Asianet Suvarna News Asianet Suvarna News

1.20 ಲಕ್ಷ ರುಪಾಯಿ ಬಟ್ಟೆ ಧರಿಸಿದ ರಶ್ಮಿಕಾ ಮಂದಣ್ಣ; ಪದೇ ಪದೇ ರಿಪೀಟ್ ಮಾಡುತ್ತಿರುವುದ್ಯಾಕೆ?

ನೂರಲ್ಲ ಸಾವಿರವಲ್ಲ ಲಕ್ಷದಲ್ಲಿ ಬಟ್ಟೆ ಖರೀದಿಸುತ್ತಿರುವ ರಶ್ಮಿಕಾ ಮಂದಣ್ಣ. ಫ್ಯಾಷನ್ ಹಿಂದಿರುವ ಗುಟ್ಟು ಏನು?

Rashmika Mandanna gucci knit top and trousers worth 1 lakh vcs
Author
Bangalore, First Published Aug 21, 2022, 10:40 AM IST

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್‌ನ ಬೇಡಿಕೆಯ ನಟಿ. ಕೈ ತುಂಬಾ ಸಿನಿಮಾಗಳು, ಜಾಹೀತಾರುಗಳಿದ್ದು ಎರಡು ಮೂರು ವರ್ಷ ಫ್ರೀ ಇಲ್ಲವಂತೆ. ಅಲ್ಲದೆ ಬಿಗ್ ಬಿ ಅಮಿತಾ ಬಚ್ಚನ್ ಮತ್ತು ಅಲ್ಲು ಅರ್ಜುನ್ ಜೊತೆ ಸಿನಿಮಾ ಒಪ್ಪಿಕೊಂಡಂತೆ ಸಂಭಾವನೆ ಕೂಡ ಏರಿಸಿಕೊಂಡಿದ್ದಾರೆ. 

ಕೊಡಗಿನ ಕುವರಿ ಸಿಕ್ಕಾಪಟ್ಟೆ ಫಿಟ್ನೆಸ್‌ ಮತ್ತು ಬ್ಯೂಟಿ ಕಾನ್ಶಿಯಸ್‌. ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ವರ್ಕೌಟ್ ಮಾಡುತ್ತಾರೆ. ಪರ್ಸನಲ್ ಟ್ರೈನರ್ ಸಹಾಯದಿಂದ ಫುಡ್ ಚಾರ್ಟ್‌ ಫಾಲೋ ಮಾಡುತ್ತಾರೆ. ಹೀಗಾಗಿ ರಶ್ಮಿಕಾ ಮೇಕಪ್ ಇಲ್ಲದೆ ಕಾಣಿಸಿಕೊಂಡರೂ ಮುಖದಲ್ಲಿ ಸೂಪರ್ ಗ್ಲೋ ಇರುತ್ತದೆ. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಮಾಡುತ್ತಿರುವ ಕಾರಣ ರಶ್ಮಿಕಾ ಮೂರ್ನಾಲ್ಕು ಕಡೆ ಮನೆ ಮಾಡಿಕೊಂಡಿದ್ದಾರೆ. 

ಜ್ಯೋತಿಷಿ ಮಾತು ಕೇಳಿ ವಿಜಯ್ ದೇವರಕೊಂಡ ಜೊತೆ ಬ್ರೇಕಪ್ ಮಾಡಿಕೊಂಡ್ರಾ ರಶ್ಮಿಕಾ?

ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಪ್ ಮತ್ತು ಮಾಸ್ಕ್‌ ಧರಿಸಿ ಪ್ಯಾಪರಜಿಗಳಿಂದ ತಪ್ಪಿಸಿಕೊಳ್ಳಬಹುದು ಅಂದುಕೊಂಡಿದ್ದಾರೆ. ಆದರೆ No way...ಚಾನ್ಸೇ ಇಲ್ಲ... ರಶ್ಮಿಕಾರನ್ನು ಕಂಡು ಹಿಡಿದು ಪ್ಯಾಪರಾಜಿಗಳು ಫಾಲೋ ಮಾಡಿದ್ದಾರೆ. ಈ ವೇಳೆ ರಾಶ್ ಗುಚ್ಚಿ ಟಿಪ್ಪಿ ಟಾಪ್ ಹಾಗೂ ಬ್ಲ್ಯಾಕ್ ಪ್ಯಾಂಡ್ ಧರಿಸಿದ್ದಾರೆ. ಈ ಡ್ರೆಸ್‌ನ ಬೆಲೆ ಸುಮಾರು 1 ಲಕ್ಷ 20 ಸಾವರಿ ರುಪಾಯಿ ಎನ್ನಲಾಗಿದೆ. ಇದೇ ಔಟ್‌ಫಿಟ್‌ನ ರಶ್ಮಿಕಾ ಮೂರು ವಾರಗಳ ಹಿಂದೆ ನಿರ್ಮಾಣ ಸಂಸ್ಥೆಯೊಂದಕ್ಕೆ ಭೇಟಿ ನೀಡುವಾಗ ಧರಿಸಿದ್ದರು. 

Rashmika Mandanna gucci knit top and trousers worth 1 lakh vcs

ಬಟ್ಟೆ ರಿಪೀಟ್?

ಸಾಮಾನ್ಯವಾಗಿ ನಟ-ನಟಿಯರು ಧರಿಸುವ ಉಡುಪುಗಳನ್ನು ಪ್ರತಿಷ್ಠಿತ ಡಿಸೈನರ್ ಸಂಸ್ಥೆಗಳು ಪ್ರಚಾರಕ್ಕೆಂದು ಫ್ರೀ ಅಗಿ ಕೊಡುತ್ತಾರೆ. ಧರಿಸಿ ಅವರಿಗೆ ಹಿಂತಿರುಗಿಸಬೇಕು. ಹೀಗಾಗಿ ಸ್ವಂತ ದುಡಿಮೆಯಲ್ಲಿ ಖರೀದಿ ಮಾಡುವ ಡ್ರೆಸ್‌ ಧರಿಸಲು ಸಮಯವೇ ಇರುವುದಿಲ್ಲ. ಅವಕಾಶ ಸಿಕ್ಕಾಗ  ಎಕ್ಸಪರೀಮೆಂಟ್ ಮಾಡುತ್ತಾರೆ. ಎಕ್ಸಪರೀಮೆಂಟ್ ಮಾಡುವ ಡ್ರೆಸ್‌ ದುಬಾರಿ ಇರುತ್ತದೆ ಅದರಿಂದ ಹೊಸ ಬಟ್ಟೆಗೆ ದುಡ್ಡು ಇರುವ ಬದಲು ಅದೇ ಉಡುಪನ್ನು ಮತ್ತೆ ಮತ್ತೆ ಧರಿಸಿ ಎಂದು ಸಮಂತಾ  ಹೇಳುತ್ತಾರೆ. ಈಗ ಈ ರೂಲ್ಸ್‌ನ ರಶ್ಮಿಕಾ ಕೂಡ ಫಾಲೋ ಮಾಡುತ್ತಿದ್ದಾರೆ. 

ರಾಜಕೀಯಕ್ಕೆ ರಶ್ಮಿಕಾ ಮಂದಣ್ಣ?

ರಶ್ಮಿಕಾ ಬಗ್ಗೆ ಭವಿಷ್ಯ ನುಡಿದಿರುವ ವೇಣು ಸ್ವಾಮಿ, ಕಾಂಗ್ರೆಸ್ ಪಕ್ಷ ಸೇರಲಿರುವ  ರಶ್ಮಿಕಾ ಕರ್ನಾಟಕದಿಂದ ಸಂಸದೆಯಾಗಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎಂದಿದ್ದಾರೆ. ರಶ್ಮಿಕಾ ಬಗ್ಗೆ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾಡಿರುವ ಮಾತುಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವೇಣು ಸ್ವಾಮಿ ರಶ್ಮಿಕಾ ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ. 

ನಾನು ರಾತ್ರೋರಾತ್ರಿ ಸ್ಟಾರ್ ಆಗಿಲ್ಲ; ಗರಂ ಆದ ರಶ್ಮಿಕಾ

ರಕ್ಷಿತ್ ಜೊತೆ ಬ್ರೇಕಪ್‌‌‌ಗೆ ಸಲಹೆ ನೀಡಿದ್ದ ಜ್ಯೋತಿಷಿ

ಅಷ್ಟಕ್ಕೂ ವೇಣು ಸ್ವಾಮಿ ಸೆಲೆಬ್ರಿಟಿಗಳ ಜಾತಕವನ್ನು ನೋಡಿ ಹೇಳುವುದರಲ್ಲಿ ಎತ್ತಿದ ಕೈ. ಸಲೆಬ್ರಿಟಿಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡುತ್ತಿರುತ್ತಾರೆ. ಈಗ ರಶ್ಮಿಕಾ ಕುರಿತು ಹೇಳಿರುವ ಈ ಭವಿಷ್ಯ ನಿಜವಾಗುತ್ತಾ ಅಂತ ಕಾದು ನೋಡಬೇಕಿದೆ. ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಖ್ಯಾತಿಗಳಿಸಿರುವ ರಶ್ಮಿಕಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ರಶ್ಮಿಕಾ ಹೈದರಾಬಾದ್ ಮನೆಯ ಪೂಜೆಯನ್ನು ಇದೇ ಜ್ಯೋತಿಷಿ ವೇಣು ಸ್ವಾಮಿ ಮಾಡಿದ್ದರು. ಅಲ್ಲದೆ ರಕ್ಷಿತ್ ಜೊತೆ ದೂರ ಆಗಲು ಕಾರಣ ಸಹ ಇದೇ ವೇಣು ಸ್ವಾಮಿ. ರಕ್ಷಿತ್ ಜೊತೆ ಜಾತಕ ಹೊಂದಾಣಿಕೆಯಾಗದ ಕಾರಣ ಬ್ರೇಕಪ್ ಮಾಡಿಕೊಳ್ಳುವುದು ಒಳ್ಳೆಯದೆಂದು ಸಲಹೆ ನೀಡಿದ್ದೆ. ಹಾಗಾಗಿ ದೂರ ಆಗುವ ನಿರ್ಧಾರ ಮಾಡಿದರು ಎಂದು ವೇಣು ಸ್ವಾಮಿ ಹೇಳಿದ್ದಾರೆ. 

Follow Us:
Download App:
  • android
  • ios