ನಟನೆ ಗಮನ ಸೆಳೆದಿವೆ.

ಆದರೆ, ಅದೊಂದು ಸಂಗತಿ ಮಾತ್ರ ಅವರ ವಿಷಯದಲ್ಲಿ ಅವರು ನಿಧನರಾದ ಬಳಿಕ ಕೂಡ ವೈರಲ್ ಆಗುತ್ತಲೇ ಇದೆ. ಅದು ಅವರ ಊಟದ ಶೈಲಿ.. ಹೌದು, ಅದು ತುಂಬಾ ಭಿನ್ನವಾಗಿರುತ್ತಿತ್ತು ಎಂದು ಹಲವರು ಹೇಳಿದ್ದಾರೆ. ಈ ಬಗ್ಗೆ ನಟ ಮೈಕೋ ನಾಗರಾಜ್ ಅವರು 'ಕಲಾ ಮಾಧ್ಯಮಕ್ಕೆ' ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. ಅಂಬರೀಷ್ ಅವರ ಆಹಾರ ಕ್ರಮದ ಅಚ್ಚರಿ ವಿಷಯ ಹಂಚಿಕೊಂಡಿದ್ದ ಮೈಕೋ ನಾಗರಾಜ್, ಅಂಬಿಗೆ ಸಂಬಂಧಪಟ್ಟು ಒಂದು ಮಹಿಳೆಯ ಬಗ್ಗೆ ಕೂಡ ಮಾತನಾಡಿದ್ದರು.

'ಅಂಬರೀಷ್ ಅವರು ಆಹಾರದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಆ ಪ್ರೀತಿಯನ್ನು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದರು. ಅದರಲ್ಲೂ ಬಾಡೂಟ ಎಂದರೆ ಅವರಿಗೆ ಬಹಳಷ್ಟು ಪ್ರೀತಿ. ಸಹ ಕಲಾವಿದರನ್ನು ಜೊತೆಗೆ ಇಟ್ಟುಕೊಂಡು ಅವರು ಊಟ ಮಾಡಲು ಇಷ್ಟಪಡುತ್ತಿದ್ದರು. ಮೈಕೋ ನಾಗರಾಜ್ ಅವರೆಂದರೆ ಅಂಬರೀಷ್ ತುಂಬಾನೇ ಪ್ರೀತಿ ಇತ್ತು' ಎಂಬುದು ಮೈಕೋ ನಾಗರಾಜ್ ಮಾತಿನಲಲಿ ವ್ತಕ್ತವಾಗಿದೆ.

ಮೈಕೋ ನಾಗರಾಜ್ ಅವರು ವಿಲನ್ ಹಾಗೂ ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಅಂಬಿ ಬಗ್ಗೆ ಮಾತನಾಡುತ್ತ 'ಅಂಬರೀಷ್ ಅವರು ಒಂದು ದಿನ ಸಿನಿಮಾ ಸೆಟ್‌ನಲ್ಲಿ ಸಿಕ್ಕರು. ಆಗಲೇ ಅವರ ಜೊತೆ ಆತ್ಮೀಯತೆ ಬೆಳೆದಿತ್ತು. ಎಲ್ಲಿ ಊಟ ಮಾಡಿದೆ ಎಂದು ಕೇಳಿದರು. ಸೆಟ್ಟಲ್ಲಿ ಎಂದೆ. ನಾಳೆ ನನ್ನ ಜೊತೆ ಊಟ ಮಾಡಬೇಕು ಎಂದು ಆದೇಶ ಹೊರಡಿಸಿದರು' ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡು ಹೇಳಿಕೊಂಡಿದ್ದಾರೆ ಮೈಕೋ ನಾಗರಾಜ್.

25 ಬಗೆಯ ಊಟಗಳು ಅಲ್ಲಿದ್ದವು

ಮೈಕೋ ನಾಗರಾಜ್ ಅವರು ಮರುದಿನ ಅಂಬಿ ಜೊತೆ ಊಟಕ್ಕೆ ಹೋದರಂತೆ. ಅಲ್ಲಿರುವ ಊಟ ನೋಡಿ ಅವರೇ ಕಂಗಾಲಾಗಿಬಿಟ್ಟರಂತೆ. ಕಾರಣ, 25 ಬಗೆಯ ಊಟಗಳು ಅಲ್ಲಿ ಇದ್ದವು, ಹಾಗೂ ಎಲ್ಲವೂ ನಾಗರಾಜ್ ಅವರ ಬಟ್ಟಲಿಗೂ ಬಂದಿತ್ತು. ಇದೆಲ್ಲವನ್ನೂ ನೀನು ತಿನ್ನಬೇಕು ಎಂದು ಅಂಬರೀಷ್ ಅವರು ಆದೇಶ ಹೊರಡಿಸಿದರು.

ನನ್ನನ್ನು ಅತಿಥಿಯಂತೆ ಸತ್ಕರಿಸಿ ಊಟ ಮಾಡಿಸಿದರು. 'ಇದಕ್ಕಿಂತ ದೊಡ್ಡ ಊಟ ಮಾಡಲು ಸಾಧ್ಯವೇ' ಎಂದು ಕೇಳಿದರಂತೆ ನಾಗರಾಜ್. 'ಫಟ್' ಅಂತ ಹೊಡೆದರಂತೆ ಅಂಬರೀಷ್. 'ನನಗೆ ಎಲ್ಲರೂ ಒಂದೇ, ಅವರು ಇವರು ಅನ್ನೋ ಬೇಧವೇ ಇಲ್ಲ' ಎಂದು ಅಂಬಿ ಹೇಳಿದರಂತೆ. ಏನೇ ಮಾಡಿದರೂ ಓಪನ್ ಆಗಿ ಮಾಡಬೇಕು ಎಂಬುದು ಅಂಬಿ ಸೂಚನೆ. ಜೊತೆಗೆ ಅವರೂ ಹಾಗೇ ಇದ್ದರು. ಎಂದಿದ್ದಾರೆ ನಾಗರಾಜ್.

ಶಾಕಿಂಗ್ ಸಂಗತಿ

ಜೊತೆಗೆ, ಶಾಕಿಂಗ್ ಸಂಗತಿಯೊದನ್ನೂ ಹೇಳಿದ್ದಾರೆ ಮೈಕೋ ನಾಗರಾಜ್.. 'ಅಂಬರೀಷ್ ಇದ್ದಲ್ಲಿ ಒಂದು ಹೆಂಗಸು ಬರುತ್ತಿದ್ದರಂತೆ. ಒಮ್ಮೆ ಅವರು ಕಾಲು ಹಿಡಿದು ಅದೇನೋ ಬೇಡಿಕೊಂಡರೂ ಅಂಬಿ ಅವರನ್ನು ಕ್ಷಮಿಸಲಿಲ್ಲ. ಕ್ಷಮೆ ಕೊಡುವುದಿರಲೀ, ಅವರ ಮಾತಿಗೂ ಅಷ್ಟೊಂದು ಲಕ್ಷಕೊಡಲೇ ಇಲ್ಲ ಅಂಬರೀಷ್' ಎಂದಿದ್ದಾರೆ. ಕಾರಣ, 'ಎಲೆಕ್ಷನ್‌ಗೆ ನಿಂತಾಗ ಆ ಹೆಣ್ಣುನಗಳು ಡಬಲ್‌ ಗೇಮ್ ಆಡಿದ್ದರಂತೆ. ಈ ಕಾರಣಕ್ಕೆ ಅಂಬಿ ಅವರ ಕಡೆ ತಿರುಗಿ ನೋಡಿಲ್ಲವಂತೆ'. ಈ ಮ್ಯಾಟರ್ ಇದೀಗ ಅಂಬಿ ಸಾವಿನ ಬಳಿಕ ಹೊರಗೆ ಬಂದಿದೆ.

ಅಂಬರೀಷ್ ಅವರಿಮದ ಆ ಹೆಂಗಸು ನಟಿಯೇ? ಅಥವಾ ಇನ್ಯಾರೋ ಆಗಿರಬಹುದೇ? ಗೊತ್ತಿದ್ದರೆ ಕಾಮೆಂಟ್ ಮಾಡಿ..