Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವ ಸಂಭ್ರಮ; ಅಣ್ಣಾವ್ರ ಹಾಡಿಗೆ ಸಕತ್ ಡ್ಯಾನ್ಸ್ ಮಾಡಿದ ಪಿಎಸ್‌ಐ ರಮ್ಯಾ!

ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪಿಎಸ್‌ಐ ಕನ್ನಡ ಹಾಡಿಗೆ ಮಸ್ತ್ ಹೆಜ್ಜೆ ಹಾಕಿ ಸುದ್ದಿಯಾಗಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆ ಹಾಕಿದ ಪಿಎಸ್ಐ ರಮ್ಯಾ ಎಲ್ಲರೂ ಹುಬ್ಬೇರಿಸುವಂತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

PSI Ramya performed super dance to Annavra song in Kannada Rajyotsava celebration.
Author
First Published Nov 1, 2022, 7:45 PM IST

ಚಿಕ್ಕಮಗಳೂರು (ನ.1) : ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪಿಎಸ್‌ಐ ಕನ್ನಡ ಹಾಡಿಗೆ ಮಸ್ತ್ ಹೆಜ್ಜೆ ಹಾಕಿ ಸುದ್ದಿಯಾಗಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆ ಹಾಕಿದ ಪಿಎಸ್ಐ ರಮ್ಯಾ ಎಲ್ಲರೂ ಹುಬ್ಬೇರಿಸುವಂತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಕಡೂರು ಪೊಲೀಸ್ ಠಾಣೆಯ ಪಿಎಸ್ಐ ಆಗಿರುವ ರಮ್ಯಾ ಇಂದು ಕಡೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರ ಜತೆಗೆ ನೂರಾರು ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ದಿನ ಕನ್ನಡದಲ್ಲೇ ಮಾತನಾಡಿದ ರಜಿನಿ, ಜೂ. ಎನ್‌ಟಿಆರ್‌

ನಾಡಿನಲ್ಲೆಡೆ ಇಂದು ಕನ್ನಡ ರಾಜ್ಯೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಡಗರ ಸಂಭ್ರಮದಿಂದ ರಾಜ್ಯೋತ್ಸವನ್ನು ಆಚರಣೆ ಮಾಡಲಾಯಿತು. ಈ ಸಂಭ್ರಮದಲ್ಲಿ ಪೊಲೀಸ್ ಠಾಣಾಧಿಕಾರಿ ರಮ್ಯಾ ಅವರು ಸಕತ್ ಡ್ಯಾನ್ಸ್ ಮಾಡುವ ಮೂಲಕ ಎಲ್ಲರೂ ಗಮನ ಸೆಳೆದರು.

 ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಮಸ್ತ್ ಸ್ಟೆಪ್ಸ್  ಹಾಕಿದರು. ಪಿಎಸ್‌ಐ ಅವರ ಡ್ಯಾನ್ಸ್ ನೋಡಿ ನೂರಾರು ಕನ್ನಡಾಭಿಮಾನಿಗಳು ಅವರೊಂದಿಗೆ ಕುಣಿದು ಕುಪ್ಪಳಿಸಿದರು. 

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದ ಶುಭಕೋರಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!

 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಡೂರು ಆಟದ ಮೈದಾನದಲ್ಲಿ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮ ಮುಗಿದ ಬಳಿಕ ಕನ್ನಡಾಭಿಮಾನಿಗಳು ಕನ್ನಡ ಹಾಡಿಗೆ ಕುಣಿಯುತ್ತಿದ್ದರು. ಇದೇ  ವೇಳೆ, ಬಂದೋಬಸ್ತ್ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಿಎಸ್‌ಐ ರಮ್ಯಾ ಕೂಡ ಜನಸಾಮಾನ್ಯರ ಜೊತೆ ಸೇರಿ ಕುಣಿದಿದ್ದಾರೆ. ಈ ವೇಳೆ, ಕನ್ನಡದ ಅಭಿಮಾನಿಗಳು ಮೈಕಿನಲ್ಲಿ ತಾವೇ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹೇಳುತ್ತಿದ್ದರು. ಆಗ, ಶಾಲಾ ಮಕ್ಕಳು ಸೇರಿದಂತೆ ಪುರುಷರು-ಮಹಿಳೆಯರು ಕುಣಿಯುತ್ತಿದ್ದರು. ಮಹಿಳೆಯೊಬ್ಬರು ಪಿಎಸ್‌ಐ ಕೈ ಹಿಡಿದು ಎಳೆದಿದ್ದಾರೆ. ಆಗ ಪಿಎಸ್‌ಐ ರಮ್ಯಾ ಕೂಡ ಎಲ್ಲರ ಜೊತೆ ಸೇರಿ ಕನ್ನಡ ನೆಲದ ಸಾಂಸ್ಕೃತಿಕ ಸಾರುವ ಹಾಡಿಗೆ ಎಲ್ಲರ ಜೊತೆಗೂಡಿ ಕುಣಿದು ಸಂಭ್ರಮಿಸಿದ್ದಾರೆ. ಪಿಎಸ್‌ಐ ಅವರ ಈ ಡ್ಯಾನ್ಸ್ ಎಲ್ಲೆಡೆ ವೈರಲ್ ಆಗಿದೆ. ಜತೆಗೆ ಜನಸಾಮಾನ್ಯರ ಜತೆಗೆ ಸಂಭ್ರಮದಿಂದ ಜತೆಗೂಡಿ ಕುಣಿದ ಪಿಎಸ್‌ಐ ರಮ್ಯಾ ಬಗ್ಗೆ ಮೆಚ್ಚು ವ್ಯಕ್ತವಾಗಿದೆ. 

Follow Us:
Download App:
  • android
  • ios