ಬೆಂಗಳೂರು (ಮಾ. 13): ರಾಕಿಂಗ್ ಸ್ಟಾರ್ ಯಶ್ ಅಭಿನಯದ ’ಕೆಜಿಎಫ್’ ಇಡೀ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ದಾಖಲೆಯನ್ನು ಬರೆದಿದೆ. ತನ್ನದೇ ಆದ ದಾಖಲೆ ಬರೆದಿದೆ. ಕೆಜಿಎಫ್ -2 ಭಾರೀ ಕುತೂಹಲ ಮೂಡಿಸಿದೆ. 

ಯಶ್ ಅಭಿಮಾನಿಗಳೆಲ್ಲಾ ಕೆಜಿಎಫ್-2 ಗಾಗಿ ಕಾಯುತ್ತಿದ್ದಾರೆ. ಇದೀಗ ಯಶ್ ಖುಷ್ ಖಬರ್ ನೀಡಿದ್ದಾರೆ. ಇಂದು ಕೆಜಿಎಫ್ -2 ಗೆ ಶೂಟಿಂಗ್ ಪ್ರಾರಂಭವಾಗಲಿದೆ. ದೇವರ ಪೂಜೆಯೊಂದಿಗೆ ಕೆಜಿಎಫ್ ಟೀಂ ಶೂಟಿಂಗ್ ಆರಂಭಿಸಿದೆ. 

ನನ್ನ ಕನಸಿನ ಕೂಸು ಕೆಜಿಎಫ್ Chapter-1 ನಿರೀಕ್ಷೆಗೂ ಮೀರಿ ಎತ್ತರಕ್ಕೆ ಬೆಳೆಸಿದ ಚಿತ್ರಪ್ರೇಮಿಗಳಿಗೆ ನಾನು ಋಣಿ. ಅದೇ ಗೆಲುವಿನ ಸಂತಸದಲ್ಲಿ Chapter-2 ಪ್ರಾರಂಭವಾಗುತ್ತಿದೆ. ನಿಮ್ಮ ಹಾರೈಕೆ, ಆಶೀರ್ವಾದವಿರಲಿ ಎಂದು ಯಶ್ ಹೇಳಿದ್ದಾರೆ.