‘ಸ್ಪಾರ್ಕ್‌’ ಚಿತ್ರತಂಡ ಮತ್ತು ನೆನಪಿರಲಿ ಪ್ರೇಮ್‌ ವಿರುದ್ಧ ನಟ ರಮೇಶ್ ಇಂದಿರಾ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಚಿತ್ರತಂಡ ತನ್ನ ಅನುಮತಿಯಿಲ್ಲದೇ ಭೀಮ ಚಿತ್ರದಲ್ಲಿನ ತನ್ನ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ರಮೇಶ್ ಇಂದಿರಾ ಆರೋಪಿಸಿದ್ದಾರೆ.

ಸ್ಪಾರ್ಕ್‌ ಚಿತ್ರತಂಡ ನೆನಪಿರಲಿ ಪ್ರೇಮ್ ಹುಟ್ಟುಹಬ್ಬಕ್ಕೆ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಈ ಪೋಸ್ಟರಲ್ಲಿ ನೆನಪಿರಲಿ ಪ್ರೇಮ್‌ ಒಂದು ಪತ್ರಿಕೆಯನ್ನು ಸಿಗರೇಟಲ್ಲಿ ಸುಡುವ ಚಿತ್ರವಿತ್ತು. ಈ ಪತ್ರಿಕೆಯಲ್ಲಿ ರಮೇಶ್‌ ಇಂದಿರಾ ಫೋಟೋ ಇತ್ತು. ಆದರೆ ಚಿತ್ರತಂಡ ರಮೇಶ್‌ ಇಂದಿರಾ ಅ‍ವರ ಅನುಮತಿಯನ್ನೇ ತೆಗೆದುಕೊಂಡಿಲ್ಲ. ಯಾರಿಗೂ ಹೇಳದೆ ಕೇಳದೆ ಫೋಟೋ ಬಳಸಿದ್ದರಿಂದ ಇದೀಗ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ. 

ಅನುಮತಿಯಿಲ್ಲದೇ ತನ್ನ ಫೋಟೋವನ್ನು ಪೋಸ್ಟರ್‌ನಲ್ಲಿ ಬಳಸಿಕೊಂಡದ್ದಕ್ಕೆ ‘ಸ್ಪಾರ್ಕ್‌’ ಚಿತ್ರತಂಡ ಮತ್ತು ನೆನಪಿರಲಿ ಪ್ರೇಮ್‌ ವಿರುದ್ಧ ನಟ ರಮೇಶ್ ಇಂದಿರಾ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಚಿತ್ರತಂಡ ತನ್ನ ಅನುಮತಿಯಿಲ್ಲದೇ ಭೀಮ ಚಿತ್ರದಲ್ಲಿನ ತನ್ನ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ರಮೇಶ್ ಇಂದಿರಾ ಆರೋಪಿಸಿದ್ದಾರೆ.

ನನ್ನ ಕೈ ಹಿಡಿದ ಚಿತ್ರರಂಗವೇ ನನ್ನ ಮಕ್ಕಳನ್ನು ಬೆಳೆಸುತ್ತದೆಂಬ ನಂಬಿಕೆ ಇದೆ: ನೆನಪಿರಲಿ ಪ್ರೇಮ್‌

ಈ ಬಗ್ಗೆ ವಿವರ ನೀಡಿದ ರಮೇಶ್ ಇಂದಿರಾ ಅವರ ಬ್ಯುಸಿನೆಸ್‌ ಪಾರ್ಟನರ್‌ ಶ್ರುತಿ ನಾಯ್ಡು, ‘ಸ್ಪಾರ್ಕ್‌ ಸಿನಿಮಾದಲ್ಲಿ ನಟಿಸುವ ಸಂಬಂಧ ರಮೇಶ್‌ ಇಂದಿರಾ ಅವರೊಂದಿಗೆ ಚಿತ್ರತಂಡ ಯಾವುದೇ ಅಗ್ರಿಮೆಂಟ್‌ ಮಾಡಿಕೊಂಡಿಲ್ಲ. ಅಡ್ವಾನ್ಸ್‌ ನೀಡಿಲ್ಲ. ಅಲ್ಲದೇ ಈ ಸಿನಿಮಾದವರು ಬಳಸಿಕೊಂಡಿದ್ದು ಭೀಮ ಸಿನಿಮಾದಲ್ಲಿನ ರಮೇಶ್‌ ಅವರ ಫೋಟೋವನ್ನು. ಇವರ ಸಿನಿಮಾಕ್ಕೆ ಬೇಕಾದ ಫೋಟೋಶೂಟ್‌ ಅನ್ನು ಈ ಚಿತ್ರತಂಡದವರೇ ಮಾಡಬೇಕಲ್ವಾ? 

ಅದು ಬಿಟ್ಟು ಬೇರೆ ಸಿನಿಮಾದ ಪಾತ್ರದ ಫೋಟೋ ಬಳಸಿಕೊಳ್ಳುವುದು ಎಷ್ಟು ಸರಿ, ಈ ಬಗ್ಗೆ ರಮೇಶ್‌ ಇಂದಿರಾ ಮ್ಯಾನೇಜರ್‌ ಸ್ಪಾರ್ಕ್‌ ಚಿತ್ರತಂಡವನ್ನು ಸಂಪರ್ಕಿಸಿದ್ದಾರೆ. ಆಗ ಚಿತ್ರತಂಡದವರು ಅಸಮಂಜಸ ಉತ್ತರ ನೀಡಿದ್ದಾರೆ. ಮುಂದೊಂದು ದಿನ ನಾವು ರಮೇಶ್‌ ಇಂದಿರಾ ಅವರಿಗೆ ನಮ್ಮ ಸಿನಿಮಾ ಕಥೆಯನ್ನು ಹೇಳಿದಾಗ ಅವರು ಖಂಡಿತಾ ಇಷ್ಟಪಟ್ಟು ಅಭಿನಯಿಸುತ್ತಾರೆ ಎಂಬ ವಿಶ್ವಾಸದಲ್ಲಿ ಅವರ ಫೋಟೋ ಬಳಸಿಕೊಂಡಿದ್ದೇವೆ ಎಂಬ ಮಾತನ್ನು ಚಿತ್ರತಂಡದವರು ಹೇಳಿದ್ದಾರೆ. 

ವೀರ ಚಂದ್ರಹಾಸ ಚಿತ್ರ ವಿಮರ್ಶೆ: ಯಕ್ಷಗಾನ ಪ್ರೀತಿಯಿಂದ ಹುಟ್ಟಿದ ವಿಶಿಷ್ಟ ಪ್ರಯೋಗ

ಈ ಥರ ಎಲ್ಲಾದರೂ ನಡೆಯುತ್ತದಾ? ನಾವು ಇದನ್ನು ಇಷ್ಟಕ್ಕೇ ಬಿಡಲು ಸಿದ್ಧರಿಲ್ಲ. ರಮೇಶ್‌ ತನ್ನ ಅಭಿನಯದಿಂದ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ತಮಿಳು, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಹೀಗಿರುವಾಗ ಅವರನ್ನು ಬಳಸಿಕೊಂಡು ತಮ್ಮ ಚಿತ್ರಕ್ಕೆ ಪ್ರಚಾರ ಪಡೆದುಕೊಳ್ಳಲು ಚಿತ್ರತಂಡ ಮುಂದಾದಂತೆ ತೋರುತ್ತದೆ. ಇದಕ್ಕೆ ಕಾನೂನಿನ ಮೂಲಕವೇ ರಮೇಶ್‌ ಉತ್ತರಿಸಲಿದ್ದಾರೆ’ ಎಂದಿದ್ದಾರೆ.