ಮೂರು ವರ್ಷಗಳಿಂದ ದೀಪಾವಳಿ ಹೇಗಿತ್ತು ಎಂದು ರಾಧಿಕಾ ಪಂಡಿತ್ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಅಣ್ಣ-ಅತ್ತಿಗೆಯ ಓಲ್ಡ್ ಫೋಟೋಸ್ ನೋಡಿ ಯಶ್-ರಾಧಿಕಾ ಅಭಿಮಾನಿಗಳು ಫಿದಾ.
ಸ್ಯಾಂಡಲ್‌ವುಡ್ ರಾಕಿಂಗ್ ದಂಪತಿ ಪ್ರತಿ ಹಬ್ಬವನ್ನೂ ವಿಶೇಷವಾಗಿ ಆಚರಿಸುತ್ತಾರೆ. ಸಂಭ್ರಮ ಹೇಗಿತ್ತು, ವಿಶೇಷವಾಗಿ ಮಾಡಲಾಗಿದ್ದ ತಿನಿಸು ಏನು ಎಂದು ರಾಧಿಕಾ ಪ್ರತಿ ಸಲವೂ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಸ್ಪೆಷಲ್ ಆಗಿ ಕಳೆದ ಎರಡು ವರ್ಷದ ಸಂಭ್ರಮ ಹೇಗಿತ್ತು ಎಂಬುದನ್ನು ವಿವರಿಸುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಎಲ್ಲಿ ನೋಡಿದರು ಐರಾ-ಯಥರ್ವ್ 'ಶಿಪ್ ಬರ್ತಡೇ' ಫೋಟೋಗಳು!
ರಾಧಿಕಾ ಪೋಸ್ಟ್:
'ಹೇಗಿತ್ತು ಕಳೆದ ಎರಡು ವರ್ಷದ ದೀಪಾವಳಿ ಹಾಗೂ ಈ ವರ್ಷ. ನನ್ನ ಜೀವನದ ಬೆಳಕಾಗಿರುವ ಈ ಪುಟಾಣಿಗಳು ಈಗ ಪಟಾಕಿಗಳಾಗಿದ್ದಾರೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಸೇಫ್ ಆಗಿ ಆಚರಣೆ ಮಾಡಿ' ಎಂದು ಬರೆದಿದ್ದಾರೆ.
ಮೊದಲು ಶೇರ್ ಮಾಡಿರುವ ಫೋಟೋದಲ್ಲಿ ರಾಧಿಕಾ ಮೊದಲ ಮಗು (ಐರಾ)ವಿನ ನಿರೀಕ್ಷೆಯಲ್ಲಿದ್ದರು. ಯಶ್ ಜೊತೆ ನಿಂತು ಪೋಸ್ ಕೊಟ್ಟಿದ್ದಾರೆ. ಎರಡನೇ ಚಿತ್ರದಲ್ಲಿ ರಾಧಿಕಾ ಎರಡನೇ ಮಗು(ಯಥರ್ವ್)ವಿನ ನಿರೀಕ್ಷೆಯಲ್ಲಿದ್ದರು. ತಂದೆ ತಾಯಿ ಹಾಗೂ ಐರಾ ಜೊತೆ ಪೋಸ್ ನೀಡಿದ್ದಾರೆ. ಮೂರನೇ ಚಿತ್ರದಲ್ಲಿ ಇಬ್ಬರು ಮಕ್ಕಳ ಜೊತೆ ದೀಪಾ ಹಿಡಿದು ಪೋಸ್ ನೀಡಿದ್ದಾರೆ.
ಯಥರ್ವ್ ಯಶ್ ಸ್ಟೈಲ್‌ನಲ್ಲಿ 'Yes Papa' ಹೇಗೆ ಹೇಳೋದು ಗೊತ್ತಾ?
ಸ್ಯಾಂಡಲ್‌ವುಡ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಪಡೆದಿರುವ ನಟಿ ರಾಧಿಕಾ ಪಂಡಿತ್ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಚೆಲುವೆ. ಪರ್ಸನಲ್ ಲೈಫ್‌ಗೆ ಟೈಮ್ ನೀಡಿದಾಗಿನಿಂದಲೂ ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳದೆ ಇದ್ದರೂ, ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಬರುವ ವರ್ಷಗಳಲ್ಲಿ ರಾಧಿಕಾ ಒಳ್ಳೆಯ ಚಿತ್ರಕಥೆಗಳಿಗೆ ಸಹಿ ಹಾಕಬೇಕು ಮತ್ತೆ ಕಮ್ ಬ್ಯಾಕ್ ಮಾಡಬೇಕು ಎಂಬುವುದು ಕನ್ನಡಿಗರ ಆಸೆ.
