Asianet Suvarna News Asianet Suvarna News

ನನ್ನ ತಂದೆ ಸೇಫ್ ಡ್ರೈವರ್, ನಿದ್ರೆ ಬೇಕಿದ್ರೂ ಮಾಡ್ಬೋದು; ತಂದೆ ಡ್ರೈವಿಂಗ್‌ ಬಗ್ಗೆ ರಾಧಿಕಾ ಪಂಡಿತ್ ಪೋಸ್ಟ್‌

ಮಕ್ಕಳ ಜೊತೆ ತಂದೆ ಗಾಡಿಯಲ್ಲಿ ಸವಾರಿ ಮಾಡಿದ ರಾಧಿಕಾ ಪಂಡಿತ್. ಫೋಟೋಗೆ ಮಾತ್ರ ಹೆಲ್ಮೆಟ್ ಹಾಕಿಲ್ಲ ಎಂದ ನಟಿ...

Radhika Pandit shares picture with father and kids on scooty vcs
Author
First Published Dec 17, 2022, 1:10 PM IST

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಸಿಂಡ್ರೆಲಾ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಟ್ರಿಪ್, ಮಕ್ಕಳು, ದಿನಚರಿ ಮತ್ತು ಸಿನಿಮಾಗಳ ಬಗ್ಗೆ ಹಂಚಿಕೊಳ್ಳುತ್ತಾರೆ. ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡುವ ರಾಧಿಕಾ ಈಗ ತಮ್ಮ ಮಕ್ಕಳ ಜೊತೆ ತಂದೆ ಹಿಂದೆ ಕುಳಿತುಕೊಂಡು ಸ್ಕೂಟಿ ರೈಡ್ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಕಾಲೇಜ್‌ ಬಂಕ್ ಮಾಡಿದ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ.

ರಾಧಿಕಾ ಪೋಸ್ಟ್‌:

'Lets Vrooooommm...ವೀಕೆಂಡ್ ಆರಂಭಿಸೋಣ. ಒಂದು ಸ್ಕೂಟರ್‌ ಮೇಲೆ ನಾವು ಫುಲ್ ಹೌಸ್‌ ಇದ್ದೀವಿ. ನಾವು ಫೋಟೋಗೆ ಮಾತ್ರ ಪೋಸ್ ಕೊಡುತ್ತಿರುವುದು ಹೀಗಾಗಿ ಹೆಲ್ಮೆಟ್ ಧರಿಸಿಲ್ಲ. ದ್ವಿಚಕ್ರವಾಹನ ಓಡಿಸುವವರು ತಪ್ಪದೆ ಹೆಲ್ಮೆಟ್ ಧರಿಸಿ. ಈ ಪ್ರಪಂಚದಲ್ಲಿರುವ ಸೇಫೆಸ್ಟ್‌ ಡ್ರೈವರ್ ಅಂದ್ರೆ ನನ್ನ ತಂದೆ. ಅವರು ಗಾಡಿ ಓಡಿಸುವಾಗ ನಾನು ನಂಬಿಕೆ ಇಟ್ಟು ನೆಮ್ಮದಿಯಾಗಿ ನಿದ್ರೆ ಮಾಡಬಹುದು ಅಷ್ಟು ಸೇಫ್. ಸ್ಕೂಲ್‌ಯಿಂದ ಹಿಡಿದು ಕಾಲೇಜ್‌ವರೆಗೂ ಅಷ್ಟೇ ಅಲ್ಲ ನನ್ನ ಇಡೀ ಜೀವನ ನನ್ನ ತಂದೆ ನನ್ನನ್ನು ಪಿಕ್ ಆಂಡ್ ಡ್ರಾಪ್ ಮಾಡಿದ್ದಾರೆ. ಕ್ಲಾಸ್‌ನ ಬಂಕ್ ಮಾಡಿದಾಗಲೂ ನನ್ನನ್ನು ಕರೆದುಕೊಂಡು ಹೋಗಿದ್ದಾರೆ' ಎಂದು ರಾಧಿಕಾ ಬರೆದುಕೊಂಡಿದ್ದಾರೆ. 

ಬೇಬಿ ಶಾರ್ಕ್‌ ಹಾಡಿಗೆ ಹೆಜ್ಜೆ ಹಾಕಿದ ಐರಾ, ಯಥರ್ವ್; 2 ವರ್ಷದಿಂದ ರಾಧಿಕಾ ಕೇಳುತ್ತಿರುವ ಹಾಡಿದು!

ಫೋಟೋದಲ್ಲಿ ಬಿಳಿ ಬಣ್ಣದ ಆಕ್ಟಿವಾ ಮೇಲೆ ನಾಲ್ಕು ಮಂದಿ ಕುಳಿತಿದ್ದಾರೆ. ಗಾಡಿಯನ್ನು ರಾಧಿಕಾ ಪಂಡಿತ್ ತಂದೆ ಓಡಿಸುತ್ತಿದ್ದಾರೆ, ಹಿಂದೆ ರಾಧಿಕಾ ಕುಳಿತುಕೊಂಡಿದ್ದಾರೆ. ಗ್ಯಾಡಿ ಹ್ಯಾಂಡಲ್‌ ಹಿಡಿದುಕೊಂಡು ಐರಾ ನಿಂತಿದ್ದಾಳೆ, ಅಮ್ಮನ ಮಡಿಲಿನಲ್ಲಿ ಯಥರ್ವ್ ಕುಳಿತಿದ್ದಾನೆ. 'ತಂದೆ ಜೊತೆ ಗಾಡಿಯಲ್ಲಿ ಕುಳಿತುಕೊಳ್ಳುವ ಮಜಾನೇ ಬೇರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಈ ಗಾಡಿ ಗೌರವ್ ಹೆಸರಿನಲ್ಲಿದೆ ಅಂದ್ರೆ ರಾಧಿಕಾ ಅಣ್ಣ' ಎಂದಿದ್ದಾರೆ.

ರಾಧಿಕಾ ಜೀವನ:

ಕನ್ನಡ ಚಿತ್ರರಂಗದಲ್ಲಿ ತುಂಬಾ ಸಿಂಪಲ್ ಆಂಡ್ ಡಿಗ್ನಿಫೈಡ್ ಆಗಿರುವ ರಾಧಿಕಾ ಪಂಡಿತ್‌ನ ಸಿನಿ ರಸಿಕರು ಮನೆ ಮಗಳಂತೆ ನೋಡಿಕೊಳ್ಳುತ್ತಾರೆ. ತೆರೆ ಮೇಲೆ ಸಿಕ್ಕಾಪಟ್ಟ ಉದ್ದ ಕಾಣುವ ರಾಧು ರಿಯಲ್ ಆಗಿರುವುದು 5 ಅಡಿ 3 ಇಂಚು. ಸದಾ ನಗುತ್ತಾ ಗ್ಲೋ ಆಗುವ ರಾಧಿಕಾ ಬ್ಯೂಟಿ ಸೀಕ್ರೆಟ್‌ನ ಪದೇ ಪದೇ ಪ್ರಶ್ನೆ ಮಾಡಲಾಗಿತ್ತು ಆಗ  ಡಯಟ್‌ ವಿಚಾರದಲ್ಲಿ ಹೆಚ್ಚಾಗಿ ತೆಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ರಾಧಿಕಾ ಪಚನ ಕ್ರಿಯೆ ಚೆನ್ನಾಗಿದೆಯಂತೆ. ಹೆಚ್ಚಾಗಿ ಯೋಗ ಮತ್ತು ಡ್ಯಾನ್ಸ್ ಮಾಡುವ ರಾಧಿಕಾಳಿಗೆ ಜಿಮ್ ಅಂದ್ರೆ ಆಗೋಲ್ವಂತೆ. ಟೀ ಕುಡಿಯುವುದು ಅಂದ್ರೆ ರಾಧಿಕಾಗೆ ತುಂಬಾ ಇಷ್ಟವಂತೆ. ರಾಧು ದಿನದಲ್ಲಿ 30-40 ನಿಮಿಷ ಯೋಗ ಮಾಡುತ್ತಾರಂತೆ. ಬೇಕಿಂಗ್ ಮಾಡುವುದು ಆಂಡ್ ಪುಸ್ತಕಗಳನ್ನು ಓದಲು ಬಯಸುತ್ತಾರೆ. ಬುಕ್‌ ಅಥವಾ ಮ್ಯೂಸಿಕ್‌ ಕೇಳಿಸಿಕೊಂಡರೆ ಮೈಂಡ್‌ ಕಾಮ್‌ ಆಗುತ್ತೆ ಎನ್ನುತ್ತಾರೆ ಮಿಸಸ್ ರಾಮಾಚಾರಿ. ಆರೋಗ್ಯ ಆಹಾರವೇ ಸ್ಕಿನ್‌ ಹಾಗೂ ಕೂದಲ ಸೌಂದರ್ಯದ ರಹಸ್ಯವಂತೆ.

 

Follow Us:
Download App:
  • android
  • ios