ಬೆಂಗಳೂರು (ಮಾ. 13): ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್ ವುಡ್ ಮಾತ್ರವಲ್ಲ ಬೇರೆ ಬೇರೆ ಇಂಡಸ್ಟ್ರಿಯವರ ಜೊತೆ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡವರು.  ಬೇರೆ ಇಂಡಸ್ಟ್ರಿಯ ಸ್ಟಾರ್ ಗಳ ಜೊತೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. 

ಬಾಲಿವುಡ್ ಸಿನಿಮಾದಲ್ಲಿ ಕನ್ನಡಿಗ ದತ್ತಣ್ಣ

ಇತ್ತೀಚಿಗೆ ಉಪ್ಪಿ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಮಲ್ಟಿ ಸ್ಟಾರ್ ಸಿನಿಮಾ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅದ್ಯಾಕೋ ಉಪ್ಪಿ ಮನಸ್ಸು ಮಾಡಲೇ ಇಲ್ಲ. ಆ ಚಿತ್ರವನ್ನು ರಿಜೆಕ್ಟ್ ಮಾಡಿದರು. ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ನಟಿಸಲು ಉಪ್ಪಿಯನ್ನು ಕೇಳಿದರೆ ’ನೋ’ ಎಂದಿದ್ದಾರೆ. 

ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಶುರುವಾಗುತ್ತಿದೆ ಕೆಜಿಎಫ್-2 ಶೂಟಿಂಗ್

ಉಪ್ಪಿ ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಸಿನಿಮಾ ಕಡೆ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ಪ್ರಜಾಕೀಯ ಪಕ್ಷದ ಚಟುವಟಿಕೆಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಉಪ್ಪಿ ’ಐ ಲವ್ ಯೂ ’ ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ.