ಸೂರಜ್‌ ಗೌಡ್ ಹಾಗೂ ಧನ್ಯಾ ರಾಮ್‌ಕುಮಾರ್ ಅಭಿನಯದ 'ನಿನ್ನ ಸನಿಹಕೆ' ಚಿತ್ರಕ್ಕೆ ರಘು ದೀಕ್ಷಿತ್ ರ‍್ಯಾಪ್ ಸಾಂಗ್ ಮಾಡಿದ್ದಾರೆ.

'ಯಾರು ಯಾರು ನಾನ್ ಯಾರು ಈ ನಶೆಯೂ ಹೇಳಿದೆ ಪತ್ತೆಯಾ...' ಎಂಬ ಕ್ಯಾಚಿ ಸಾಲುಗಳನ್ನು ಹೊಂದಿರುವ ರ‍್ಯಾಪ್ ಸಾಂಗ್ ಎಲ್ಲೆಡೆ ವೈರಲ್ ಆಗುತ್ತಿದೆ. ರಾಮ ರಾಮ ಹರೇ ಖ್ಯಾತಿಯ ವಾಸುಕಿ ವೈಭವ್ ಬರೆದಿರುವ ಸಾಹಿತ್ಯಕ್ಕೆ ರಘು ದೀಕ್ಷಿತ್ ರಾಗ ಸಂಯೋಜನೆ ಮಾಡಿ, ಧ್ವನಿ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಆ್ಯಕ್ಸಿಡೆಂಟಲ್‌ ಡೈರೆಕ್ಟರ್‌ ಸೂರಜ್‌ ಗೌಡ;ಧನ್ಯಾ ರಾಮ್‌​ಕು​ಮಾ​ರ್‌ ಚೊಚ್ಛಲ ಸಿನಿಮಾ! 

ಈಗಾಗಲೇ ಚಿತ್ರದ ಎರಡು ರೊಮ್ಯಾಂಟಿಕ್ ಹಾಡುಗಳು ಬಿಡುಗಡೆಯಾಗಿದ್ದು, ಗಾಂಧಿ ನಗರದಲ್ಲಿ ಕ್ಯೂಟ್‌ ಪೇರ್‌ ಬಗ್ಗೆ ಚರ್ಚೆ ಹೆಚ್ಚಾಗಿದೆ. ರಘು ರ‍್ಯಾಪ್ ಸಾಂಗ್‌ 'ದಿ ಸೌಂಡ್ ಆಫ್ ಕೆಯಾಸ್‌; ಎಂಬ ಹೊಸ ಶೈಲಿಯಲ್ಲಿದೆ. ಚಿತ್ರದ ಮ್ಯೂಸಿಕ್‌ ಪ್ರೇಮಿಗಳ ಹೃದಯಕ್ಕೆ ಈ ಗೀತೆ ಹತ್ತಿರವಾಗುವುದರಲ್ಲಿ ಅನುಮಾನವೇ ಇಲ್ಲ.

ಸ್ವತಃ ಸೂರಜ್ ಗೌಡ ಅಭಿನಯಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಾಮ್‌ ಕುಮಾರ್‌ ಪುತ್ರಿ ಧನ್ಯಾ ನಾಯಕಿ. ಧನ್ಯಾ ಚೊಚ್ಚಲ ಚಿತ್ರಕ್ಕೆ ಇಡೀ ಕುಟುಂಬದ ಸಾಥ್ ಪಡೆದುಕೊಂಡಿದ್ದಾರೆ. ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಅಕ್ಷಯ್ ಮತ್ತು ರಂಗನಾಥ್ ಕುಡ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ನಿನ್ನ ಸನಿಹಕೆ ಚಿತ್ರದ ಹಾಡುಗಳನ್ನು ಬಳಸಿ ಇನ್‌ಸ್ಟಾಗ್ರಾಂ ರೀಲ್‌ ಮಾಡುತ್ತಿರುವುದನ್ನು ಕಾಣಬಹುದು.

ಸೂರಜ್‌ನ ಮಿಸ್‌ ಮಾಡ್ಕೊಳ್ತೇನೆ, ರೊಮ್ಯಾನ್ಸ್‌ ಮಾಡೋಕೆ ಮುಜುಗರವಿಲ್ಲ; ರಾಜ್‌ ಮೊಮ್ಮಗಳ ಮಾತು! 

ಪ್ಯಾನ್ ಇಂಡಿಯಾ ಸಿನಿಮಾ, ಕನಿಷ್ಠ ಎರಡು ಭಾಷೆಯಲ್ಲಿ ಸಿನಿಮಾ ರಿಲೀಸ್‌ ಮಾಡುವ ಈ ಸಮಯದಲ್ಲಿ ನಿನ್ನ ಸನಿಹಕೆ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಇದೇ ಏಪ್ರಿಲ್ 16ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

YouTube video player