ಅಬ್ಬಾ! ಐರಾ ಹಾಗೂ ಯಥರ್ವ್ ಎಷ್ಟು ಜೋರಿದ್ದಾರೆ. ಇವರಿಬ್ಬರ ತುಂಟಾಟಕ್ಕೆ ಫಿದಾ ಅದ ನೆಟ್ಟಿಗರು.

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಮದರ್‌ವುಡ್ ಎಂಜಾಯ್ ಮಾಡುತ್ತಿದ್ದಾರೆ. ಐರಾ ತೊದಲು ಮಾತು ಎಂಜಾಯ್ ಮಾಡುತ್ತಿದ್ದಂತೆ, ಜ್ಯೂನಿಯರ್ ಯಶ್ ಯಥರ್ವ್ ಎಂಟ್ರಿ ಆಯ್ತು. ಈಗ ಮನೆಯಲ್ಲಿ ಡಬಲ್ ಧಮಾಕ ಜೋರಾಗಿದೆ. ಮಕ್ಕಳ ಸಣ್ಣಪುಟ್ಟ ವಿಡಿಯೋ ಹಂಚಿಕೊಂಡು ಫಾಲೋವರ್ಸ್‌ನ ಎಂಗೇಜ್‌ ಆಗಿಟ್ಟುಕೊಂಡಿರುವ ರಾಧಿಕಾ ಸೂಪರ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ಪುಟ್ಟ ಯಥರ್ವ್‌ ಗೂಗಲ್ ಡಿವೈಸ್‌ಗೆ ಬೇಬಿ ಶಾರ್ಕ್ ಹಾಡು ಪ್ರಸಾರ ಮಾಡುವಂತೆ ಡಿಮ್ಯಾಂಡ್ ಮಾಡುತ್ತಾನೆ. ಗೂಗಲ್‌ಗೆ ಅರ್ಥವಾಗದ ಕಾರಣ ಎರಡು ಸಲ ಕೇಳುತ್ತಾನೆ. ಹಾಡು ಬಂದ ತಕ್ಷಣ ತಾಯಿ ಮುಖ ನೋಡಿ ಹೆಜ್ಜೆ ಹಾಕಲು ಶುರು ಮಾಡುತ್ತಾನೆ, ಎಲ್ಲೋ ಇದ್ದ ಅಕ್ಕ ಐರಾ ಕೂಡ ಓಡಿ ಬಂದು ಡ್ಯಾನ್ಸ್ ಮಾಡುತ್ತಾಳೆ. ಇಬ್ಬರು ಹಾಡು ಹಾಡುತ್ತಾ, ಡ್ಯಾನ್ಸ್ ಮಾಡಿ ಎಂಜಾಯ್ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಐರಾ- ಯಥರ್ವ್, ಯಶ್-ನಂದಿನಿ; ರಾಖಿ ಹಬ್ಬದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್!

'ಈ ವಾರ ಕೊಂಚ ಮ್ಯೂಸಿಕ್‌ನಿಂದ ಆರಂಭಿಸೋಣ. ಕಳೆದ ಎರಡೂ ವರ್ಷಗಳಿಂದ ಈ ಹಾಡನ್ನು ಕೇಳುತ್ತಿರುವೆ,' ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನ ರಾಧಿಕಾ ಮಲೇಶ್ವರಂ ಮನೆಯಲ್ಲಿ ಸೆರೆ ಹಿಡಿದಿರುವುದು. ವಿಡಿಯೋದಲ್ಲಿ ಯಥರ್ವ್ ತೊದಲು ಮಾತುಗಳು ಹಾಗೂ ಐರಾ ಎಂಟ್ರಿ ನೆಟ್ಟಿಗರ ಗಮನ ಸೆಳೆದಿದೆ. 'ಇಬ್ಬರೂ ನಮ್ಮ ಮುಖದಲ್ಲಿ ನಗು ತರಿಸುತ್ತಾರೆ, ದಯವಿಟ್ಟು ಹೀಗೆ ವಿಡಿಯೋ ಶೇರ್ ಮಾಡಿ,' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ಬೇಬಿ ಶಾರ್ಕ್ ಒಂದು ಜನಪ್ರಿಯ ಇಂಗ್ಲಿಷ್ ರೈಮ್ ಆಗಿದ್ದು. ಮಿಲಿಯನ್‌ ಗಟ್ಟೆಲೆ ವೀಕ್ಷಣೆ ಪಡೆದುಕೊಂಡಿದೆ. ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಪುಟ್ಟ ಮಕ್ಕಳು ಈ ಹಾಡನ್ನು ಹೆಚ್ಚಾಗಿ ಕೇಳುತ್ತಾರೆ.

View post on Instagram