ರಮ್ಯಾಗಾಗಿ ಗುಡಿ ಕಟ್ಟಿಸಿ ಪ್ರತಿಭಟನೆ ಮಾಡಿದ 'ಹಾಸ್ಟೆಲ್ ಹುಡುಗರು'; ವಿಡಿಯೋ ನೋಡಿ ಫ್ಯಾನ್ಸ್ ಖುಷ್

ಮೋಹಕತಾರೆ ರಮ್ಯಾಗಾಗಿ ಹಾಸ್ಟೆಲ್ ಹುಡುಗರು ಗುಡಿ ಕಟ್ಟಿಸಿ ಪ್ರತಿಭಟನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. 

 

ramya supports hostel hudugaru bekagiddare film team sgk

ಮೋಹಕ ತಾರೆ ರಮ್ಯಾ ಅವರನ್ನು ತೆರೆಮೇಲೆ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಮ್ಯಾ ಯಾವಾಗ ಸಿನಿಮಾಗೆ ವಾಪಾಸ್ ಆಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಇತ್ತೀಚಿಗಷ್ಟೆ ಹೊಸ ಪ್ರೊಡಕ್ಷನ್ ಅನೌನ್ಸ್ ಮೂಲಕ ಸಿನಿಮಾರಂಗಕ್ಕೆ ಕಮ್  ಬ್ಯಾಕ್ ಮಾಡಿದರು. ಬಳಿಕ ಸ್ವಲ್ಪ ದಿನಗಳಲ್ಲೇ ರಮ್ಯಾ ತನ್ನ ಸಿನಿಮಾವನ್ನು ಘೋಷಿಸಿದರು. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಮಿಂಚುವುದಾಗಿ ಹೇಳಿದರು. ಆದರೀಗ ರಮ್ಯಾ ಆ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಹೋಸ್ಟೆಲ್ ಹುಡುಗರು ತಂಡ ರಮ್ಯಾಗಾಗಿ ಪ್ರತಿಭಟನೆ ಮಾಡಿದ್ದಾರೆ, ಗುಡಿ ಕಟ್ಟಿಸಿ ಪೂಜೆ ಮಾಡಿದ್ದಾರೆ. ಹಾಸ್ಟೆಲ್ ಹುಡುಗರ ಪ್ರತಿಭಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏನಿದು ಮ್ಯಾಟ್ರು ಅಂತೀರಾ, ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ಸಿನಿಮಾದ ಪ್ರಚಾರಕ್ಕಾಗಿ ಒಂದು ವಿಡಿಯೋ ಮಾಡಲಾಗಿದೆ. ಪ್ರಚಾರ ವಿಡಿಯೋದಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. 

ನಿತಿನ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ಸಿನಿಮಾ ಈಗಾಗಲೇ ಅನೇಕ ವಿಚಾರಗಳಿಗೆ ಸದ್ದು ಮಾಡುತ್ತಿದೆ.  ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ.ಪಿ. ಅವರ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣ ಆಗಿರುವ ಮೊದಲ ಚಿತ್ರವಿದು. ಆರಂಭದಿಂದಲೂ ಈ ಸಿನಿಮಾ ವಿಶೇಷ ಪ್ರೋಮೋಗಳ ಮೂಲಕ ಗಮನ ಸೆಳೆಯುತ್ತಿದೆ. ಈ ಮೊದಲು ಪುನೀತ್​ ರಾಜ್​ಕುಮಾರ್​ ಅವರು ಈ ಚಿತ್ರತಂಡಕ್ಕೆ ಬೆಂಬಲ ನೀಡಿದ್ದರು. ಈಗ ರಮ್ಯಾ ಸಾಥ್​ ನೀಡಿರುವುದು ಚಿತ್ರಕ್ಕೆ ಮತ್ತಷ್ಟು ಬಲಬಂದಂತೆ ಆಗಿದೆ. 

ಕನ್ನಡ ರಾಜ್ಯೋತ್ಸವ ಸಂಭ್ರಮ; ಅಣ್ಣಾವ್ರ ಹಾಡಿಗೆ ಸಕತ್ ಡ್ಯಾನ್ಸ್ ಮಾಡಿದ ಪಿಎಸ್‌ಐ ರಮ್ಯಾ!

ಸಖತ್ ಕ್ರಿಯೇಟ್ ಆಗಿ ಪ್ರಚಾರ ಕಾರ್ಯ ಮಾಡುತ್ತಿರುವ ಈ ತಂಡ ಇದೀಗ ಮತ್ತೊಂದು ವಿಭಿನ್ನ ಕಾನ್ಸೆಪ್ಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರದಿಂದ ಮತ್ತೊಂದು ವಿಡಿಯೋ  ತಯಾರಾಗಿದೆ. ನಟಿ ರಮ್ಯಾ ತಮ್ಮ ಸಿನಿಮಾದಲ್ಲಿ ನಟಿಸಬೇಕು ಎಂದು ಹಾಸ್ಟೆಲ್​ ಹುಡುಗರು ಪ್ರತಿಭಟನೆ ಮಾಡುತ್ತಾರೆ. ಕೆಲವರಂತೂ ಕೈ-ಕಾಲು ಕತ್ತರಿಸಿಕೊಳ್ಳತ್ತಾರೆ. ರಮ್ಯಾ ಕಂಬ್ಯಾಕ್​ ಮಾಡಬೇಕು ಎಂದು ಕೆಲವರು ಗುಡಿ ಕಟ್ಟಿಸಿ ಪೂಜೆ ಮಾಡಿಸುತ್ತಾರೆ. ಕೊನೆಗೂ ರಮ್ಯಾ ಅವರು ಒಪ್ಪಿಕೊಂಡು ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಾರೆ. ಅದಕ್ಕೆ ಪ್ರತಿಯಾಗಿ ರಮ್ಯಾಗೆ ವಿಚಿತ್ರವಾದ ಸಂಭಾವನೆ ದೊರೆಯುತ್ತದೆ. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ರಮ್ಯಾ ಕೂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.  

ಜಂಟಲ್‌ಮ್ಯಾನ್ ಅಪ್ಪು: ರಮ್ಯಾ ಕನಸನ್ನು ನನಸು ಮಾಡ್ಲೇ ಇಲ್ಲ!

ಹೊಸಬರ ಕ್ರಿಯೇಟಿವಿಟಿ ಮೆಚ್ಚಿಕೊಂಡಿರುವ ರಮ್ಯಾ ಕೂಡ ಈ ತಂಡಕ್ಕೆ ಸಾಥ್​ ನೀಡಿದ್ದಾರೆ. ಪ್ರೋಮೋ ವಿಡಿಯೋದಲ್ಲಿ ನಟಿಸುವ ಮೂಲಕ ರಮ್ಯಾ ಅವರು ಮತ್ತೆ ಬಣ್ಣ ಹಚ್ಚಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ರಂಗಭೂಮಿಯ ಅನೇಕ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ಸ್ಟಾರ್ ನಟರು ಅತಿಥಿ ಪಾತ್ರ ಮಾಡಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಜನವರಿಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಅವರು ಸಂಕಲನ ಮಾಡಿದ್ದಾರೆ.

Latest Videos
Follow Us:
Download App:
  • android
  • ios