ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಾಧಿಕಾ ಪಂಡಿತ್ ಮಕ್ಕಳ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ಪ್ರತಿ ಪೋಟೋದಲ್ಲಿಯೂ ಐರಾ ಹಾಗೂ ಯಥರ್ವ್‌ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಮಕ್ಕಳನ್ನು ನೋಡಲು ಯಾರ ತರ ಇದ್ದಾರೆ ಎಂದು ಕಾಮೆಂಟ್‌ನಲ್ಲಿ ಅಭಿಮಾನಿಗಳು ಚರ್ಚಿಸುತ್ತಾರೆ. ಇತ್ತೀಚಿಗೆ ಶೇರ್ ಮಾಡಿಕೊಂಡ ಫೋಟೋ ಸೃಷ್ಟಿಸಿದ ಗೊಂದಲದಿಂದ ರಾಧಿಕಾ ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ರಾಧಿಕಾ ಮನೆ ದೀಪಾವಳಿ; ಮೂರು ವರ್ಷಗಳ ಸಂಭ್ರಮ ಹೇಗಿತ್ತು ನೋಡಿ!

ರಾಧಿಕಾ ಪೋಸ್ಟ್:
ಕೆಲವು ದಿನಗಳ ಹಿಂದೆ ರಾಧಿಕಾ ಪಂಡತ್ ತಮ್ಮ ಅಜ್ಜಿ ಜೊತೆಗಿರುವ ಬಾಲ್ಯದ ಫೋಟೋ ಶೇರ್ ಮಾಡಿಕೊಂಡಿದ್ದರು. ನೋಡಲು ಸೇಮ್ ಯಥರ್ವ್‌ ರೀತಿ ಕಾಣಿಸುತ್ತಿದ್ದು, ಅಭಿಮಾನಿಗಳು ಕಾಮೆಂಟ್‌ನಲ್ಲಿ ಯಥರ್ವ್‌ ಸೇಮ್‌ ನಿಮ್ಮ ಹಾಗೆ ಎಂದು ಹೇಳುತ್ತಿದ್ದಾರೆ. 'ಹೀಗೆ ಹುಡುಕುತ್ತಾ ಕುಳಿತಾಗೆ ನನ್ನ ಬ್ಯೂಟಿಫುಲ್ ಅಜ್ಜಿ ಫೋಟೋ ಕಾಣಿಸಿತ್ತು. ಪೋಟೋ ಕ್ಲಾರಿಟಿ ಇಲ್ಲ ಆದರೆ ಶೇರ್ ಮಾಡದಿರಲು ಮನಸ್ಸು ಒಪ್ಪಲಿಲ್ಲ. ಅವ್ರು ನನ್ನ ಫೇವರೆಟ್. ಈಗಲ್ಲೂ ನಾವೆಲ್ಲರೂ ನಮ್ಮ ಅಜ್ಜಿ-ತಾತಗೆ ಕ್ಲೋಸ್ ಇರುತ್ತೇವೆ ಅಲ್ವಾ? ಅವರೇ ಬೆಸ್ಟ್‌,' ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರಾಧಿಕಾ ನೋಡಲು ಸೇಮ್‌ ಯಥರ್ವ್‌ ರೀತಿಯೇ ಕಾಣಿಸುತ್ತಿದ್ದಾರೆ. ಇನ್ನು ಎಕ್ಸಟ್ರಾ ಕ್ಲಾರಿಟಿ ನೀಡಲು ರಾಧಿಕಾ ತಮ್ಮ ಫೋಟೋ ಪಕ್ಕ ಯಥರ್ವ್‌ ಪೋಟೋ ಹಿಡಿದು ಶೇರ್ ಮಾಡಿದ್ದಾರೆ...

 

ರಾಧಿಕಾ ತಾಯಿ  ಜೊತೆಗಿರುವ ಬಾಲ್ಯದ ಫೋಟೋ ಹಾಗೂ ರಾಧಿಕಾ ತಾಯಿ ಈಗ ಯಥರ್ವ್‌ನನ್ನು ಹಿಡಿದುಕೊಂಡು ನಿಂತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 'ನನ್ನ ಕಳೆದ ಬಾರಿ ಪೋಸ್ಟ್ ಮಾಡಿದ ಫೋಟೋದಿಂದ ಎಲ್ಲರೂ ಯಥರ್ವ್ ನನ್ನ ರೀತಿ ಕಾಣಿಸುತ್ತಿದ್ದಾನೆ ಎಂದು ಹೇಳಿದ್ದೀರಿ. ಆದರೆ ಆವನು ಯಶ್ ಹಾಗೂ ನನ್ನ ಕಾಂಬಿನೇಷನ್. ಆದರೂ ತಮಾಷೆಗೆ ಈ ಫೋಟೋ ಶೇರ್ ಮಾಡಿಕೊಂಡೆ,' ಎಂದು ರಾಧಿಕಾ ಬರೆದಿದ್ದಾರೆ.

ಎಲ್ಲಿ ನೋಡಿದರು ಐರಾ-ಯಥರ್ವ್‌ 'ಶಿಪ್‌ ಬರ್ತಡೇ' ಫೋಟೋಗಳು! 

'ಯಥರ್ವ್‌ ಈ ಫೋಟೋದಲ್ಲಿ ನೋಡಲು ತಂದೆ ಯಶ್ ರೀತಿ ಕಾಣಿಸುತ್ತಿದ್ದಾನೆ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಆತ 75% ಮಾತ್ರ ನಿಮ್ಮ ಹಾಗೆ ಇರುವುದು ಎಂದು ಹೇಳಿದ್ದಾರೆ.