* ರಾಮನಗರಕ್ಕೆ ರೈಡರ್ ಟೀಮ್ ಭೇಟಿ * ನಟ ನಿಖಿಲ್ ಕುಮಾರಸ್ವಾಮಿ,  ಸೇರಿದಂತೆ ಹಲವರು ಭೇಟಿ* ನೆಚ್ಚಿನ ನಟನನ್ನು ಭರ್ಜರಿ ಬರಮಾಡಿಕೊಂಡ ಅಭಿಮಾನಿಗಳು

ರಾಮನಗರ, (ಡಿ.26): ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರುವ ‘ರೈಡರ್​’ ಚಿತ್ರ (Rider Movie) ಡಿ.24ರಂದು ಬಿಡುಗಡೆ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.

ಇದೇ ಖುಷಿಯಲ್ಲಿ ರೈಡರ್ ಚಿತ್ರತಂಡ ಇಂದು (ಡಿ.26) ರಾಮನಗರದ (Ramanagara) ಶಾನ್ ಚಿತ್ರಮಂದಿರಕ್ಕೆ ಭೇಟಿ ನೀಡಿತು. ಈ ವೇಳೆ ರೇಷ್ಮೆ ನಗರಿಯ ಅಭಿಮಾನಿಗಳು ಐಜೂರು ವೃತ್ತದಿಂದ ಡೊಳ್ಳು ಕುಣಿತೆದೊಂದಿಗೆ ಚಿತ್ರಮಂದಿರ ವರೆಗೆ ಬರಮಾಡಿಕೊಂಡಿರುವುದು ವಿಶೇಷ. ಇನ್ನು ಚಿತ್ರಮಂದಿರದ ಬಳಿ ಬರುತ್ತಿದ್ದಂತೆ ಹೂ ಮಳೆ ಸುರಿಸಿದರು. ಅಲ್ಲದೇ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಜೈಕಾರ ಹಾಕಿದರು.

Kannada Film Review: ರೈಡರ್

ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರೈಡರ್ ಚಿತ್ರಕ್ಕೆ ಒಳ್ಳೇಯ ರೆಸ್ಪಾನ್ಸ್ ಸಿಕ್ಕಿದ್ದು, ಕಲೆಕ್ಷನ್ ನಲ್ಲಿ ಬೆಳವಣಿಗೆ ‌ಕಾಣುತ್ತಿದೆ. ನಾನು ಮಾಡಿರುವ ಚಿತ್ರಗಳಲ್ಲಿ ಇದು ವಿಷಯ ಇರೋ ಚಿತ್ರ ಪ್ರೇಕ್ಷಕರು ಕೂಡ ಉತ್ತಮ ರೀತಿಯ ಪ್ರತಿಕ್ರಿಯೆ ಕೊಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಬಂದ್ ಮಾಡುವುದರಿಂದ ಅನಾನುಕೂಲವಾಗಬಾರದು, ಬಂದ್ ನಿಂದ ಜನರಿಗೆ ಎಷ್ಟು ಅನುಕೂಲವಾಗುತ್ತೆ ಅಂತಾ ಯೋಚನೆ‌ ಮಾಡಬೇಕು. ಪ್ರಚಾರ ಮಾಡಲು ಬಂದ್ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡಬಾರದು. 31ಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಚಿತ್ರರಂಗಕ್ಕೆ ಸಾಕಷ್ಟು ಹೊಡೆತ ಆಗುತ್ತೆ ಎಂದರು.

Rider Response: ನಿಖಿಲ್ ಕುಮಾರಸ್ವಾಮಿ 'ರೈಡರ್' ಸಿನಿಮಾ ಹೇಗಿದೆಯಂತೆ ಗೊತ್ತಾ?

ಮೊದಲ ಮೂರು‌ ದಿನ ಕಲೆಕ್ಷನ್‌ ಆಗೋದು. ಬಂದ್‌ ನ ಹಿಂದಿನ ಉದ್ದೇಶ ಉಪಯೋಗವಾಗುವಂತಿದ್ದರೇ ಬಂದ್ ಮಾಡಲಿ. ಪ್ರಚಾರಕ್ಕಾಗಿ ಬಂದ್ ಮಾಡಿದ್ರೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಎರಡು ವರ್ಷಗಳಿಂದ ಕೊವಿಡ್ ಸಮಸ್ಯೆಗಳನ್ನ ಎದುರಿಸಿದ್ದೇವೆ. ಕೊವಿಡ್ ನಿಂದ ಚಿತ್ರಗಳ ಬಿಡುಗಡೆ ಲೇಟ್ ಆಗಿದೆ. ಮೊದಲು ಜನರ ಆರೋಗ್ಯ ಮುಖ್ಯ. ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವುಗಳನ್ನು ನೋಡಿದ್ದೇವೆ. ಜನರಿಗಾಗಿ ಸರ್ಕಾರ ಮಾಡುವ ತೀರ್ಮಾನವನ್ನ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.

ರೈಡರ್ ಸಿನಿಮಾಗೆ ಪೈರಸಿ ಕಾಟ
ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾವನ್ನು ತೆರೆ ಮೇಲೆ ನೋಡಲು 1ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳ ಆಸೆಗೆ ಪೈರಸಿ ಕಾಟದಿಂದ ತಣ್ಣಿರು ಎರಚಿದಂತಾಗಿದೆ. ಉತ್ತಮ ರೆಸ್ಪಾನ್ಸ್ ಹಿನ್ನೆಲೆ ನಿಖಿಲ್ ವಿಜಯ ಯಾತ್ರೆ ಮಾಡುತ್ತಿದ್ದಾರೆ. ಆದರೆ ಇತ್ತ ಸಿನಿಮಾ ಪೈರಸಿಯಾಗಿದೆ.

ಸಿನಿಮಾ ರಿಲೀಸ್ ಆದ ಎರಡನೇ ದಿನಕ್ಕೆ ಕಿಡಿಗೇಡಿಗಳಿಂದ ರೈಡರ್ ಸಿನಿಮಾ ಪೈರಸಿಯಾಗಿದೆ. ತಮಿಳ್ ರಾಕರ್ಸ್‍ನಿಂದ ರೈಡರ್‌ಗೆ ಪೈರಸಿ ಕಾಟ ಶುರುವಾಗಿದೆ. ಕಿಡಿಗೇಡಿಗಳ ವಿರುದ್ಧ ರೈಡರ್ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ.

ತಾರಾಗಣ : ನಿಖಿಲ್‌ ಕುಮಾರಸ್ವಾಮಿ, ಕಾಶ್ಮೀರ ಪರದೇಸಿ, ಚಿಕ್ಕಣ್ಣ, ಗರುಡ ರಾಮ್‌, ರಾಜೇಶ್‌ ನಟರಂಗ, ಅಚ್ಯುತ, ಶಿವರಾಜ್‌ ಕೆ ಆರ್‌ ಪೇಟೆ, ಶೋಭರಾಜ್‌

ನಿರ್ದೇಶನ: ವಿಜಯ ಕುಮಾರ್‌ ಕೊಂಡ

ರೇಟಿಂಗ್‌: 4