ರಾಷ್ಟ್ರ ಮಟ್ಟದಲ್ಲಿ ಮನಸ್ಸು ಗೆಲ್ಲಲಿರುವ ಮುಂದಿನ ಚಿತ್ರ 777 ಚಾರ್ಲಿ ರು.21 ಕೋಟಿಗೆ ಕನ್ನಡ ಪ್ರಸಾರದ ಹಕ್ಕು ಖರೀದಿಸಿದ ಕಲರ್ಸ್‌ ಕನ್ನಡ

ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಲಿರುವ ಮುಂದಿನ ಸಿನಿಮಾ ಎಂಬ ನಿರೀಕ್ಷೆ ಹುಟ್ಟಿರುವ ಸಿನಿಮಾ ‘777 ಚಾರ್ಲಿ’ ಜೂನ್‌ 10ರಂದು ಬಿಡುಗಡೆಯಾಗಲಿದೆ. ರಕ್ಷಿತ್‌ ಶೆಟ್ಟಿನಟಿಸಿರುವ, ಕಿರಣ್‌ರಾಜ್‌ ಕೆ ನಿರ್ದೇಶನದ ಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರು.21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್‌ ಹಕ್ಕು ಕಲರ್ಸ್‌ ಸಂಸ್ಥೆಯ ಒಡೆತನದ ವೂಟ್‌ ಓಟಿಟಿಗೆ ದಕ್ಕಿದೆ.

ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಾಣುತ್ತಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾಯ ಭಾಷೆಯ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ. ಈಗ ಬೇರೆ ಭಾಷೆಗಳ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕು ಪಡೆದುಕೊಳ್ಳಲು ದೊಡ್ಡ ದೊಡ್ಡ ಸಂಸ್ಥೆಗಳೇ ಮುಂದೆ ಬರುತ್ತಿವೆ ಎನ್ನಲಾಗಿದೆ. ರಿಲಯನ್ಸ್‌, ಹಾಟ್‌ಸ್ಟಾರ್‌ ಸಂಸ್ಥೆಗಳು ಸಿನಿಮಾ ನೋಡುತ್ತಿದ್ದು, ಇನ್ನಷ್ಟೇ ಅಂತಿಮ ಘೋಷಣೆ ಹೊರಬೀಳಬೇಕಿದೆ.

ಚಾರ್ಲಿ ಸಿನಿಮಾ ಕೊಟ್ಟಿದ್ದು ಒಂದು ಹಿತವಾದ ಅನುಭವ. ಮನಸ್ಸನ್ನು ತೀವ್ರವಾಗಿ ಅಲ್ಲಾಡಿಸುವ ಕತೆ ಇದರದು. ಕಿರಣ್‌ ರಾಜ್‌ ಎಂಬ ಕತೆಗಾರ, ನಿರ್ದೇಶಕ ಕನ್ನಡದಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಕೊಡಬಹುದು ಎಂಬ ಭರವಸೆ ಕೊಟ್ಟಿದ್ದು ಚಾರ್ಲಿ. ರಕ್ಷಿತ್‌ ಅಭಿನಯ ಮತ್ತು ಚಾರ್ಲಿ ಎಂಬ ನಾಯಿ ತಂದ ಜೀವಂತಿಕೆ ಜೊತೆ ಮನಸ್ಸು ತಟ್ಟುವ ಸಂಭಾಷಣೆ ಈ ಸಿನಿಮಾದ ಪ್ಲಸ್‌ ಪಾಯಿಂಟ್ಸ್‌. ಜಗತ್ತಿನಾದ್ಯಂತ ಕನ್ನಡ ಸಿನಿಮಾ ಸದ್ದು ಮಾಡುತ್ತಿರುವ ಹೆಮ್ಮೆಯ ಸಂದರ್ಭದಲ್ಲಿ ಪ್ರಾಮಾಣಿಕವಾದ ಕತೆಯಿಂದ ಚಾರ್ಲಿ ನಮ್ಮ ಸಂತೋಷ ಹೆಚ್ಚು ಮಾಡಲಿಕ್ಕಿದೆ.

- ಪರಮೇಶ್ವರ ಗುಂಡ್ಕಲ್‌, ಬ್ಯುಸಿನೆಸ್‌ ಹೆಡ್‌, ಕಲರ್ಸ್‌ ಕನ್ನಡ

ರಕ್ಷಿತ್‌ ಶೆಟ್ಟಿಅವರು ಪರಮ್‌ವಃ ಸ್ಟುಡಿಯೋದ ಮೂಲಕ ನಿರ್ಮಿಸಿರುವ ಈ ಸಿನಿಮಾದ ಟ್ರೇಲರ್‌ ಮೇ 10ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್‌ ನೋಡಿರುವ ಸಂಕಲನಕಾರ ಸಚಿನ್‌ ಅವರು ಮಂತ್ರಮುಗ್ಧಗೊಳಿಸುವ ಟ್ರೇಲರ್‌ ಎಂದು ಟ್ವೀಟ್‌ ಮಾಡಿದ್ದಾರೆ.

777 Charlie: ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್!

ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿತ್ತು. ಯಾವಾಗ ತೆರೆ ಮೇಲೆ ಬರಲಿದೆ ಎಂದು ಕಾಯುತ್ತಿದ್ದರು. ಇದೀಗ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ ಸಿನಿಮಾತಂಡ. ಇಂದು (ಏಪ್ರಿಲ್ 10) ರಾಮ ನವಮಿಯ ವಿಶೇಷ ದಿನದಂದು ರಕ್ಷಿತ್ ಶೆಟ್ಟಿ ಆಂಡ್ ಟೀಂ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ.

‘ಮಕ್ಕಳು ಸಿನಿಮಾ ನೋಡಲು ಅತ್ಯುತ್ಸಾಹದಿಂದಿದ್ದಾರೆ. ಚಾರ್ಲಿಯ ಜಗತ್ತು ಅವರಿಗೆ ಇಷ್ಟವಾಗಿಯೇ ಆಗುತ್ತದೆ. ಜೊತೆಗೆ ಫ್ಯಾಮಿಲಿ ಆಡಿಯನ್ಸ್‌ ಇಷ್ಟಪಡುವ ಅಂಶಗಳಿವೆ. ಐದು ಭಾಷೆಗಳಲ್ಲಿ ಚಿತ್ರ ಹೊರಬರುತ್ತಿರುವ ಕಾರಣ ಅಲ್ಲಿನ ಡಿಸ್ಟ್ರಿಬ್ಯೂಟರ್ಸ್‌ಗೆ ಅನನುಕೂಲವಾಗದಂತೆ ಬಿಡುಗಡೆ ದಿನಾಂಕ ನಿಗದಿಗೊಳಿಸಿದ್ದೇವೆ. ಸಿನಿಮಾ ದಿನಾಂಕ ಅಂತಿಮವಾದ ತಕ್ಷಣ ಪೋಸ್ಟರ್‌ ಬಿಡುಗಡೆ, ಅದಾಗಿ 2 ಹಾಡುಗಳ ಬಿಡುಗಡೆ, ಸಿನಿಮಾ ರಿಲೀಸ್‌ಗೂ 25 ದಿನ ಮೊದಲು ಟ್ರೈಲರ್‌ ಬಿಡುಗಡೆ ಮಾಡುತ್ತೇವೆ. ಶೀಘ್ರ ಇವನ್ನೆಲ್ಲ ಜನರಿಗೆ ತಲುಪಿಸುತ್ತೇವೆ’ ಎಂದೂ ಕಿರಣ್‌ ರಾಜ್‌ ತಿಳಿಸಿದ್ದಾರೆ.

"