ಹಿಟ್ ಸಿನಿಮಾ ಪ್ರಚಾರ ಮಾಡುವಾಗ ತಮ್ಮ ಸಿನಿ ಜರ್ನಿ ಆರಂಭದ ದಿನಗಳನ್ನು ನೆನಪು ಮಾಡಿಕೊಂಡ ನಟ ರಾಜ್‌ಕುಮಾರ್ ರಾವ್....

ಬಾಲಿವುಡ್‌ ಚಿತ್ರರಂಗದ ಫೈನೆಸ್ಟ್‌ ನಟ ಅಂದ್ರೆ ರಾಜ್‌ಕುಮಾರ್ ರಾವ್. ಸೂಪರ್ ಹಿಟ್‌ ಮಾತ್ರವಲ್ಲದೆ ಬಾಕ್ಸ್‌ ಆಫೀಸ್‌ನಲ್ಲಿ ಫ್ಲಾಪ್‌ಗಳನ್ನು ನೋಡಿರುವ ನಟ ಮೊದಲ ಬಾರಿಗೆ ತಮ್ಮ ಸಿನಿ ಜರ್ನಿ ಆರಂಭದಲ್ಲಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ಮುಂಬೈನಲ್ಲಿ ಹಿಟ್ ಸಿನಿಮಾ ಪ್ರಚಾರ ಮಾಡುವಾಗ ಹಂಚಿಕೊಂಡಿದ್ದಾರೆ. 

ನಟಿ ಸಾನ್ಯಾ ಮಲ್ಹೋತ್ರಾಗೆ ಜೋಡಿಯಾಗಿ ಹಿಟ್: ದಿ ಫಸ್ಟ್‌ ಕೇಸ್ ಸಿನಿಮಾ ಮಾಡಿರುವ ರಾಜ್‌ಕುಮಾರ್‌ ರಾವ್‌ ಸಾಧ್ಯವಾದಷ್ಟು ರೀತಿಗಳಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಸ್ಕೂಲ್ ಹುಡುಗನಾಗಿದ್ದಾಗ ಜೀವನ ಹೇಗಿತ್ತು? ಮುಂಬೈಗೆ ಕಾಲಿಟ್ಟಾಗ ಏನೆಲ್ಲಾ ಸಮಸ್ಯೆ ಎದುರಿಸಿದ್ದರು ಎಂದು ಹೇಳಿಕೊಂಡಿದ್ದಾರೆ . 'ಆರಂಭದಲ್ಲಿ ನನ್ನ ಜೀವನ ಹೇಗಿತ್ತು ಅಂದ್ರೆ ಕೈಯಲ್ಲಿ ಒಂದು ಪಾರ್ಲೇಜಿ ಬಿಸ್ಕೆಟ್‌ ಮತ್ತು ನನ್ನ ಬ್ಯಾಂಕ್ ಅಕೌಂಟಲ್ಲಿ ಕೇವಲ 18 ರೂಪಾಯಿ ಮಾತ್ರವಿತ್ತು. ಫಿಲ್ಮಂ ಸ್ಕೂಲ್‌ನಲ್ಲಿದ್ದಾಗ ನನ್ನ ಸ್ನೇಹಿನೊಬ್ಬ ಮುಂಬೈನಲ್ಲಿ ಜೀವನ ನಡೆಸಲು ಸಹಾಯ ಮಾಡಿದನು. ಜೀವನ ಮಾಡಲು ನನಗೆ ಬೇರೆ ಪ್ಲ್ಯಾನ್ ಇಲ್ಲ. ಪ್ಲ್ಯಾನ್ B ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ. ಏಕೆಂದರೆ ನಟ ಆಗಬೇಕು ಅನ್ನೋದಷ್ಟೆ ನನ್ನ ಗುರಿ ಆಗಿತ್ತು' ಎಂದು ರಾಜ್‌ಕುಮಾರ್ ರಾವ್ ಮಾತನಾಡಿದ್ದಾರೆ. 

Rajkumar Rao and Patralekha Wedding: ಹನಿಮೂನ್‌ ಹೋಗುವ ಬದಲು ಮುಂಬೈ ಬಂದ ನವ ದಂಪತಿ!

ಯಾರ ಸಪೋರ್ಟ್‌ ಇಲ್ಲ ಗಾಡ್‌ಫಾದರ್‌ ಇಲ್ಲ ಚಿತ್ರರಂಗಕ್ಕೆ ಕಾಲಿಟ್ಟ ರಾಜ್‌ಕುಮಾರ್ ರಾವ್ ಹುಟ್ಟಿದ್ದು ಬೆಳೆದದ್ದು ಗುರುಗ್ರಂನಲ್ಲಿ ಹೀಗಾಗಿ ಬಾಲ್ಯದಿಂದಲ್ಲೂ ಸಿನಿಮಾದ ಮೇಲೆ ಹೆಚ್ಚಿನ ಆಸಕ್ತಿ ಹೊಂಡಿದ್ದರು. ಮನೆಯಿಂದ 70 ಕಿಮೀ. ದೂರದಲ್ಲಿರುವ ಟೆಂಟ್‌ನಲ್ಲಿ ಸಿನಿಮಾ ನೋಡಲು ಸೈಕಲ್ ಓಡಿಸಿಕೊಂಡು ಹೋಗುತ್ತಿದ್ದರಂತೆ. ಸಿನಿಮಾ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಮುಂಬೈಗೆ ಹಾರಿದ್ದಾರೆ. 

ಸೈಲೇಶ್‌ ನಿರ್ದೇಶನ ಮಾಡಿರುವ ಹಿಟ್ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್‌ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ತೆಲುಗು ರಿಮೇಕ್ ಸಿನಿಮಾ ಆಗಿದ್ದು ಜುಲೈ 15ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ನಂತರ ರಾಜ್‌ಕುಮಾರ್‌ ಬಗ್ಗೆ ಜಾಹ್ನವಿ ಕಪೂರ್ ಎರಡನೇ ಬಾರಿ ಮಿಸ್ಟರ್ ಆಂಡ್ ಮಿಸಸ್ ಮಾಹಿ ಸಿನಿಮಾಗೆ ಒಂದಾಗುತ್ತಿದ್ದಾರೆ. 

ರಾವ್ ಪ್ರೀತಿ:

'ನನ್ನ ಬೆಸ್ಟ್‌ಫ್ರೆಂಡ್ (Bestfriend), ನನ್ನ ಲವ್‌ ಆಫ್‌ ಮೈ ಲೈಫ್‌, ನಮ್ಮ ಫ್ಯಾಮಿಲಿ ಎಲ್ಲವೂ ಆಕೆ. ನಮ್ಮ ಮದುವೆಯಾಗಿ ಎರಡು ತಿಂಗಳುಗಳು ಕಳೆದಿದೆ. ಇದೊಂದು ಬ್ಯೂಟಿಫುಲ್ ಫೀಲಿಂಗ್. ನಾವು ವರ್ಷಗಳಿಂದ ಜೊತೆಗಿದ್ದೀವಿ. ನಾನು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತೇನೆ. ಆಕೆಯೂ ಶೂಟಿಂಗ್‌ಗೆಂದು (Film shooting) ಹೊರಗಡೆ ಹೋಗುತ್ತಿದ್ದಳು. ಕೊರೋನಾ ಲಾಕ್‌ಡೌನ್‌ನಿಂದ (Covid19 lockdown) ನಾವು ಕಳೆದು ಎರಡು ವರ್ಷಗಳಿಂದ ಒಟ್ಟಿಗೆ ಸಮಯ ಕಳೆಯುವುದಕ್ಕೆ ಅವಕಾಶ ಸಿಗ್ತು. ಆ ಕ್ಷಣದಲ್ಲಿ ನಮಗೆ ಅನಿಸಿದ್ದು, ಒಹ್, ನಾನು ಒಟ್ಟಿಗೆ ಜೀವನ ಮಾಡಬಹುದು ಮದುವೆ ಆಗೋಣ ಎಂದು ನಿರ್ಧಾರ ಮಾಡಿಕೊಂಡೆವು' ಎಂದು ರಾಜ್‌ಕುಮಾರ್ ಟೈಮ್ಸ್‌ ಆಫ್‌ ಇಂಡಿಯಾ ಜೊತೆ ಮಾತನಾಡಿದ್ದಾರೆ. 

'ನಾನು ಜೀವನ ನೋಡುವ ರೀತಿ subconcious ಲೇವೆಲ್‌ನಲ್ಲಿ ಬದಲಾಗಿದೆ. ಈಗ ನಾನು ಸಂಪೂರ್ಣ ವ್ಯಕ್ತಿ ಎನಿಸುತ್ತಿದೆ. ನಾವು ಗಂಡ ಹೆಂಡತಿ ಆಗಿದ್ದೀವಿ ಅನ್ನುವ ಕಾನ್ಸೆಪ್ಟ್‌ಗೆ ಈಗ ಬಂದಿದ್ದೀವಿ ನಾನು ಆಕೆಯನ್ನು ವೈಫ್‌ ಎಂದು ಕರೆಯಬಹುದು ಕಾಲೆಳೆಯಬಹುದು. ಇತ್ತೀಚಿಗೆ ಪತ್ರಲೇಖ ಹೇಳಿದ್ದು ನಿಜ, ಒಬ್ಬನೇ ಸಿನಿಮಾ ನೋಡುವುದು ಪಾನಿ ಪೂರಿ (Pani puri) ತಿನ್ನುವ ಅಭ್ಯಾಸ ನನಗಿದೆ. ಪತ್ರ ಚಿತ್ರೀಕರಣದಲ್ಲಿ ಅಥವಾ ಹೊರಗಡೆ ಹೋಗಿದ್ದಾಗ ನಾನು ಹೀಗೆ ಮಾಡುವುದು. ಇತ್ತೀಚಿಗೆ Lucknow ನಲ್ಲಿ ಚಿತ್ರೀಕರಣ ಮಾಡುವಾಗ ನಾನು ಒಬ್ಬನೇ ಹೋಗಿ ಸಿನಿಮಾ ನೋಡಿಕೊಂಡು ಬಂದೆ. ಹೀಗೆ ಮಾಡುವುದಕ್ಕೆ ನನಗೆ ತುಂಬಾನೇ ಇಷ್ಟ.' ಎಂದು ರಾಜ್‌ಕುಮಾರ್ ಹೇಳಿದ್ದಾರೆ. 

' ನಾವು ಆರಂಭದಲ್ಲಿ ಹೇಗಿದ್ವಿ ಈಗಲೂ ಹಾಗೇ ಇದ್ದೀವಿ. ನಮ್ಮ ಸಿನಿಮಾ ಚಿತ್ರೀಕರಣ ಇದ್ದರೂ ಸಹ ಸಮಯ ಮಾಡಿಕೊಂಡು ಹೆಚ್ಚಿಗೆ ಮಾತನಾಡುತ್ತೇವೆ. ಅದು ತುಂಬಾ ಸಮಯ ಮಾತನಾಡುತ್ತೇವೆ. ಥ್ಯಾಂಕ್ಸ್‌ ಟು ಟೆಕ್ನಾಲಜಿ (Technology) ನಾವು ವಿಡಿಯೋ ಕಾಲ್‌ (Video call) ಮೂಲಕ ಕನೆಕ್ಟ್‌ ಆಗುತ್ತೇವೆ. ನನಗೆ ತುಂಬಾ ಜನರು ಹೇಳಿದ್ದಾರೆ ಪ್ರೀತಿಯಲ್ಲಿ ಬಿದ್ದ ಮೊದಲೆರಡು ವರ್ಷ ಮಾತ್ರ ಹೆಚ್ಚಿಗೆ ಮಾತನಾಡುತ್ತೇವೆ 11 ವರ್ಷ ಪ್ರೀತಿ ಮಾಡಿದರೆ ಏನೂ ಇರುವುದಿಲ್ಲ ಎಂದು. ಬೇರೆ ಅವರ ಬಗ್ಗೆ ಗೊತ್ತಿಲ್ಲ ಆದರೆ ನಮ್ಮ ವಿಚಾರದಲ್ಲಿ ಅದು ಸುಳ್ಳು. ನಾವು ಹೆಚ್ಚಿಗೆ ಮಾತನಾಡಲು ಶುರು ಮಾಡಿದ್ದೇವೆ. ನಮಗೆ ಮಾತನಾಡಲು ಸಾಕಷ್ಟು ವಿಚಾರಗಳು ಇರುತ್ತದೆ' ಎಂದಿದ್ದಾರೆ ರಾಜ್‌ಕುಮಾರ್ ರಾವ್.