ಕನ್ನಡಕ್ಕೆ ಮತ್ತೊಬ್ಬರು ಭರವಸೆಯ ರ್ಯಾಪ್ ಗಾಯಕಿ ಸಿಕ್ಕಿದ್ದಾರೆ. ಅವರ ಹೆಸರು ರಮ್ಯಾ ಶ್ರೀಧರ್. ಕರ್ನಾಟಕ ಸಂಗೀತ ಗಾಯಕಿ, ಭರತನಾಟ್ಯ ಡಾನ್ಸರ್, ಕಾರ್ಪೋರೇಟ್ ಟ್ರೇನರ್, ಗೀತ ರಚನಕಾರ್ತಿ, ಸಾಹಿತ್ಯಾಸಕ್ತೆ, ಸಿನಿಮಾಪ್ರೇಮಿ ಹೀಗೆ ಎಲ್ಲವೂ ಆಗಿರುವ ಪ್ರತಿಭಾವಂತೆ ರಮ್ಯಾ ಶ್ರೀಧರ್ ಬರೆದು, ಮ್ಯೂಸಿಕ್ ಕಂಪೋಸ್ ಮಾಡಿ ಹಾಡಿದ ಮೊದಲ ರ್ಯಾಪ್ ಹಾಡು ‘ವೇಕಪ್ ಸಾಂಗ್’ ರಮ್ಯಾ ಶ್ರೀಧರ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.

ವೇಕಪ್ ಹಾಡು ಪುನೀತ್ ರಾಜ್‌ಕುಮಾರ್, ಧನಂಜಯ್, ಆಲ್‌ಓಕೆ ಮುಂತಾದ ಘಟಾನುಘಟಿಗಳಲ್ಲದೆ ಸಂಗೀತ ಪ್ರೇಮಿಗಳ ಮೆಚ್ಚುಗೆ ಒಳಗಾಗಿದ್ದು ರಮ್ಯಾ ಮೊದಲ ರ್ಯಾಪ್ ಸಾಂಗಿನ ಸಾರ್ಥಕತೆ. ಚಿಕ್ಕಂದಿನಿಂದಲೂ ಬರವಣಿಗೆ ಪ್ರೀತಿ ಇಟ್ಟುಕೊಂಡಿರುವ ರಮ್ಯಾ ಅವರು ಶಾಸ್ತ್ರೀತ ಸಂಗೀತ, ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ತಮಸ್ಸು ಚಿತ್ರಕ್ಕೆ ಸಹ-ನಿರ್ದೇಶಕಿಯಾಗಿ ಕೆಲಸ ಮಾಡಿದ್ದಲ್ಲದೆ ಎರಡು ಹಾಡುಗಳನ್ನೂ ಬರೆದಿದ್ದರು.

ಸಿನಿಮಾ, ಬ್ಯುಸಿನೆಸ್, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಇರುವ ರಮ್ಯಾ ಕಾರ್ಪೋರೇಟ್ ಟ್ರೇನರ್ ಆಗಿ ಕೆಲಸ ಮಾಡುತ್ತಾರೆ. ತಾವು ಜೀವನದಲ್ಲಿ ನೋಡಿದ್ದನ್ನು, ಅನುಭವಿಸಿದ್ದನ್ನು ಹಾಡಾಗಿ ಬರೆದು ಪ್ರಸ್ತುತ ಪಡಿಸಿದ ಫಲವೇ ವೇಕಪ್ ಸಾಂಗ್. ‘ಎಲ್ಲಾ ಕಡೆ ಜನ ನೋವಿನಲ್ಲಿದ್ದಾರೆ. ಖಿನ್ನರಾಗಿದ್ದಾರೆ. ಎಲ್ಲರ ಮುಖದಲ್ಲೂ ನಗು ಮೂಡಿಸಬೇಕು ಎಂಬ ಆಸೆಯಿಂದ ಈ ಹಾಡನ್ನು ಅರ್ಪಿಸಿದ್ದೇನೆ’ ಎನ್ನುತ್ತಾರೆ.

ರಾಜ್‌ಕುಮಾರ್ ಮೊಮ್ಮಗಳ ಚಿತ್ರಕ್ಕೆ ರಘು ದೀಕ್ಷಿತ್ Rap ಸಾಂಗ್; 'ಈ ನಶೆಯೂ ಹೇಳಿದೆ ಪತ್ತೆಯಾ..' 

ಪ್ರತಿಭೆಯ ಜೊತೆಗೆ ಸಾಮಾಜಿಕ ಕಾಳಜಿಯೂ ಇರುವ ರಮ್ಯಾ ಅವರ ಹಾಡನ್ನು ನೀವು ರಮ್ಯಾ ಶ್ರೀಧರ್ ಯೂಟ್ಯೂಬ್ ಚಾನಲಲ್ಲಿ ನೋಡಬಹುದು. ಈ ಹಾಡು ರೂಪಿಸಲು ವಿಜೇತ್ ಕೃಷ್ಣ, ನವೀನ್, ಆಕಾಶ್ ಮತ್ತು ತಂಡ ನೆರವಾಗಿದೆ, ಅವರಿಗೆ ಕೃತಜ್ಞತೆ ಎನ್ನುತ್ತಾರೆ ರಮ್ಯಾ. ಇವರು ಖ್ಯಾತ ಬರಹಗಾರ, ಸಿನಿಮಾ ನಿರ್ದೇಶಕ ಅಗ್ನಿ ಶ್ರೀಧರ್ ಅವರ ಪುತ್ರಿ.

YouTube video player