Asianet Suvarna News Asianet Suvarna News
breaking news image

ನಿಮ್ ಮಾತು ಕೇಳಿ ಕೇಳಿ ಸಾಕಾಗೋಗಿದೆ, ನಮ್ Bossಗೆ ಈ ತರ ಚಿತ್ರಹಿಂಸೆ ಕೊಡಬೇಡಿ, ಜೈ ಡಿ ಬಾಸ್..!

ಅಭಿಮಾನಿಗಳಿಗೆ ಸದ್ಯ ದರ್ಶನ್ ಅವರನ್ನು ನೋಡಲು ಸಾಧ್ಯವಾಗುವುದಿಲ್ಲ. ಕಾರಣ, ದರ್ಶನ್ ಫ್ಯಾನ್ಸ್ ಇರುವುದು ಒಬ್ಬಿಬ್ಬರಲ್ಲ, ಕೋಟಿ ಕೋಟಿ. ನಟ ದರ್ಶನ್ ಅವರನ್ನು ಜೈಲಿನಲ್ಲಿ ನೋಡಲು ಸಾಧ್ಯವಿರುವುದು ವಾರಕ್ಕೆ ಮೂರು ಜನರಿಗೆ ಮಾತ್ರ...

Renukaswamy Accused actor darshan fan comment goes viral in social media srb
Author
First Published Jul 5, 2024, 7:49 PM IST

ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ (Actor Darshan) ಹಾಗು ಅವರ ಸ್ನೇಹಿತೆ ಪವಿತ್ರಾ ಗೌಡ (Pavithra Gowda) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವುದು ಗೊತ್ತೇ ಇದೆ. ಈ ಇಬ್ಬರು ಮಾತ್ರವಲ್ಲ, ಇವರಿಬ್ಬರೂ ಸೇರಿದಂತೆ ಒಟ್ಟೂ ಹದಿನೇಳು ಜನರು ಆರೋಪಿಗಳಾಗಿದ್ದು, ಈಗ ಎಲ್ಲರೂ ಜೈಲುವಾಸ ಅನುಭವಿಸುತ್ತಿದ್ದಾರೆ. ನಟ ದರ್ಶನ್ ನಂಬರ್ 2 ಆರೋಪಿಯಾಗಿದ್ದಾರೆ. ಹಲವರು ಈಗ ನಟ ದರ್ಶನ್ ಪರ ಬ್ಯಾಟ್ ಬೀಸಲು ಶುರು ಮಾಡಿದ್ದಾರೆ. 

ಅದರಲ್ಲೂ ಮುಖ್ಯವಾಗಿ ನಟ ದರ್ಶನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಟ ದರ್ಶನ್ ಅರೆಸ್ಟ್ ಆಗಿ ಪೊಲೀಸ್ ಕಸ್ಟಡಿಯಲ್ಲಿ ಇದ್ದ ದಿನದಿಂದಲೂ ಡಿ ಬಾಸ್ ಫ್ಯಾನ್ಸ್ ಅವರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಅನ್ನಪೂರ್ಣೇಶ್ವರಿ ನಗರದ ಪೊಲೀಸ್‌ ಸ್ಟೇಷನ್ ನಲ್ಲಿ ದರ್ಶನ್ ಅಂಡ್ ಟೀಮ್ ಇದ್ದಾಗಿನಿಂದಲೂ ಅಭಿಮಾನಿಗಳು ಅಲ್ಲೂ ಹೋಗಿ ತಮ್ಮ ಮಿತಿಮೀರಿದ ಅಭಿಮಾನ ಮೆರೆಯುತ್ತಲೇ ಇದ್ದರು. ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಾಗಲೂ ಅಲ್ಲಿಗೂ ಹೋಗಿ ನೋಡಲು ಪ್ರಯತ್ನಿಸುತ್ತಿದ್ದಾರೆ. 

ಶಿರಡಿಗೆ ಪ್ರಯಾಣ ಬೆಳೆಸಿದ ಚಂದನ್ ಶೆಟ್ಟಿ, ನಿಮ್ ಒಂಟಿ ಜೀವನ ಚೆನ್ನಾಗಿರ್ಲಿ ಎಂದ ಫ್ಯಾನ್ಸ್!

ಆದರೆ, ಅಭಿಮಾನಿಗಳಿಗೆ ಸದ್ಯ ದರ್ಶನ್ ಅವರನ್ನು ನೋಡಲು ಸಾಧ್ಯವಾಗುವುದಿಲ್ಲ. ಕಾರಣ, ದರ್ಶನ್ ಫ್ಯಾನ್ಸ್ ಇರುವುದು ಒಬ್ಬಿಬ್ಬರಲ್ಲ, ಕೋಟಿ ಕೋಟಿ. ನಟ ದರ್ಶನ್ ಅವರನ್ನು ಜೈಲಿನಲ್ಲಿ ನೋಡಲು ಸಾಧ್ಯವಿರುವುದು ವಾರಕ್ಕೆ ಮೂರು ಜನರಿಗೆ ಮಾತ್ರ. ಹೀಗಿರುವಾಗ ದರ್ಶನ್ ಅಭಿಮಾನಿಗಳು ನೋಡಲು ಹೋದರೆ ಎಷ್ಟು ಜನ ನೋಡಲು ಸಾಧ್ಯ? ಆದರೆ, ಈ ಸಮಯದಲ್ಲಿ ಕೂಡ ನೋಡಲು ಅಸಾಧ್ಯವಾದರೂ ಅಭಿಮಾನಗಳ ಮಿತಿಮೀರಿದ ಅಭಿಮಾನ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ. 

ಸಾಯಂಕಾಲದ ಹೊತ್ತಲ್ಲಿ ಖುಷ್ಬೂ & ಮಾಲಾಶ್ರೀ ಅಲ್ಲೇನ್ ಮಾಡ್ತಿದ್ರು; ಮಗಳು ಕೂಡ ಇದ್ರಲ್ವ..!

ಸೋಷಿಯಲ್ ಮೀಡಿಯಾದಲ್ಲಂತೂ ಡಿ ಬಾಸ್ ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರ ಕಾಮೆಂಟ್ ಭಾರೀ ಗಮನ ಸೆಳೆಯುತ್ತಿದೆ. ಅದೇನು ಗೊತ್ತಾ? 'ಒಂದು ಮಾತು, ಸುಮ್ನೆ ನಮ್ ಬಾಸ್ ಗೇ ಕೊಂದು ಬಿಡಿ, ನಿಮ್ಮ ಈ ಮಾತು ಕೇಳಿ ಕೇಳಿ ನಮಗೆ ಸಾಕು ಆಗಿದೆ.. ಅವ್ರಿಗೆ ಈ ತರ ಚಿತ್ರಹಿಂಸೆ ಕೊಡಬೇಡಿ, ಜೈ ಡಿ ಬಾಸ್' ಎಂದು ನಟ ದರ್ಶನ್ 'ಡೈ ಹಾರ್ಟ್' ಫ್ಯಾನ್ ಒಬ್ಬರು ಕಾಮೆಂಟ್ ಬರೆದುಕೊಂಡಿದ್ದಾರೆ. 

ಕನ್ನಡದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಯಾವಾಗ ಹೊರಗೆ ಬರುತ್ತಾರೋ ಗೊತ್ತಿಲ್ಲ. ತಪ್ಪಿತಸ್ಥನೆಂದು ಕೋರ್ಟ್‌ನಲ್ಲಿ ಸಾಬೀತಾದರೆ ಅದೆಷ್ಟು ಅಂತ ಶಿಕ್ಷೆಯೂ ಪ್ರಕಟವಾಗಿ ನಟ ದರ್ಶನ್ ಜೈಲು ಪಾಲು ಆಗಬೇಕಾಗುತ್ತದೆ. ಆದರೂ, ದರ್ಶನ್ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟ ನಿರಪರಾಧಿ ಎಂದು ಸಾಬೀತಾಗಿ ಮರಳಿ ಬರುವ ನಿರೀಕ್ಷೆ ಬೇಕಾದಷ್ಟಿದೆ. ಅದಕ್ಕಾಗಿ ನಿತ್ಯ ಪೂಜೆ-ಪ್ರಾರ್ಥನೆಗಳೂ ನಡೆಯುತ್ತಿವೆ. ಆದರೆ, ಅಭಿಮಾನಿಗಳ ಆಸೆ ನೆರವೇರುತ್ತಾ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯೇ ಸರಿ..!

ಭಾರತಿ, ಪಾರ್ವತಮ್ಮ ರಾಜ್‌ಕುಮಾರ್ ಪೋಟೋ ವೈರಲ್, ಮಧ್ಯೆ ಅಣ್ಣಾವ್ರು ಇರ್ಬೇಕಿತ್ತು ಎಂದ ನೆಟ್ಟಿಗರು!

ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಮತ್ತಷ್ಟು ವಿಸ್ತರಣೆ ಆಗಿದೆ. ಈ ತಿಂಗಳು 18ರವರೆಗೆ, ಅಂದರೆ 18 ಜುಲೈ 2024ರವರೆಗೆ ಜ್ಯುಡಿಸಿಯಲ್ ಕಸ್ಟಡಿ ಮುಂದುವರೆಯಲಿದೆ. ಇದೀಗ, ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ತುಮಕೂರಿನ ಜೈಲಿನಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟೂ 17 ಆರೋಪಿಗಳು ವಿಚಾರಣಾಧೀನ ಖೈದಿಗಳಾಗಿ ಇದ್ದಾರೆ. 

Latest Videos
Follow Us:
Download App:
  • android
  • ios