ನಟಿ ರಾಧಿಕಾ ಪಂಡಿತ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಒಂದನ್ನು ಶೇರ್​ ಮಾಡಿದ್ದು, ಅದಕ್ಕೆ ಹಾಕಿರುವ ಶೀರ್ಷಿಕೆಯಲ್ಲಿ ಜೀವನದ ಪಾಠ ಹೇಳಿದ್ದಾರೆ ಏನದು? 

ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ ಯಾವುದು ಎಂದು ಕೇಳಿದರೆ ಅದರಲ್ಲಿ ಟಾಪ್​ ಸ್ಥಾನದಲ್ಲಿ ಕೇಳಿಬರುವ ಹೆಸರು ನಟರಾದ ರಾಕಿಂಗ್ ಸ್ಟಾರ್ ಯಶ್​ (Yash) ಮತ್ತು ರಾಧಿಕಾ ಪಂಡಿತ್​ (Radhika Pandit) ಅವರದ್ದು. 2012 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನ ಡ್ರಾಮಾ ಚಿತ್ರದಲ್ಲಿ ಯಶ್ ರಾಧಿಕಾ ಪಂಡಿತ್ ನಟಿಸಿದ್ದರು. ಬಳಿಕ ಬಂದ ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ ಸಿನಿಮಾದಲ್ಲಿಯೂ ಒಟ್ಟಾಗಿ ನಟಿಸಿದ್ದರು. ಬಳಿಕ ಸೆಟ್​ನಲ್ಲಿಯೇ ಲವ್​ ಆಗಿದೆ. 2016 ಡಿಸೆಂಬರ್‌ 9ರಂದು ಗೋವಾದಲ್ಲಿ ಮದುವೆಯಾದ ಈ ಜೋಡಿ ಈಗ ಇಬ್ಬರು ಮುದ್ದಾದ ಮಕ್ಕಳ ಪಾಲಕರು. ಐರಾ ಹಾಗೂ ಯಥರ್ವ್ ಎಂಬ ಮಕ್ಕಳ ಲಾಲನೆಯಲ್ಲಿ ರಾಧಿಕಾ ಬಿಜಿಯಾಗಿದ್ದಾರೆ. ಯಶ್ ಅವರನ್ನು ಮದುವೆಯಾದ ಬಳಿಕ ರಾಧಿಕಾ ಹಚ್ಚೇನು ಸಿನಿಮಾ ಮಾಡಿಲ್ಲ. ಮನೆ, ಸಂಸಾರ ಎಂದು ಬಿಜಿಯಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕುಟುಂಬದ ಫೋಟೋ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹೆಚ್ಚಾಗಿ ಅವರು ಮಕ್ಕಳ ಜೊತೆಗಿನ ಫೋಟೋಗಳು ಹಂಚಿಕೊಳ್ಳುತ್ತಾರೆ. ಪತಿ ಯಶ್​ ಮತ್ತು ಮಕ್ಕಳ ಜೊತೆ ಆಗಾಗ್ಗೆ ಟೂರ್​ಗೆ ಹೋಗುತ್ತಾ ಅದರ ಫೋಟೋಗಳನ್ನೂ ಶೇರ್​ ಮಾಡಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 30 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ.

ಹೀಗೆ ಫೋಟೋ ಶೇರ್​ ಮಾಡಿಕೊಲ್ಳುವ ಮೂಲಕ ಅಭಿಮಾನಿಗಳ ಜೊತೆಗಿನ ನಂಟನ್ನು ಮುಂದುವರೆಸಿದ್ದಾರೆ. ಇಂದು ರಾಧಿಕಾ ಅವರು ಹೊಸ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಇದು ಸಕತ್​ ವೈರಲ್​ ಆಗುತ್ತಿದೆ. ಇದರಲ್ಲಿ ಸೂರ್ಯಾಸ್ತದ ಸಮಯವನ್ನು ನಾವು ನೋಡಬಹುದು. ಹಿಂಭಾಗದಲ್ಲಿ ಸೂರ್ಯ ಮುಳುಗುತ್ತಿದ್ದು, ಸಮುದ್ರದ ತೀರದಲ್ಲಿ ರಾಧಿಕಾ ನಿಂತಿದ್ದಾರೆ. ಈ ಫೋಟೋ ಶೇರ್​ ಮಾಡಿರುವ ನಟಿ ಜೀವನ ಸಂದೇಶವನ್ನು ನೀಡಿದ್ದಾರೆ. ‘ಒಳ್ಳೆಯ ದಿನಗಳು ಸಂತೋಷವನ್ನು ನೀಡುತ್ತವೆ. ಕೆಟ್ಟ ದಿನಗಳು ಅನುಭವವನ್ನು ನೀಡುತ್ತವೆ. ಅತೀ ಕೆಟ್ಟ ದಿನಗಳು ಪಾಠ ಕಲಿಸುತ್ತದೆ. ಉತ್ತಮ ದಿನಗಳು ನೆನಪುಗಳನ್ನು ನೀಡುತ್ತವೆ’ ಎಂದು ಈ ಫೋಟೋಗೆ ರಾಧಿಕಾ ಶೀರ್ಷಿಕೆ ಕೊಟ್ಟಿದ್ದಾರೆ. ಈ ಶೀರ್ಷಿಕೆಯನ್ನು ಮೆಚ್ಚಿಕೊಂಡು ಹಲವರು ಕಮೆಂಟ್​ ಮಾಡುತ್ತಿದ್ದಾರೆ.

ಆದಿಪುರುಷ್​ ಪಾರ್ಟ್​-2! ರಾಮ, ಸೀತೆಯಾಗಿ ಮಿಂಚುತಿರೋ ಯಶ್​- ರಾಧಿಕಾ ಜೋಡಿ

ಈಚೆಗಷ್ಟೇ ಯಶ್​-ರಾಧಿಕಾ ಸೀತೆ-ರಾಮನ ಪಾತ್ರದಲ್ಲಿ ವೈರಲ್​ ಆಗಿದ್ದರು. ಆದಿಪುರುಷ್​ನಲ್ಲಿ ಸೀತೆ-ರಾಮನ ಪಾತ್ರವನ್ನೇ ಹೋಲುವಂತೆ ಯಶ್​-ರಾಧಿಕಾರನ್ನು ಸೀತೆ-ರಾಮ ಪಾತ್ರವನ್ನಾಗಿ ಎಡಿಟ್​ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿತ್ತು. ಇಬ್ಬರೂ ಕಾವಿ ಧರಿಸಿ ರಾಮ ಸೀತೆಯಂತೆ ಕಾಣಿಸಿಕೊಂಡಿದ್ದರು. ಆದಿಪುರುಷ್​ ಗಲಾಟೆ ಏನೇ ಇದ್ದರೂ ಈ ಕ್ಯೂಟ್​ ಜೋಡಿಯನ್ನು ಮಾತ್ರ ಜನರು ಅದರಲ್ಲಿಯೂ ಯಶ್​-ರಾಧಿಕಾ (Yash-Radhika) ಫ್ಯಾನ್ಸ್​ ಸಕತ್​ ಇಷ್ಟಪಡುತ್ತಿದ್ದಾರೆ. ಆದಿಪುರುಷ್​ ಪಾರ್ಟ್​-2 ಎನ್ನುತ್ತಿದ್ದಾರೆ ನೆಟ್ಟಿಗರು. ಆದಿಪುರುಷ್​ ಪಾರ್ಟ್​ 1 (Adipurush) ಫ್ಲಾಪ್​ ಆದ್ರೂ ಪಾರ್ಟ್​-2 ಸಕತ್​ ಹಿಟ್​ ಆಗಲಿದೆ ಎನ್ನುತ್ತಿದ್ದಾರೆ. 

ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಸದ್ಯ ರಾಧಿಕಾ ಸಿನಿ ರಂಗದಿಂದ ದೂರವಿದ್ದರೆ, ಯಶ್​ ಅವರ ಮುಂದಿನ ಸಿನಿಮಾ ಕುರಿತು ಸಾಕಷ್ಟು ಕುತೂಹಲವಿದೆ. ಮೈಸೂರಿನ ನಂಜನಗೂಡು (Nanjangudu) ಶ್ರೀಕಂಠೇಶ್ವರನ ಸನ್ನಿಧಿಗೆ ಭೇಟಿ ನೀಡಿದ್ದ ಯಶ್​, ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತಾಡಿದ್ದರು. ಶೀಘ್ರದಲ್ಲೇ ಹೊಸ ಚಿತ್ರದ ಘೋಷಣೆ ಮಾಡುವುದಾಗಿ ಯಶ್​ ಹೇಳಿದ್ದರಿಂದ ಫ್ಯಾನ್ಸ್​ ಕಾತರರಾಗಿದ್ದಾರೆ. ಇವರು ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ನಂತರ ರಾಮಾಯಣ ಸಿನಿಮಾದಲ್ಲಿ ರಾವಣನಾಗುತ್ತಾರೆ ಎನ್ನೋ ಮಾತೂ ಇದ್ದು, ಸದ್ಯ ಅವರ ನಡೆ ಸೀಕ್ರೇಟ್​ ಆಗಿ ಉಳಿದಿದೆ. ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುವವರಿಗೆ ಉತ್ತರವಾಗಿ ಈ ರಾಕಿಂಗ್ ಸ್ಟಾರ್​, ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಉಚಿತವಾಗಿ ಸಿನಿಮಾ ನೋಡುವುದಿಲ್ಲ. ನಾವು ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ (Cinema) ಮಾಡಬೇಕು ಎಂದು ಹೇಳುವ ಮೂಲಕ ಭರ್ಜರಿ ಚಿತ್ರವನ್ನು ಕೊಡಲಿದ್ದಾರೆ ಎಂದು ಹಿಂಟ್​ ಕೊಟ್ಟಿದ್ದಾರೆ.

ಮಳೆಗಾಲ ಎಂ​ಜಾಯ್​ ಮಾಡ್ತಿರೋ ಯಶ್​-ರಾಧಿಕಾ: ವೈರಲ್​ ಫೋಟೋಗೆ ಫ್ಯಾನ್ಸ್​ ಫಿದಾ!

View post on Instagram