ಡಿ. ಶಂಕರ್ ಸಿಂಗ್ ಜನ್ಮಶತಮಾನೋತ್ಸವ ವರ್ಷ ಕನ್ನಡ ಚಿತ್ರರಂಗದ ಆರಂಭಿಕ ನಿರ್ಮಾಪಕರಲ್ಲಿ ಪ್ರಮುಖ 5 ವರ್ಷಗಳ ಕಾಲ 50 ಸಿನಿಮಾ ನಿರ್ಮಾಣ

ಕನ್ನಡ ಚಿತ್ರರಂಗದ ಆರಂಭಿಕ ನಿರ್ಮಾಪಕರಲ್ಲಿ ಪ್ರಮುಖರೆನ್ನಿಸಿಕೊಂಡಿರುವ ಡಿ. ಶಂಕರ್ ಸಿಂಗ್ ಜನ್ಮಶತಮಾನೋತ್ಸವ ವರ್ಷ ಇದು. ಈ ಸಂದರ್ಭದಲ್ಲಿ ಅವರ ಮಗ ಡಿ. ರಾಜೇಂದ್ರ ಸಿಂಗ್ ಬಾಬು, ತಂದೆಯ ಜೀವನ ಚರಿತ್ರೆಯನ್ನು ದಾಖಲಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಭೀಷ್ಮ ದಾದಾ ಶಂಕರ್‌ಸಿಂಗ್ ಹೆಜ್ಜೆ ಗುರುತು ಪುಸ್ತಕದ ಹೆಸರು.

ಈಗ ಪುಸ್ತಕದ ಮುಖಪುಟ ಬಿಡುಗಡೆ ಆಗಿದೆ. ಶಂಕರ್‌ಸಿಂಗ್ ಅವರ ನೂರನೇ ಹುಟ್ಟು ಹಬ್ಬದ ಅಂಗವಾಗಿ ಮುಖಪುಟ ಬಿಡುಗಡೆಯಾಗಿದೆ. ಮಹಾತ್ಮ ಪಿಕ್ಚರ್ಸ್ ಸ್ಥಾಪಿಸಿ ಅದರ ಮೂಲಕ 75 ವರ್ಷಗಳ ಕಾಲ 50 ಚಿತ್ರಗಳನ್ನು ನಿರ್ಮಿಸಿ, ನಿರ್ದೇಶನ ಮಾಡಿದ ಶಂಕರ್ ಸಿಂಗ್ ಅವರ ಸಿನಿಮಾ ಸಾಹಸಗಳು ಈ ಕೃತಿಯಲ್ಲಿ ದಾಖಲಾಗಲಿವೆ.

ಮತ್ತೆ ಜನುಮದ ಜೋಡಿ ಕಾಲಕ್ಕೆ ಮರಳಿದಂತಿದೆ : ಶಿವರಾಜ್‌ ಕುಮಾರ್‌

ಡಿ.ಶಂಕರ್ ಸಿಂಗ್ ಅವರು ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಮತ್ತು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸಿಂಗ್, ಬಿ. ವಿಠ್ಠಲಾಚಾರ್ಯರ ಜೊತೆಯಲ್ಲಿ 'ಮಹಾತ್ಮ ಪಿಕ್ಚರ್ಸ್' ಅನ್ನು 1946 ರಲ್ಲಿ ನಿರ್ಮಿಸಿದರು. ಇದು ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳನ್ನು ನಿರ್ಮಿಸಿದೆ. ಮಹಾತ್ಮ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಮೊದಲ ಚಿತ್ರ 1947 ರಲ್ಲಿ ಕೃಷ್ಣಲೀಲಾ. ಅವರ ಮೊದಲ ನಿರ್ದೇಶನ ಸಿನಿಮಾ 1951 ರಲ್ಲಿ ಜಗನ್ಮೋಹಿನಿ. ಈ ಚಿತ್ರವು ಚಿತ್ರಮಂದಿರಗಳಲ್ಲಿ 100 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನಗೊಂಡ ಮೊದಲ ಕನ್ನಡ ಚಲನಚಿತ್ರಗಳಲ್ಲಿ ಒಂದಾಗಿದೆ.