ರಶ್ಮಿಕಾ ಈಗ ಬಣ್ಣದ ಜಗತ್ತಿನ ಹಾಟ್ ಟಾಪಿಕ್.. ಒಂದ್ ಕಡೆ ಸಿನಿಮಾಗಳ ದೊಡ್ಡ ಸಕ್ಸಸ್​ಹೆಗಲ ಮೇಲೇರಿದ್ರೆ, ಮತ್ತೊಂದು ಕಡೆ ವಿಜಯ್ ದೇವರಕೊಂಡ ಜೊತೆಗಿನ ಮದುವೆ ಮ್ಯಾಟರ್ ಎಲ್ಲರ ಕಣ್ಣು ಅವರತ್ತ ಬೀಳುವಂತೆ ಮಾಡಿದೆ. ಇದರ ಮಧ್ಯೆ ಅನುಭವಿಸಿದ ಹಳೇ ಲವ್ ಸ್ಟೋರಿ ಮಾತ್ರ ರಶ್ಮಿಕಾ ಮನದಿಂದ ದೂರಾದಂತಿಲ್ಲ.

ರಶ್ಕಿಕಾ ಆಯ್ಕೆ ಮಾಡಿದ್ದಾಯ್ತು ಬಾಳ ಸಂಗಾತಿ!

ಭಾರತೀಯ ಚಿತ್ರರಂಗದ ಕ್ವೀನ್​ ರಶ್ಮಿಕಾ ಮಂದಣ್ಣ (Rashmika Mandanna) ಹಸೆಮಣೆ ಏರೋದು ನಿಕ್ಕಿ ಆಗಿದೆ. ರಶ್ಮಿಕಾ ದ ಗ್ರೇಟ್​ ಲವರ್​​ ವಿಜಯ್ ದೇವರಕೊಂಡರನ್ನ ಬಾಳ ಸಂಗಾತಿಯನ್ನಾಗಿ ರಶ್ಮು ಆಯ್ಕೆ ಮಾಡಿದ್ದು, ಇನ್ನೇನು ಮದುವೆ ಒಂದೇ ಬಾಕಿ ಇದೆ. ಈ ಟೈಮ್​​ನಲ್ಲೂ ಶ್ರೀವಲ್ಲಿ ತನ್ನ ಹಳೆ ನೆನಪುಗಳನ್ನ ಮರೆತಿಲ್ಲ. ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದಾರೆ. ಹಾಗಾದ್ರೆ ರಶ್ಮಿಕಾ ನೆನಪಲ್ಲಿ ಬಂದ ಆ ಘಟನೆ ಯಾವ್ದು ನೋಡೋಣ ಬನ್ನಿ...

ಇನ್ನೂ ಹಳೆಯ ನೋವಲ್ಲೇ ಇದ್ದಾರಾ ಶ್ರೀವಲ್ಲಿ..?

ರಶ್ಮಿಕಾ ಈಗ ಬಣ್ಣದ ಜಗತ್ತಿನ ಹಾಟ್ ಟಾಪಿಕ್.. ಒಂದ್ ಕಡೆ ಸಿನಿಮಾಗಳ ದೊಡ್ಡ ಸಕ್ಸಸ್​​​​​​​​​ ಹೆಗಲ ಮೇಲೇರಿದ್ರೆ, ಮತ್ತೊಂದು ಕಡೆ ವಿಜಯ್ ದೇವರಕೊಂಡ ಜೊತೆಗಿನ ಮದುವೆ ಮ್ಯಾಟರ್​ ಎಲ್ಲರ ಕಣ್ಣು ತನ್ನತ್ತ ಬೀಳುವಂತೆ ಮಾಡಿದೆ. ಇದರ ಮಧ್ಯೆ ಅನುಭವಿಸಿದ ಹಳೇ ಲವ್ ಸ್ಟೋರಿ ಮಾತ್ರ ರಶ್ಮು ಮನದಿಂದ ದೂರಾದಂತಿಲ್ಲ. ಯಾಕಂದ್ರೆ ಆ ನೆನಪು ಸಾನ್ವಿಗೆ ಮತ್ತೆ ಮತ್ತೆ ಮರು ಕಳಿಸುತ್ತಿದೆ..

ಹಳೇ ಸಂಬಂಧದ ಬಗ್ಗೆ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ, ಆಯ್ಕೆಗಳೇ ಇಲ್ಲದಂತೆ ಮಾಡಿದ್ನಂತೆ ಮಾಜಿ ಪ್ರೇಮಿ..!?

ಸಂದರ್ಶನ ಒಂದರಲ್ಲಿ ಮಾತನಾಡಿರೋ ಹೈದರಾಬಾದ್ ಸೊಸೆ ರಶ್ಮಿಕಾ, ಯಾರ ಜೊತೆ ಇರಬೇಕು ಎನ್ನುವುದನ್ನು ನೀವೆ ಅಳೆದು ತೂಗಿ ಆಯ್ಕೆ ಮಾಡಬೇಕು., ಒಮ್ಮೊಮ್ಮೆ ಎಂತಹ ಸನ್ನಿವೇಶದಲ್ಲಿ ಸಿಲುಕಿಕೊಳ್ಳಬೇಕಾಗುತ್ತೆ ಎಂದರೆ ಅಲ್ಲಿ ನಮಗೆ ಬೇರೆ ಆಯ್ಕೆಯೇ ಇರುವುದಿಲ್ಲ. ನಾನು ಹಿಂದೊಮ್ಮೆ ಇಂತಹ ಸಂಬಂಧದಲ್ಲಿದ್ದೆ. ಈಗ ನನಗೆ ಒಬ್ಬ ಸಂಗಾತಿ ಇದ್ದಾನೆ. ಇಲ್ಲಿ ನನಗೆ ನನ್ನದೇ ಆಯ್ಕೆಗಳಿವೆ. ನನ್ನತನಕ್ಕೆ ಅವಕಾಶ ಇದೆ. ನಾನು ಈಗ ತುಂಬಾನೇ ಖುಷಿಯಾಗಿದ್ದೇನೆ ಎಂದಿದ್ದಾರೆ.

ಮಾಜಿ ಲವರ್ ಅಂದ್ರೆ ಅದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಹಾಗ್​ ನೋಡಿದ್ರೆ ರಶ್ಮಿಕಾ ಮಾಜಿ ಲವರ್ ಅಂದ್ರೆ ಅದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಇವರಿಬ್ಬರ ಸಂಬಂಧ ಮುರಿದು ಬಿದ್ದಿದ್ದೇಕೆ ಎನ್ನುವ ಪ್ರಶ್ನೆ ಈ ಕ್ಷಣಕ್ಕೂ ಇದೆ. ಇಬ್ಬರ ಮದುವೆ ಮುರಿದು ಬಿದ್ದು 7 ವರ್ಷಗಳಾಗಿವೆ. ಈ 7 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಸಾಕ್ಷಾತ್ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿ ಗಡ್ಡ ಬಿಟ್ಟುಕೊಂಡು ತಮ್ಮ ಪಾಡಿಗೆ ತಾವು ಇದ್ದಾರೆ. ಇಲ್ಲಿಯವರೆಗೆ ತಮ್ಮ ಹಳೆಯ ಪ್ರೀತಿಯ ಘನತೆ ಕಾಪಾಡಿಕೊಂಡು ಬಂದಿದ್ದಾರೆ. ಒಂದು ದಿನವೂ ರಶ್ಮಿಕಾ ಮಂದಣ್ಣ ಬಗ್ಗೆ ರಕ್ಷಿತ್ ಮಾತಾಡಿಲ್ಲ. ಆದ್ರೆ ಶ್ರೀವಲ್ಲಿಗೆ ಮದುವೆ ಫಿಕ್ಸ್ ಆಗಿದ್ದೇ ತಡ ಹಳೇ ನೆನಪಿನ ನೋವುಗಳನ್ನೆಲ್ಲಾ ಹೊರಗೆ ಕಕ್ಕುತ್ತಿದ್ದಾರೆ..

ನನ್ನೆಲ್ಲಾ ನೋವಿಗೆ ವಿಜಯ್ ಮುಲಾಮು ಎಂದ ರಶ್ಮಿಕಾ..!

ಶ್ರೀವಲ್ಲಿ ನೋವು ಸಂಕಟಗಳೆಲ್ಲಾ ಈಗ ನೆಲಸಮ ಆಗಿವೆ. ರಶ್ಕಿಕಾ ಬಳಿ ಇರೋದು ಈಗ ಬರೀ ಸಂತೋಷ ಖುಷಿಯ ಕ್ಷಣಗಳು ಮಾತ್ರ. ಅದನ್ನೆಲ್ಲಾ ಕಳೆಯುತ್ತಿರೋದು ವಿಜಯ್ ದೇವರಕೊಂಡ ಜೊತೆಗೆ. ರಶ್ಮಿಕಾ ಇಷ್ಟು ಸಂಭ್ರಮದಲ್ಲಿ ತೇಲೋಕೆ ಕಾರಣ ವಿಜಯ್ ದೇವರಕೊಂಡ ಅಂತೆ. ತನ್ನೆಲ್ಲಾ ನೋವಿಗೆ ವಿಜಯ್ ಮುಲಾಮು ಹಚ್ಚಿದ್ದಾರೆ ಅಂತ ರಶ್ಮಿಕಾ ಹೇಳಿಕೊಂಡಿದ್ದಾರೆ.