ನಾನು ಸಿನಿಮಾದಲ್ಲಿ, ಕ್ಯಾಮೆರಾ ಮುಂದೆ ಮಾಡಿದ ಮೊಟ್ಟಮೊದಲ ಕಿಸ್ ಎಂದರೆ ಅದು ಗೀತ ಗೋವಿಂದಂ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆಗೆ. ಆಗ ನಾನು ತುಂಬಾ ನರ್ವಸ್ ಆಗಿದ್ದೆ.. ಏಕೆಂದರೆ, ನನ್ನ ಮಟ್ಟಿಗೆ ಕಿಸ್ ಎನ್ನುವುದು ತೀರಾ ಪರ್ಸನಲ್ ಹಾಗೂ ತುಂಬಾ ಸೆನ್ಸಿಟಿವ್ ಮ್ಯಾಟರ್.
ಮೊದಲ ಕಿಸ್ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಭಾಗಿಯಾದ ಸಂದರ್ಶನವೊಂದರ ಆಯ್ದ ಭಾಗವಿದು. ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ನಟಿ ರಶ್ಮಿಕಾ ಅವರು 'ನನ್ನ ವೃತ್ತಿಜೀವನದ ಮೊಟ್ಟಮೊದಲ ಕಿಸ್ ನಾನು ಕೊಟ್ಟಿದ್ದು 'ಗೀತ ಗೋವಿಂದಂ' ಸಿನಿಮಾದಲ್ಲಿ. ಅದು ಸಿನಿಮಾದಲ್ಲಿ ಅಗತ್ಯವಿದೆ, ಸಹನಟನಿಗೆ ಕಿಸ್ ಕೊಡಬೇಕು ಎಂದಾಗ ಸಹಜವಾಗಿಯೇ ನನ್ನ ಮನಸ್ಸಿನಲ್ಲಿ ಗೊಂದಲ ಕಾಡಿದೆ. ಅದೇ ರೀತಿ, ಸಹನಟ ವಿಜಯ್ ಅವರಿಗೂ ಆಗಿದೆ ಎಂಬುದು ನನಗೆ ಬಳಿಕ ತಿಳಿಯಿತು.
ಆದರೆ, ನಾವೆಲ್ಲ ಕಲಾವಿದರಾಗಿ ಸಿನಿಮಾಗೆ ಅಗತ್ಯವಿರುವ ಎಲ್ಲಾ ದೃಶ್ಯಗಳಲ್ಲಿ ಭಾಗಿಯಾಗಲೇಬೇಕು. ಅದು ನಮ್ಮ ವೃತ್ತಿಪರತೆಗೆ, ಸಿನಿಮಾ ಬದ್ಧತೆಗೆ ಅಗತ್ಯವೂ ಹೌದು. ಸಿನಿಮಾ ಕಥೆಗೆ ಅಗತ್ಯವಿದ್ದಾಗ ಕಿಸ್ ಸೀನ್ ಒಪ್ಪಿಕೊಂಡು ನಟಿಸುವುದು ನಟನೆಯ ಒಂದು ಭಾಗವೇ ಆಗಿದೆ. ಕಥೆಗೆ ಅಗತ್ಯವಿದ್ದಾಗ ಮಾತ್ರ ನಿರ್ದೇಶಕರು ಅಂತಹ ಸೀನ್ ಶೂಟ್ ಮಾಡುತ್ತಾರೆ. ಅದರಲ್ಲೂ, ಗೀತ ಗೋವಿಂದಂ ಚಿತ್ರದಲ್ಲಿ ನಾನು ಮತ್ತು ವಿಜಯ್ ದೇವರಕೊಂಡ (Vijay Deverakonda) ಮಾಡಿರುವ ಪಾತ್ರವು ಮ್ಯಾರಿಡ್ ಕಪಲ್ ರೋಲ್. ಮದುವೆಯಾದ ಗಂಡ-ಹೆಂಡತಿ ಮಾಡುವ ಎಲ್ಲವನ್ನೂ ನಾವು ಸಿನಿಮಾದಲ್ಲಿ ಮಾಡಲೇಬೇಕು, ಅದು ಸಹಜ.
ಕ್ಯಾಮೆರಾ ಮುಂದೆ ಮಾಡಿದ ಮೊಟ್ಟಮೊದಲ ಕಿಸ್
ಆದರೆ, ವೈಯಕ್ತಿಕವಾಗಿ ಹೇಳಬೇಕು ಎಂದರೆ.. ನಾನು ಸಿನಿಮಾದಲ್ಲಿ, ಕ್ಯಾಮೆರಾ ಮುಂದೆ ಮಾಡಿದ ಮೊಟ್ಟಮೊದಲ ಕಿಸ್ ಎಂದರೆ ಅದು ಗೀತ ಗೋವಿಂದಂ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆಗೆ. ಆಗ ನಾನು ತುಂಬಾ ನರ್ವಸ್ ಆಗಿದ್ದೆ.. ಏಕೆಂದರೆ, ನನ್ನ ಮಟ್ಟಿಗೆ ಕಿಸ್ ಎನ್ನುವುದು ತೀರಾ ಪರ್ಸನಲ್ ಹಾಗೂ ತುಂಬಾ ಸೆನ್ಸಿಟಿವ್ ಮ್ಯಾಟರ್. ಹೀಗಾಗಿ ಸಹಜವಾಗಿಯೇ ನನಗೆ ತುಂಬಾ ಆತಂಕ ಕಾಡಿತ್ತು. ಅದರಲ್ಲೂ ಸಿನಿಮಾ ಶೂಟಿಂಗ್‌ನಲ್ಲಿ ಅಲ್ಲಿ ಸ್ಥಳದಲ್ಲಿ 200ಕ್ಕೂ ಹೆಚ್ಚು ಜನರು ಇರುತ್ತಾರೆ. ಅವರೆಲ್ಲರ ಮುಂದೆ ಕಿಸ್ ಮಾಡೋದು ತುಂಬಾ ಕಷ್ಟ ಎನ್ನಿಸಿದ್ದು ಸುಳ್ಳಲ್ಲ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ನಿಶ್ಚಿತಾರ್ಥ ಹಾಗೂ ಮದುವೆ
ಅಚ್ಚರಿ ಎಂಬಂತೆ, ನಟಿ ರಶ್ಮಿಕಾ ಮೊಟ್ಟಮೊದಲು ತೆರೆಯ ಮೇಲೆ ಕಿಸ್ ಕೊಟ್ಟ ವ್ಯಕ್ತಿಯ ಜೊತೆಗೇ ಈಗ ಅವರ ನಿಶ್ಚಿತಾರ್ಥ ಹಾಗೂ ಮದುವೆ ಫಿಕ್ಸ್ ಆಗಿದೆ. 26 ಫೆಬ್ರವರಿ 2026ರಲ್ಲಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಉದಯಪುರದಲ್ಲಿ ಪಿಕ್ಸ್ ಆಗಿದೆ. 'ಗೀತ ಗೋವಿಂದಂ' ಸಿನಿಮಾದಲ್ಲಿ ಸಿನಿಮಾಗೆ ಮೊದಲ ಕಿಸ್ ಕೊಟ್ಟ ನಟಿ ರಶ್ಮಿಕಾ ಮಂದಣ್ಣ, ಆ ಬಳಿಕ ಅನಿಮಲ್ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆಗೆ ಕೂಡ ಕಿಸ್ ಸೀನ್‌ನಲ್ಲಿ ಭಾಗಿಯಾಗಿದ್ದರು. ಇನ್ನು ವಿಜಯ್ ದೇವರಕೊಂಡ ಕೂಡ ತಮ್ಮ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ತಮ್ಮ ಸಹನಟಿಯ ಜೊತೆ ಲಿಪ್‌ಲಾಕ್‌ನಲ್ಲಿ ಭಾಗಿಯಾಗಿದ್ದರು.
