ನಟ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಗಳು 2015ರಲ್ಲಿ ವಿವಾಹವಾದರು. ಇತ್ತೀಚಿನ ಸಂಬಂಧಗಳ ಬಗ್ಗೆ ರಾಗಿಣಿ, ಸಂಬಂಧಗಳು ಇನ್ಸ್ಟಾಗ್ರಾಮ್ ರೀಲ್ಸ್ ತರಹ ಕ್ಷಣಿಕವಾಗಿವೆ ಎಂದಿದ್ದಾರೆ. ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ. ಪ್ರಜ್ವಲ್ ಜೊತೆ ಸ್ನೇಹಿತರಂತೆ ಇರುವುದಾಗಿ ಹೇಳಿದ್ದಾರೆ. ಮಗು ಮಾಡಿಕೊಳ್ಳುವ ಬಗ್ಗೆ, ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ಸಮಯ ಹೊಂದಾಣಿಕೆ ಮಾಡಿಕೊಂಡು ನಿರ್ಧರಿಸುವುದಾಗಿ ಪ್ರಜ್ವಲ್ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಜ್ಯೂನಿಯರ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ ಮತ್ತು ರಾಗಿಣಿ ಹಲವು ವರ್ಷಗಳ ಕಾಲ ಪ್ರೀತಿ 2015ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದ್ಧೂರಿಯಾಗಿ ನಡೆದ ಈ ಮದುವೆಗೆ ಇಂದಿಗೂ ಹಲವರು ಮಾತನಾಡಿಕೊಳ್ಳುತ್ತಾರೆ. ಎಷ್ಟು ಚೆನ್ನಾಗಿ ಒಟ್ಟಿಗಿದ್ದಾರೆ, ಒಟ್ಟಿಗೆ ಕೆಲಸ ಮಾಡುತ್ತಾರೆ, ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾರೆ ಎಂದು. ಇವರಿಬ್ಬರು ನಮಗೆ ಸ್ಫೂರ್ತಿ ಎಂದು ಅದೆಷ್ಟೋ ಮಂದಿ ನೇರವಾಗಿ ಹೇಳಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂದು ಕಮಿಟ್ ಆಗಿ ಒಂದು ತಿಂಗಳಿಗೆ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಈ ರೀತಿ ಇರುವವರಿಗೆ ರಾಗಿಣಿ ಅದ್ಭುತ ಸಲಹೆ ನೀಡಿದ್ದಾರೆ. 

'ಇತ್ತೀಚಿನ ದಿನಗಳಲ್ಲಿ ಸಂಬಂಧ ಅನ್ನೋದು ಇನ್‌ಸ್ಟಾಗ್ರಾಂ ರೀಲ್ಸ್‌ ತರ ಆಗಿಬಿಟ್ಟಿದೆ. 30 ಸೆಕೆಂಡ್ ಸಮಯ ಅಷ್ಟೇ ಇಲ್ಲ ಅಂದ್ರೆ ಫುಲ್ ಚೇಂಜ್. ಬಾಯ್‌ಫ್ರೆಂಡ್‌, ಅಪ್ಪ-ಅಮ್ಮ, ಅಣ್ಣ-ತಂಗಿ, ಅಕ್ಕ-ತಂಗಿ ಯಾರೇ ಇರಲಿ ಮದುವೆ ಮುಂಚೆ ಮತ್ತು ಮದುವೆ ನಂತರ ಬದಲಾವಣೆ ಆಗುತ್ತದೆ. ಈ ಜರ್ನಿಯನ್ನು ನೀವು ಒಪ್ಪಿಕೊಂಡು ಕೊಂಚ ಶ್ರಮ ಹಾಕಬೇಕು. ನಾನು ಮತ್ತು ಪ್ರಜ್ವಲ್ ಸಿಕ್ಕಾಪಟ್ಟೆ ಖುಷಿಯಾಗಿದ್ದೀವಿ ಏಕೆಂದರೆ ನಾವು ಸ್ನೇಹಿತರ ರೀತಿಯಲ್ಲಿ ಇದ್ದೀವಿ. ಗೋವಾದಲ್ಲಿ ಪ್ರಜ್ವಲ್ ರಾಕ್ಷಸ ಸಿನಿಮಾ ಪ್ರಮೋಷನ್ ಮಾಡುತ್ತಿದ್ದರು, ಅವರಿಗೆ ಸರ್ಪ್ರೈಸ್ ಕೊಡಬೇಕು ಎಂದು ನಾನು ಹೋದರೆ ಅಲ್ಲಿ ಅವರು ನನಗೆ ಸರ್ಪ್ರೈಸ್ ಕೊಟ್ಟರು. ಹಾಸಿಗೆ ಮೇಲೆ ಡ್ರೆಸ್‌ ಆಭರಣಗಳನ್ನು ಇಟ್ಟು ನಿನಗೆ ಇದು ಇಷ್ಟವಾಗಬೇಕು ಎಂದು ಬರೆದಿದ್ದರು. ಶೂಟಿಂಗ್ ನಡುವೆ ಅವರು ಇಷ್ಟೋಂದು ಶ್ರಮ ಹಾಕಿದ್ದಾರೆ. 20 ವರ್ಷದಿಂದ ನಾನು ಒಟ್ಟಿಗೆ ಇದ್ದೀವಿ ಅಯ್ಯೋ ಇದೆಲ್ಲಾ ಏನ್ ಎನ್ನಬಹುದು. ಆದರೆ ಅದೆಲ್ಲಾ ಬಿಟ್ಟು ನಾವು ಶ್ರಮ ಹಾಕುತ್ತಿದ್ದೀವಿ ಅಂದ್ರೆ ಮಾತ್ರ ಸಂಬಂಧ ಉಳಿಯುವುದು' ಎಂದು ರಾಗಿಣಿ ಪ್ರಜ್ವಲ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮಂತ್ರಾಲಯಕ್ಕೆ ಭೇಟಿ ನೀಡಿದ ಶಿವರಾಜ್‌ಕುಮಾರ್ ಫ್ಯಾಮಿಲಿ; ಫೋಟೋ ವೈರಲ್

'ನಮ್ಮಿಬ್ಬರ ನಡುವೆ ಏನೇ ಜಗಳ ಆದರೂ..ನಾವಿಬ್ಬರು ಖುಷಿಯಾಗಿ ಇರಬೇಕು ಇಲ್ಲಿ ಯಾರು ಸರಿ ಯಾರು ತಪ್ಪು ಎಂದು ವಾದ ಮಾಡಬಾರದು. 5 ನಿಮಿಷ ಸುಮ್ಮನೆ ಇದ್ದು ಆನಂತರ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು' ಎಂದು ರಾಗಿಣಿ ಹೇಳಿದ್ದಾರೆ. 10 ವರ್ಷಗಳ ಕಾಲ ಪ್ರೀತಿ ಆನಂತರ ಮದುವೆಯಾಗಿ 10 ವರ್ಷ ಕಳೆದಿದೆ. 20 ವರ್ಷಗಳಿಂದ ಒಟ್ಟಿಗೆ ಇದ್ದೀರಿ ಮಗು ಯಾಕೆ ಮಾಡಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿದಾಗ 'ನಾನು ಸಿನಿಮಾದಲ್ಲಿ ಬ್ಯುಸಿಯಾಗಿದ್ದೀನಿ ರಾಗಿಣಿ ಕೂಡ ಸಿಇಮಾ ಮಾಡುತ್ತಿದ್ದಾಳೆ. ಮಗುವಿಗೆ ಹೆಚ್ಚಿನ ಸಮಯ ಕೊಡಬೇಕು. ಹೀಗಾಗಿ ನಾವಿಬ್ಬರೂ ನೋಡಿಕೊಂಡು ಪ್ಲ್ಯಾನ್ ಮಾಡಲಿದ್ದೇವೆ. ನನಗೆ ಯಾವಾಗ ಬೇಕೋ ಆಗ ಮಗು ಮಾಡಿಕೊಳ್ಳುವೆ' ಎಂದು ಪ್ರಜ್ವಲ್ ದೇವರಾಜ್‌ ಉತ್ತರಿಸಿದ್ದರು. 

46 ವರ್ಷದ ಜ್ಯೋತಿಕಾ ಕೊನೆಗೂ ತಮ್ಮ ವೇಟ್‌ ಲಾಸ್‌ ಸೀಕ್ರೆಟ್‌ ರಿವೀಲ್ ಮಾಡೇ ಬಿಟ್ರು......