ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುವಾಗ ನಟಿ ರಂಭಾ ಕಾರು ಅಪಘಾತ. ಆಸ್ಪತ್ರೆಯಲ್ಲಿ ಕಿರಿಯ ಮಗಳು ಸೀರಿಯಸ್....
ಬಹುಭಾಷಾ ನಟಿ ರಂಭಾ 2010ರಲ್ಲಿ ಇಂದ್ರಕುಮಾರ್ ಪದ್ಮನಾಥನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ನೆಲೆಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನಿದ್ದು ಅಲ್ಲಿಯೇ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಶಾಲೆಯಿಂದ ಮನೆಗೆ ಮಕ್ಕಳ ಜೊತೆ ರಂಭಾ ಹಿಂತಿರುಗಿ ಬರುವಾದ ರಸ್ತೆ ಅಪಘಾತವಾಗಿದೆ, ಕಿರಿ ಮಗಳಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಂಭಾ ಪೋಸ್ಟ್:
'ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಮನೆ ಕಡೆ ಹೋಗುವಾಗ ಕಾರೊಂದು ಬಂದು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ನನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ನಾನಿ ಇದ್ದರು. ನಾವೆಲ್ಲರೂ ಸೇಫ್ ಆಗಿದ್ದೀವಿ ಆದರೆ ನನ್ನ ಕಿರಿ ಮಗಳು ಸಾಶ ಇನ್ನೂ ಆಸ್ಪತ್ರೆಯಲ್ಲಿದ್ದಾಳೆ. ಕೆಟ್ಟ ದಿನಗಳು ಕೆಟ್ಟ ಸಮಯಗಳು ದಯವಿಟ್ಟು ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆ ನಮಗೆ ತುಂಬಾನೇ ಮುಖ್ಯ' ಎಂದು ರಂಭಾ ಬರೆದುಕೊಂಡಿದ್ದಾರೆ.
![]()
ಏನಿದು ಘಟನೆ:
ನಟಿ ರಂಭಾ ಮಕ್ಕಳನ್ನು ಶಾಲೆಗೆ ಬಿಡುವುದು ಮತ್ತು ಪಿಕ್ ಮಾಡುವ ಕೆಲಸ ಮಾಡುತ್ತಾರೆ. ಕಾರಿನ್ನು ರಂಭಾ ಚಲಾಯಿಸುತ್ತಿದ್ದು ಕಾರಿನ ಬಲ ಬದಿಯಿಂದ ಬಂದು ಕಾರು ಡಿಕ್ಕಿ ಹೊಡೆದಿದೆ. ರಂಭಾ ಜೊತೆ ಕಾರಿನಲ್ಲಿ ಮಕ್ಕಳ ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಾಕೆ ಇದ್ದರು. ಎಲ್ಲರೂ ಕ್ಷೇಮವಾಗಿದ್ದು ಚಿಕ್ಕ ಪುಟ್ಟಗಾಯದಿಂದ ಪಾರಾಗಿದ್ದಾರೆ ಆದರೆ ಕಿರಿಯ ಪುತ್ರಿ ಸಾಶಾ ಮಾತ್ರ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದಾರೆ.
7 ತಿಂಗಳು ಕೋಮಾದಲ್ಲಿದ್ದೇ ಮಗುವಿಗೆ ಜನ್ಮವಿತ್ತ ಅಮ್ಮ!
ರಂಭಾ ಟೊರೊಂಟೊದಲ್ಲಿ ಬಿಳಿ ಬಣ್ಣ ಟೆಸ್ಲಾ ಕಾರನ್ನು ಬಳಸುತ್ತಾರೆ. ಕಾರಿನ ಬಲಭಾಗದ ಮುಂದಿನ ಬಾಗಿಲಿಗೆ ಪೆಟ್ಟಾಗಿದ್ದು ಕಾರು ಹೊಡೆದಿರುವ ರಭಸಕ್ಕೆ ಏರ್ ಬ್ಯಾಗ್ ತೆರೆದುಕೊಂಡಿರುವುದು ಫೋಟೋದಲ್ಲಿ ಕಾಣಬಹುದು.
16 ವರ್ಷಕ್ಕೆ ಸಿನಿಮಾಕ್ಕೆ ಕಾಲಿಟ್ಟ ರಂಭಾ:
ಸಲ್ಮಾನ್ ಖಾನ್ ಅವರ ಜುಡ್ವಾ (1997) ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಂಭಾ ಜೂನ್ 5, 1976ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. 1992ರ ತೆಲುಗು ಚಿತ್ರ ಆ ಒಕ್ಕಿ ಅಡಕ್ಕು ಮೂಲಕ ಅವರು ಸಿನಿಮಾಕ್ಕೆ ಬಂದರು. 17 ಬಾಲಿವುಡ್ ಮತ್ತು 100ಕ್ಕೂ ಹೆಚ್ಚು ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ ರಂಭಾ ಪ್ರಸ್ತುತ ಮಕ್ಕಳನ್ನು ಗ್ಲಾಮರ್ ಪ್ರಪಂಚದಿಂದ ದೂರವಿರಿಸುವಲ್ಲಿ ನಿರತರಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿಯರಲ್ಲಿ ರಂಭಾ ಅವರ ಹೆಸರು ಕೂಡ ಒಂದು. ಅವರು 16 ವರ್ಷದವಳಿದ್ದಾಗ, ಮಲಯಾಳಂ ಚಿತ್ರ 'ಸರ್ಗಂ' ಚಿತ್ರದಲ್ಲಿ ನಟಿಸಿದ್ದರು.1995 ರಲ್ಲಿ 'ಜುಡ್ವಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದರು. ರಂಭಾ ಕೊನೆಯ ಬಾರಿಗೆ 11 ವರ್ಷಗಳ ಹಿಂದೆ 2010 ರ ತಮಿಳು ಚಿತ್ರ ಪೆನ್ ಸಿಂಗಂನಲ್ಲಿ ಕಾಣಿಸಿಕೊಂಡರು.ಇದರ ನಂತರ, ಸಿನಮಾದಿಂದ ದೂರವಾಗಿ ಕೆನಡಾ ಮೂಲದ ಉದ್ಯಮಿ ಇಂದ್ರನ್ ಪದ್ಮನಾಥನ್ ಅವರನ್ನು ವಿವಾಹವಾದರು. ರಂಭಾ ಕೆನಡಾಕ್ಕೆ ಸ್ಥಳಾಂತರಗೊಂಡರು.
2011ರ ಜನವರಿಯಲ್ಲಿ ಹಿರಿಯ ಮಗಳು ಲನ್ಯಾಗೆ ಜನ್ಮ ನೀಡಿದರೆ, ಮಾರ್ಚ್ 2015ರಲ್ಲಿ, ಕಿರಿಯ ಮಗಳು ಸಶಾ ಜನಿಸಿದಳು ಮತ್ತು 23 ಸೆಪ್ಟೆಂಬರ್ 2018 ರಂದು ಮಗನಿಗೆ ಜನ್ಮ ನೀಡಿದರು.ಕೆಲವು ವರ್ಷಗಳ ನಂತರ, ರಂಭಾ ಮತ್ತು ಅವಳ ಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದ ವರದಿಗಳು ಬಂದವು, ಈ ಕಾರಣದಿಂದಾಗಿ ಇಬ್ಬರೂ ಬೇರ್ಪಟ್ಟರು. ರಂಭಾಳನ್ನು ಮದುವೆಯಾಗುವ ಮೊದಲೇ ಪತಿ ಮದುವೆಯಾಗಿದ್ದರು ಮತ್ತು ಇದನ್ನು ರಂಭಾರಿಂದ ಮುಚ್ಚಿಟ್ಟರು, ಎನ್ನಲಾಗಿತ್ತು.ಅಷ್ಟೇ ಅಲ್ಲ, ರಂಭಾಗೆ ತುಂಬಾ ಕಿರುಕುಳ ನೀಡಿದ್ದರು. ಹೆಣ್ಣು ಮಕ್ಕಳನ್ನು ಭೇಟಿಯಾಗಲು ಸಹ ಅವಕಾಶ ನೀಡಲಿಲ್ಲ ಎಂಬ ವರದಿಯ ಜೊತೆ 2018 ರಲ್ಲಿ, ರಂಭಾ ಅವರ ಆತ್ಮಹತ್ಯೆಯೂ ಸುದ್ದಿ ಬೆಳಕಿಗೆ ಬಂದಿತು. ವಾಸ್ತವವಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ನಟಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ವರದಿಗಳು ಹೇಳಿದ್ದವು.ಅವರು ಎಂದಿಗೂ ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ. ಮನೆಯಲ್ಲಿ ಲಕ್ಷ್ಮಿ ಪೂಜೆಯ ಕಾರಣ ಇಡೀ ದಿನ ಉಪವಾಸ ಮಾಡಿದ್ದರು. ಮರುದಿನ ಸ್ವಲ್ಪ ಉಪಾಹಾರ ಸೇವಿಸಿ ಶೂಟಿಂಗ್‌ಗೆ ಹೋದಾಗ ಪ್ರಜ್ಞಾ ತಪ್ಪಿದ್ದರು. ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ನಂತರ ರಂಭಾ ಅವರೇ ಈ ಘಟನೆ ಬಗ್ಗೆ ನಂತರ ಸ್ಪಷ್ಟನೆ ನೀಡಿದರು.
