Asianet Suvarna News Asianet Suvarna News

ಯುವ ರಾಜ್‌ಗೆ ಅಪ್ಪು ಸ್ಥಾನ ಕೊಡಬೇಡಿ, ಅವರವರೇ ಪರಿಶ್ರಮ- ವ್ಯಕ್ತಿತ್ವ ಬೆಳಸಿಕೊಳ್ಳಬೇಕು: ರಾಘವೇಂದ್ರ ರಾಜ್‌ಕುಮಾರ್

ತಮ್ಮನ ಹುಟ್ಟುಹಬ್ಬದ ದಿನವನ್ನು ಹಬ್ಬದಂತೆ ಆಚರಿಸುತ್ತಿರುವ ರಾಘಣ್ಣ. ಮಗನಿಗೆ ತಮ್ಮನ ಸ್ಥಾನ ಕೊಟ್ಟಿರುವುದಕ್ಕೆ ಋಣಿ ಎಂದಿದ್ದಾರೆ.

Raghavendra Rajkumar thanks fan for giving Puneeth love to his son Yuva vcs
Author
First Published Mar 18, 2023, 12:53 PM IST

ಮಾರ್ಚ್‌ 17ರಂದು ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ತಮ್ಮನ ಜನ್ಮ ದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರ ಯಾಕೆ ಘೋಷಣೆ ಮಾಡಿತ್ತು, ಮಗ ಯುವ ರಾಜ್‌ಕುಮಾರ್‌ಗೆ ಅಪ್ಪು ಸ್ಥಾನ ಕೊಟ್ಟಿರುವ ಅಭಿಮಾನಿಗಳ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್‌ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

'ದೇವಸ್ಥಾನದ ಗರ್ಭಗುಡಿಯಲ್ಲಿ ದೇವರು ಇಲ್ಲದೆ ನಡೆಯುತ್ತಿರುವ ಸಂಭ್ರಮವಿದು. ವ್ಯಕ್ತಿನೇ ಇಲ್ಲ ಹುಟ್ಟುಹಬ್ಬ ಮಾತ್ರ ಆಚರಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ನೋಡುತ್ತಿದ್ದರೆ ಒಂದು ಸಲ ದಿಗ್ಭ್ರಮೆ ಆಗುತ್ತದೆ. ಏನಪ್ಪಾ ಅವನು ಎಲ್ಲೋ ಪಕ್ಕದಲ್ಲಿ ಇದ್ದಾನಾ...ಅಪ್ಪು ಇದ್ದಾಗ ಹೇಗೆ ಬರ್ತಡೇ ಮಾಡಿಸಿಕೊಳ್ಳುತ್ತಿದ್ದ ಈಗಲೂ ಅದೇ ರೀತಿ ಬರ್ತಡೇ ಹಾಗೆ ಮಾಡಿಸಿಕೊಳ್ಳುತ್ತಿದ್ದಾನೆ. ಪ್ರತಿಯೊಬ್ಬ ಮನುಷ್ಯನಿಗೆ ಒಂದೇ ಒಂದು ಹುಟ್ಟುಹಬ್ಬ ಇರುತ್ತದೆ ಆದರೆ ಅಪ್ಪುಗೆ ಎರಡು ಹುಟ್ಟುಹಬ್ಬವಿದೆ ಅದು ಹೇಗೆ ಅಂತ ಹೇಳ್ತೀನಿ ಅರ್ಥ ಮಾಡಿಕೊಳ್ಳಿ ಬೇಜಾರ್ ಮಾಡಿಕೊಳ್ಳಬೇಡಿ. 17-3-1975 ಅಪ್ಪು ಜನ್ಮ ದಿನ...29-10-2021 ಮತ್ತೊಂದು ಸಲ ಅಪ್ಪು ಹುಟ್ಟುತ್ತಾರೆ. 75ರಲ್ಲಿ ವ್ಯಕ್ತಿಯಾಗಿ ಹುಟ್ಟುತ್ತಾರೆ ಜನರಿಗೋಸ್ಕರ 46 ವರ್ಷ ಮನೋರಂಜನೆ ಮಾಡುತ್ತಾರೆ ಅದೇ ಅಕ್ಟೋಬರ್ 29ರಂದು ದೇಹ ಬಿಡುತ್ತಾರೆ ಆದರೆ ಶಕ್ತಿ ಸೃಷ್ಟಿ ಮಾಡ್ತಾರೆ. ಒಂದು ಶಕ್ತಿ ಹುಟ್ಟುವ ಕಾರಣ ಅವತ್ತು ಕೂಡ ಅಪ್ಪು ಹುಟ್ಟುಹಬ್ಬ. ಈ ಶಕ್ತಿಗೆ ಸಾವೇ ಇಲ್ಲ ಆ ಶಕ್ತಿನೇ ಇವತ್ತು ಎಲ್ಲರನ್ನು ಕರೆಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು. ನಾವು ಇಲ್ಲಿ ಏನು ಗಮನಿಸಬೇಕು ಅಂದ್ರೆ ಈ ವ್ಯಕ್ತಿ 27ರಿಂದ 28 ಸಿನಿಮಾ ಮಾಡ್ತಾರೆ ಅದರಲ್ಲಿ ಕೊನೆ ಸಿನಿಮಾವನ್ನು ಅವರಿಗೋಸ್ಕರ ಮಾಡ್ತಾರೆ ಇದರ ಅರ್ಥ ಇಲ್ಲಿ ಎನೋ ಒಳ್ಳೆಯ ಸಂದೇಶ ಕೊಡಲು ಬಂದಿದ್ದಾರೆ. ನೀರನ್ನು ಉಳಿತಾಯ ಮಾಡಬೇಕು, ಪ್ಲಾಸ್ಟಿಕ್‌ನ ಬ್ಯಾನ್ ಮಾಡಬೇಕು, ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳಿಗೆ ವಿದ್ಯಾ ಧಾನ ಮಾಡಬೇಕು, ಕಾಡುಗಳನ್ನು ರಕ್ಷೆ ಮಾಡಬೇಕು ಪ್ರಾಣಿಗಳನ್ನು ರಕ್ಷಣೆ ಮಾಡಬೇಕು ಅನ್ನೋ ಸಂದೇಶ ಕೊಡಲು ಬಂದಿದ್ದಾರೆ ಹಾಗೆ ಮಾಡ್ತಾರೆ. ಪವರ್ ಸ್ಟಾರ್ ಎಲ್ಲೂ ಹೋಗಿಲ್ಲ ಸ್ಟಾರ್ ಮಾತ್ರ ಮೇಲೆ ಹೋಗಿದ್ದಾರೆ ಪವರ್ ಮಾತ್ರ ಇಲ್ಲೇ ಇದೆ...ಪವರ್‌ನ ಜನರು ಕೊಟ್ಟಿರುವುದು ಈ ಪವರ್ ಎಷ್ಟು ಜನಕ್ಕೆ ಬೆಳಕು ಕೊಡ್ತಾರೆ ನೋಡೋಣ. ನನ್ನನ್ನು ನಿಮ್ಮ ಜೊತೆ ಸೇರಿಸಿಕೊಳ್ಳು ಅಪ್ಪು ಸಂದೇಶವನ್ನು ಸಾರೋಣ' ಎಂದು ರಾಘವೇಂದ್ರ ರಾಜ್‌ಕುಮಾರ್ ಖಾಸಗಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

Puneeth Rajkumar; ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಿದ್ದೀನಿ; ಶಿವಣ್ಣ ಭಾವುಕ

'ಅಪ್ಪು ಹುಟ್ಟುಹಬ್ಬವನ್ನು ಸ್ಫೂರ್ತಿ ದಿನಾಚರಣೆ ಎಂದು ಸರ್ಕಾರ ಘೋಷಣೆ ಮಾಡಿರುವುದು ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ನನ್ನ ತಮ್ಮ ನಮ್ಮನ್ನು ಬಿಟ್ಟು ಹೋದಾಗ ಆ ಮೂರು ದಿನ ಸರ್ಕಾರ ಜನ ಮೀಡಿಯಾ ಎಲ್ಲರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ ಆ ಶಕ್ತಿ. ಅನ್ನ ದಾನ, ನೇತ್ರದಾನ, ರಕ್ತ ದಾನ ಹಾಗೂ ವಿದ್ಯಾ ದಾನ ಮಾಡುವುದಕ್ಕೆ ಆ ಶಕ್ತಿ ಈ ಭೂಮಿ ಮೇಲೆ ಬಂದಿರುವುದು. ಈ ವಿಚಾರಗಳು ಮಕ್ಕಳಿಗೆ ಸ್ಫೂರ್ತಿ  ಕೊಡುತ್ತಿದೆ ಅದಿಕ್ಕೆ ಸ್ಪೂರ್ತಿ ದಿನಾಚರಣೆ ಅಂತ ಘೋಷಣೆ ಮಾಡಿದ್ದಾರೆ.  ಅಣ್ಣನಾಗಿ ನನಗೆ ಸ್ಪೂರ್ತಿ ಕೊಟ್ಟಿದ್ದಾನೆ ಜನರ ಜೊತೆ ಹೇಗಿಬೇಕು ಜನರಿಗೆ ಏನು ಮಾಡಬೇಕು ಅನ್ನೋದು. ಈ ರೀತಿ ಸ್ಪೂರ್ತಿ ಕೊಡುವ ವ್ಯಕ್ತಿಗಾಗಿ ಸ್ಪೂರ್ತಿ ದಿನವನ್ನು ಘೋಷಣೆ ಮಾಡಿರುವುದು.' ಎಂದು ರಾಘಣ್ಣ ಹೇಳಿದ್ದಾರೆ.

'ಅಪ್ಪುನ ನಾವು ಬಿತ್ತಿದ್ದೀವಿ ಹೂತ್ತಿಲ್ಲ ಅಂತ ಯಾಕೆ ಹೇಳಿರುವುದು ಅಂದ್ರೆ ಅದೆಷ್ಟೋ ಅಪ್ಪುಗಳು ಹುಟ್ಟುತ್ತಿದ್ದಾರೆ. ಯಾರ್ಯಾರೋ ಅನ್ನ ದಾನ ಪುಸ್ತಕ ದಾನ ಮಾಡುತ್ತಿದ್ದಾರೆ. ಈ ದೇಶಕ್ಕೆ ಒಂದು ಅಪ್ಪು ಸಾಲದು ಅದಿಕ್ಕೆ ಬಿತ್ತಿದ್ದೀವಿ ನೂರಾರು ಅಪ್ಪುಗಳು ಬರಬೇಕು' ಎಂದಿದ್ದಾರೆ ರಾಘಣ್ಣ.

ಪುನೀತ್ ರಾಜಕುಮಾರ್ ಜನ್ಮದಿನ: ನಟ ರಾಘವೇಂದ್ರ ರಾಜ್‌ಕುಮಾರ್ ಭಾವುಕ ನುಡಿ

'ನನ್ನ ಮಗ ಯುವ ರಾಜ್‌ಕುಮಾರ್‌ಗೆ ನನ್ನ ತಮ್ಮನ ಸ್ಥಾನವನ್ನು ಜನರು ಕೊಡುವುದಕ್ಕೆ ಹೊರಟಿದ್ದಾರೆ ಅಂದ್ರೆ ಅದು ನನ್ನ ಭಾಗ್ಯ. ಆದರೆ ನಾನು ಅಂದುಕೊಳ್ಳುವುದು ಅಪ್ಪು ಅವರ ಸ್ಥಾನವನ್ನು  ಯಾರೂ ತುಂಬಲು ಆಗಲ್ಲ. ಅಪ್ಪುನ ವ್ಯಕ್ತಿಯಾಗಿ ನೋಡುತ್ತಿಲ್ಲ ನಟನಾಗಿ ನೋಡುತ್ತಿಲ್ಲ ಒಂದು ಶಕ್ತಿಯಾಗಿ ಜನರು ನೋಡುತ್ತಿದ್ದಾರೆ ಈ ಸ್ಥಾನ ಪಡೆಯುಲು ಯಾರಿಂದ ಸಾಧ್ಯವಿಲ್ಲ. ನನ್ನ ಮಗ ನಟನೆಗೆ ಬರ್ತಿದ್ದಾನೆ ಅಂದ್ರೆ ಅವನು ಕಷ್ಟ ಪಟ್ಟು ಬರಬೇಕು ಹೊರತು ಅಪ್ಪು ಜಾಗ ಕೊಟ್ಟರು ಅಂತ ಸುಲಭವಾಗಿ ತೆಗೆದುಕೊಳ್ಳಲು ಆಗಲ್ಲ. ಅಪ್ಪು ಅಷ್ಟೇ ಪರಿಶ್ರಮ ಮತ್ತು ವ್ಯಕ್ತಿತ್ವ ಬೆಳೆಸಿಕೊಂಡು ಹೋಗಬೇಕು. ಅಭಿಮಾನಿಗಳು ಕೊಟ್ಟಿರುವ ಸ್ಥಾನಕ್ಕೆ ನನ್ನ ನಮಸ್ಕಾರ ಆ ಜಾಗ ತೆಗೆದುಕೊಳ್ಳುವುದು ಸುಲಭವಲ್ಲ. ಇಲ್ಲ ಅವರವರೇ ಜಾಗ ಮಾಡಿಕೊಳ್ಳಬೇಕು ನನ್ನ ಮಗ ಈಗ ಆ ನಿಟ್ಟಿನಲ್ಲಿ ಇದ್ದಾನೆ. ನನ್ನ ಮಗನಿಗೆ ಯಾವ ಜಾಗನೂ ಕೊಡಬೇಕು ಬದಲಿಗೆ ಹರಿಸಿ' ಎಂದು ರಾಘಣ್ಣ ಹೇಳಿದ್ದಾರೆ.

Follow Us:
Download App:
  • android
  • ios