Asianet Suvarna News Asianet Suvarna News

20ರ ಹರೆಯದಲ್ಲೇ 40ರ ವಿನೋದ್ ಖನ್ನಾ ಜೊತೆ ಹಸಿಬಿಸಿ ಬೆಡ್​ರೂಂ ಸೀನ್, ಇವರಿಬ್ಬರ ನಡುವೆ ಇತ್ತಾ ಅಫೇರ್!

ತಮಗಿಂತ 21 ವರ್ಷ ಹಿರಿಯ ನಟ ವಿನೋದ್​ ಖನ್ನಾ ಜೊತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬಳಿಕ ಪಶ್ಚಾತ್ತಾಪ ಪಟ್ಟುಕೊಂಡಿದ್ದ ನಟಿ ಮಾಧುರಿ ದೀಕ್ಷಿತ್​ ಹೇಳಿದ್ದೇನು? 
 

Madhuri Dixit Regretted after intimate scene in bedroom with Vinod Khanna In Dayavan suc
Author
First Published May 22, 2024, 4:57 PM IST

ನಟ ವಿನೋದ್​ ಖನ್ನಾ ನಿಧನರಾಗಿ ಆರು ವರ್ಷಗಳೇ ಕಳೆದಿವೆ. ಆದರೆ ಬಾಲಿವುಡ್​ ಲವರ್​ ಬಾಯ್​ ಎಂದೇ ಫೇಮಸ್​ ಆಗಿದ್ದ ಇವರ ಒಂದೊಂದೇ ಇಂಟರೆಸ್ಟಿಂಗ್​ ವಿಷಯಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ. ಇದೇ ಇನ್ನೊಂದೆಡೆ ಧಕ್​ ಧಕ್​ ಬೆಡಗಿ ಮಾಧುರಿ ದೀಕ್ಷಿತ್​ ಮತ್ತು ವಿನೋದ್​ ಖನ್ನಾ ಅವರ 'ದಯಾವನ್' ಚಿತ್ರ ವೀಕ್ಷಿಸಿದವರು ಮಾತ್ರ ತಬ್ಬಿಬ್ಬಾಗಿದ್ದು ಸುಳ್ಳಳ್ಳ. 1988ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ಮಾಧುರಿ ಮತ್ತು ವಿನೋದ್​ ಖನ್ನಾರ ಹಸಿಬಿಸಿ ದೃಶ್ಯಕ್ಕೆ  ಬಾಲಿವುಡ್​ ಪ್ರೇಮಿಗಳು ರೋಮಾಂಚನಗೊಂಡಿದ್ದರು. ಒಂದು ಹಂತದಲ್ಲಿ ನಟಿ ಮಾಧುರಿ ದೀಕ್ಷಿತ್​ ಅವರು ರಾತ್ರೋರಾತ್ರಿ ಫೇಮಸ್​ ಆಗಲು ಇದೇ ಕಾರಣ ಎಂದೂ ಹೇಳಲಾಗುತ್ತದೆ. ಇದಕ್ಕೂ ಮುನ್ನ ಕೆಲವೊಂದು ಚಿತ್ರಗಳಲ್ಲಿ ಮಾಧುರಿ ನಟಿಸಿದ್ದರೂ, ಅದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ವಿಯಾಗಿರಲಿಲ್ಲ. ಆದರೆ ದಯಾವನ್​ ಚಿತ್ರದಲ್ಲಿ ಇವರು ತಮಗಿಂತ 21 ವರ್ಷ ಹಿರಿಯವರಾದ ವಿನೋದ್​ ಖನ್ನಾ ಜೊತೆ ಇಂಟಿಮೇಟ್​ ಸೀನ್​ನಲ್ಲಿ ಕಾಣಿಸಿಕೊಂಡಿದ್ದೂ ಅಲ್ಲದೇ ಚಿತ್ರ ಬ್ಲಾಕ್​ಬಸ್ಟರ್​ ಮಾಡಿದ್ದರು. 

ಇಂದು ಹಲವು ನಟಿಯರು ಸಂಪೂರ್ಣ ಬೆತ್ತಲಾಗಲು ಹೇಸದ ಕಾಲ. ಇನ್ನು ಪೈಪೋಟಿಗೆ ಬಿದ್ದವರಂತೆ ತಮ್ಮ ದೇಹಸಿರಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ತೋರಿಸುತ್ತಾರೆ. ಇವೆಲ್ಲವೂ ಈಗ ಕಾಮನ್ ಎನಿಸಿಬಿಟ್ಟಿದೆ. ಆದರೆ 1988ರಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅಂಥ ಸಂದರ್ಭದಲ್ಲಿಯೇ ಬೆಡ್​ ಮೇಲೆ ವಿನೋದ್​ ಖನ್ನಾ ಜೊತೆ  ಮಾಧುರಿ ದೀಕ್ಷಿತ್​ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದರು. ಆಗ ಅವರಿಗೆ 20 ವರ್ಷ ವಯಸ್ಸಾಗಿತ್ತು. ಈ ದೃಶ್ಯ  ಮಾಧುರಿಯವರ ಅದೃಷ್ಟವನ್ನೂ ಬದಲಾಯಿಸಿತು. ವಿನೋದ್​ ಖನ್ನಾ ಅವರು ಮಾಧುರಿ ದೀಕ್ಷಿತ್​ ಮಾತ್ರವಲ್ಲದೇ ಹಲವಾರು ನಟಿಯರ ಜೊತೆ ಇದೇ ರೀತಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಸ್ತ್ರೀಯರು ಎಂದರೆ ತುಂಬಾ ಇಷ್ಟ. ಅದರಲ್ಲಿ ತಪ್ಪೇನು ಎಂದು ನೇರಾನೇರ ಹೇಳುವ ಮೂಲಕವೇ ಇಂಥ ಪ್ರಯಣದ ದೃಶ್ಯಗಳು ಬಂದಾಗ ತಮ್ಮನ್ನು ತಾವು ಅದಕ್ಕೆ ಅರ್ಪಿಸಿಕೊಂಡು ಬಿಡುತ್ತಾರೆ.

Vinod Khanna Bday: ಪ್ರೀತಿಸ್ತೇನೆ ಆದ್ರೆ ಮದ್ವೆಯಾಗಲ್ಲ ಎಂದವಳ ಕೈಹಿಡಿದಿದ್ದ ವಿನೋದ್​ ಖನ್ನಾ!

ಆದರೆ ಮಾಧುರಿ ದೀಕ್ಷಿತ್​ ಮಾತ್ರ ಈ ರೀತಿಯಾಗಿ ಕಾಣಿಸಿಕೊಂಡಿದ್ದು ಹಲವರ ಹುಬ್ಬೇರಿಸಿತ್ತು. ಮರಾಠಿ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ ಹುಡುಗಿಯೊಬ್ಬಳು ತಮಗಿಂತ 21 ವರ್ಷ ಹಿರಿಯ ನಟನ ಜೊತೆ ಹೀಗೆ ಕಾಣಿಸಿಕೊಂಡಿದ್ದಕ್ಕೆ ಸಕತ್​ ಟ್ರೋಲ್​  ಕೂಡ ಆದರು. ಇವರಿಬ್ಬರ ನಡುವೆ ಸಂಬಂಧವನ್ನೂ ಕಲ್ಪಿಸಲಾಯಿತು. ಆದರೆ ಇವರಿಬ್ಬರೂ ಎಂದಿಗೂ ಸಂಬಂಧದಲ್ಲಿ ಇರಲಿಲ್ಲ. ಆದರೆ ಚಿತ್ರರಂಗದಲ್ಲಿನ ಯಶಸ್ಸಿಗೆ ಮಾಧುರಿ ಅವರಿಗೆ ಅಂದು ಅದು ಅನಿವಾರ್ಯವಾಗಿತ್ತು.

ಆದರೆ ಕೆಲ ವರ್ಷಗಳ ಬಳಿಕ, ನಟಿ ತಮ್ಮ ಈ ದೃಶ್ಯದ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿದ್ದರು. ಸಂದರ್ಶನವೊಂದರಲ್ಲಿ ತಾವು ದಯಾವನ್​ ಚಿತ್ರದಲ್ಲಿ ಈ ರೀತಿ ಇಂಟಿಮೇಟ್​ ದೃಶ್ಯದಲ್ಲಿ ಕಾಣಿಸಿಕೊಂಡು ತಪ್ಪು ಮಾಡಿರುವುದಾಗಿ ಹೇಳಿದ್ದರು. ನನ್ನ ಸಿನಿ ಪಯಣದತ್ತ ಒಮ್ಮೆ ಕಣ್ಣು ಹಾಯಿಸಿದಾಗ, ದಯಾವನ್​ ಚಿತ್ರದ ಕಲ್ಪನೆ ಬರುತ್ತದೆ. ಆದರೆ ನಾನು ಅಂದು ಮಾಡಿದ್ದು ಸರಿ ಇರಲಿಲ್ಲ ಎನಿಸುತ್ತಿದೆ. ನಾನು ಖಡಾಖಂಡಿತವಾಗಿ ಅದನ್ನು ನಿರಾಕರಿಸಬೇಕಿತ್ತು. ಆದರೆ ಅಂದು ಹಾಗೆ ಹೇಳಲು ನನಗೆ ಭಯವಾಗಿತ್ತು. ಆ ದೃಶ್ಯ ಚಿತ್ರದಲ್ಲಿ ಅಗತ್ಯ ಎಂದು ನಿರ್ದೇಶಕರು ಹೇಳಿದಾಗ, ನಾನು ಸೈ ಎಂದುಬಿಟ್ಟೆ. ಆದರೆ ಬಹುಶಃ ನಾನು ಅದನ್ನು ಅವಾಯ್ಡ್​ ಮಾಡಬಹುದಿತ್ತೇನೋ ಅನ್ನಿಸುತ್ತದೆ ಎಂದು ಪಶ್ಚಾತ್ತಾಪ ಪಟ್ಟುಕೊಂಡಿದ್ದರು.

ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್​! ಮತ್ತೆ ಮುನ್ನೆಲೆಗೆ ಬಂತು ಹಳೆಯ ಸಂಬಂಧ
 

Latest Videos
Follow Us:
Download App:
  • android
  • ios