ಪ್ರಜ್ವಲ್ ಪಾಪ... ಆದ್ರೆ ಅವ್ರ ಅಡ್ವಾಂಟೇಜನ್ನು ತುಂಬಾ ಮಂದಿ ಹೀರೋಯಿನ್ಸ್ ತಗೊಂಡಿದ್ದಾರೆ...
ಪತಿ ಪ್ರಜ್ವಲ್ ದೇವರಾಜ್ ಗುಣಗಳ ಕುರಿತು ನಟಿ ರಾಗಿಣಿ ದೇವರಾಜ್ ಹೇಳಿದ್ದೇನು? ಆ್ಯಂಕರ್ ಅನುಶ್ರೀ ನಡೆಸಿಕೊಟ್ಟ ಚಾಟ್ ಷೋನಲ್ಲಿ ನಟಿ ಓಪನ್ ಮಾತು...
ಕನ್ನಡ ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ. ಡೈನಾಮಿಕ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಫಿಟ್‌ನೆಸ್ ಟ್ರೈನರ್ ಆಗಿದ್ದಾರೆ. ವಿವಿಧ ಜಾಹೀರಾತಿನಲ್ಲೂ ಆಗಾಗ ಕಾಣಿಸಿಕೊಳ್ತಾರೆ. ಕಳೆದ ವರ್ಷವಷ್ಟೇ ರಾಗಿಣಿ ಅವರು ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ ಶಾನಭೋಗರ ಮಗಳು ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ರಾಗಿಣಿ ಒಂದು ಪ್ರಮುಖ ಪಾತ್ರವನ್ನ ಮಾಡಿದ್ದಾರೆ. ಶಾನಭೋಗರ ಮಗಳ ಪಾತ್ರದಲ್ಲಿಯೇ ಇಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಂದು ಕೆಲವೊಂದು ಟಿಪ್ಸ್ಗಳನ್ನೂ ಕೊಡುತ್ತಿರುತ್ತಾರೆ.
ಇದೀಗ ದಂಪತಿ, ಆ್ಯಂಕರ್ ಅನುಶ್ರೀ ಅವರ ಚಾಟ್ಷೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಅನುಶ್ರೀ ಅವರು ಪ್ರಜ್ವಲ್ ಮತ್ತು ರಾಗಿಣಿ ಇಬ್ಬರಿಗೂ ಕೆಲವೊಂದು ವಿಷಯಗಳನ್ನು ಕೇಳಿದ್ದಾರೆ. ಮೊದಲಿಗೆ ರಾಗಿಣಿಗೆ ಕೋಪ ಬಂದಾಗ ಏನು ಮಾಡುತ್ತೀರಿ ಎಂದು ಪ್ರಜ್ವಲ್ ಅವರಿಗೆ ಕೇಳಿದಾಗ ಅವರು ಹಗ್ ಮಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಪತಿಯ ಒಂದು ಕ್ವಾಲಿಟಿಯ ಕುರಿತು ಹೇಳಿ ಎಂದು ರಾಗಿಣಿ ಅವರಿಗೆ ಕೇಳಿದಾಗ, ಪ್ರಜ್ವಲ್ ಅವರ ಹೇರ್ ಕಲರ್ ಕುರಿತು ತಮಾಷೆಯಾಗಿ ಮಾತನಾಡಿದ್ದಾರೆ. 2006ರಿಂದಲೂ ನೋಡುತ್ತಿದ್ದೇನೆ. ಅವರು ಇದ್ದಬಿದ್ದ ಎಲ್ಲಾ ಕಲರ್ಗಳನ್ನೂ ಇದುವರೆಗೆ ಬಳಸಿದ್ದಾರೆ. ಅವರ ಹೇರ್ ಕಲರ್ ನೋಡಿ ಸಾಕಾಗಿದೆ ಎಂದು ತಮಾಷೆ ಮಾಡಿದ್ದಾರೆ. ಇದೇ ವೇಳೆ, ಹೀರೋ ಆಗಿ ಯಾವ ಅಡ್ವಾಂಟೇಜ್ ಅನ್ನು ಪ್ರಜ್ವಲ್ ಪಡೆದುಕೊಂಡಿದ್ದಾರೆ ಎಂದು ಅನುಶ್ರೀಯವರು ಕೇಳಿದಾಗ, ಪತಿಯ ಪರವಾಗಿ ನಿಂತ ರಾಗಿಣಿ, ಇವರೇನೂ ಅಡ್ವಾಂಟೇಜ್ ತೆಗೆದುಕೊಂಡಿಲ್ಲ. ಆದರೆ ಇವರಿಂದ ಹೀರೋಯಿನ್ಗಳು ತುಂಬಾ ಅಡ್ವಾಂಟೇಜ್ ತಗೊಂಡಿದ್ದಾರೆ ಎಂದು ಹಾಸ್ಯದ ಉತ್ತರ ನೀಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್! ಮತ್ತೆ ಮುನ್ನೆಲೆಗೆ ಬಂತು ಹಳೆಯ ಸಂಬಂಧ
ಅಂದಹಾಗೆ, ಈಚೆಗಷ್ಟೇ ರಾಗಿಣಿ ಅವರು, ತಮ್ಮ ಫಿಟ್‌ನೆಸ್ ಸೀಕ್ರೆಟ್‌ನ ರಿವೀಲ್ ಮಾಡಿದ್ದರು. ಏನೇ ತಿಂದರೂ ಸುಲಭವಾಗಿ ಜೀರ್ಣ ಮಾಡಿಕೊಳ್ಳುವ ಶಕ್ತಿ ಯಾರಿಗೂ ಇಲ್ಲ. ಒಂದು ದಿನ ಚೀಟ್ ಮೀಲ್ ಮಾಡುವೆ. ನಮ್ಮ ಮನೆಯಲ್ಲಿ ಮೂರು ತಲೆ ಮಾರುಗಳಿಂದ ದಿನ ಬೆಳಗ್ಗೆ ತಪ್ಪದೆ ಈ ಕೆಲಸ ಮಾಡುತ್ತೀವಿ ಅದುವೇ Oil pulling ಎಂದು ಆರೋಗ್ಯದ ಟಿಪ್ಸ್ ಕೊಟ್ಟಿದ್ದರು. 15 ನಿಮಿಷಗಳ ಕಾಲ ಕೊಬ್ಬರಿ ಎಣ್ಣಯಲ್ಲಿ ಬಾಯಿ ಮುಕ್ಕಳಿಸುತ್ತೀವಿ. ಹೀಗೆ ಮಾಡುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ ಇಷ್ಟು ದಿನ ಇದೊಂದು ಸೀಕ್ರೆಟ್ ಆಗಿತ್ತು. ನಮ್ಮ ಮನೆಯಲ್ಲಿ ಯಾರೂ ಬೆಳಗ್ಗೆ ತಿಂಡಿ ತಿನ್ನುವುದಿಲ್ಲ Intermittent fasting ಫಾಲೋ ಮಾಡುತ್ತೀವಿ ತುಂಬಾ ಆಸೆ ಆದರೆ ಮಾತ್ರ ಮಸಾಲ ದೋಸೆ ಆರ್ಡರ್ ಮಾಡಿಕೊಳ್ಳುತ್ತೀನಿ ಎಂದಿದ್ದರು.
ಪ್ರತಿನಿತ್ಯ ತಪ್ಪದೆ ಮೂರು ಲೋಟ ಹಣ್ಣಿನ ಜ್ಯೂಸ್ ಕುಡಿಯುತ್ತೀನಿ, ಮೊದಲು ನಿಂಬೆ ಹಣ್ಣು ನೀರು.... ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಇದು ನಮ್ಮ ಆರೋಗ್ಯಕ್ಕೆ ಸ್ವತ್ಛೆ ಮತ್ತು ಕೂದಲು ಚೆನ್ನಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ, ಎರಡನೇ ಗ್ಲಾಸ್ ಕ್ಯಾರೆಟ್ ಜ್ಯೂಸ್ ಆಗಿರುತ್ತದೆ, ಮೂರನೇ ಗ್ಲಾಸ್ ಬೂದು ಕುಂಬಳಕಾಯಿ ಕುಡಿಯುವೆ ಇದರ ಬಗ್ಗೆ ಹೆಚ್ಚಿಗೆ ಜನರಿಗೆ ಗೊತ್ತಿಲ್ಲ. ಒಂದು ಲೈಫ್ ಹ್ಯಾಕ್ ಹೇಳಿಕೊಡುತ್ತೀನಿ...ನಾವು ತಿನ್ನುವ ಪ್ರಮಾಣ ಮುಖ್ಯವಾಗುತ್ತದೆ. ನಾವಣೆ ಕಡಿಮೆ ಹಾಕಿಕೊಂಡು ಪಲ್ಯ ಹೆಚ್ಚಿಗೆ ಸೇವಿಸುತ್ತೀನಿ. ಒಂದು ರೀತಿ ಹೇಳಬೇಕು ಅಂದ್ರೆ ಪಲ್ಯನೇ ಅನ್ನದ ರೀತಿ ತಟ್ಟೆಗೆ ಹಾಕಿಕೊಂಡಿರುವೆ. ರಾತ್ರಿ ಊಟ ಆದಷ್ಟು ಮನೆಯಲ್ಲಿ ತಿನ್ನುವುದಕ್ಕೆ ಇಷ್ಟ ಪಡುತ್ತೀವಿ..ಮದುವೆ ಆದ್ಮೇಲೆ ಜಾಸ್ತಿ ಅಡುಗೆ ಮಾಡುವುದಕ್ಕೆ ಶುರು ಮಾಡಿದ್ದೀವಿ. ಪ್ರಜ್ವಲ್ ಮತ್ತು ನಾನು ಜಾಸ್ತಿ ಜ್ಯೂಸ್ ಕುಡಿಯುತ್ತೀವಿ...ರಾತ್ರಿ ಸಮಯದಲ್ಲಿ Raw ಆಹಾರ ಮತ್ತು ಮೊಸರು ಅನ್ನ ಸೇವಿಸಬಾರದು ಎಂದೆಲ್ಲಾ ಟಿಪ್ಸ್ ಕೊಟ್ಟಿದ್ದರು.
20ರ ಹರೆಯದಲ್ಲಿ 40ರ ವಿನೋದ್ ಖನ್ನಾ ಜೊತೆ ಬೆಡ್ರೂಂ ಸೀನ್ ಮುಗಿದ ಬಳಿಕ ಪಶ್ಚಾತ್ತಾಪ ಪಟ್ಟ ಮಾಧುರಿ!