38ರ ಹರೆಯದ ರಾಧಿಕಾ ಕುಮಾರಸ್ವಾಮಿ, ಸೌಂದರ್ಯದ ಗುಟ್ಟನ್ನು ರಮ್ಯಾ ಅವರಿಗೆ ಕೊಡುತ್ತಾರೆ. ರಮ್ಯಾ ಹೇರ್​ಸ್ಟೈಲ್​, ನೇಲ್​ ಪಾಲಿಷ್​ ಮುಂತಾದ ಬ್ಯೂಟಿ ಟಿಪ್ಸ್​ಗಳನ್ನು 'ಲಕ್ಕಿ' ಚಿತ್ರದ ಸಂದರ್ಭದಲ್ಲಿ ಹಂಚಿಕೊಂಡಿದ್ದರಂತೆ. ರಾಧಿಕಾ ಅವರ 'ಭೈರಾದೇವಿ' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ.

ಸ್ಯಾಂಡಲ್​ವುಡ್​ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ವಯಸ್ಸು 38 ಆಗಿದ್ದು, ಮಗಳು ಶಮಿಕಾಗೆ ಈಗ 14 ವರ್ಷ ತುಂಬಿದೆ. ಹೀಗಿದ್ದರೂ, ರಾಧಿಕಾ ಮಾತ್ರ ಈಗಿನ ನಟಿಯರಿಗೆ ಪೈಪೋಟಿ ನೀಡುವಂಥ ಮೈಮಾಟ ಹೊಂದಿದ್ದು, ಅದೇ ಫಿಟ್​ನೆಸ್​​, ಬ್ಯೂಟಿ ಕಾಪಾಡಿಕೊಂಡು ಬಂದಿದ್ದಾರೆ. ಮಗು ಆದ ಮೇಲೆ ಮಹಿಳೆಯರ ಸೌಂದರ್ಯ ಕೆಟ್ಟು ಹೋಗುತ್ತದೆ ಎಂದು ಹಲವರು ಅಂದುಕೊಳ್ಳುವುದು ಉಂಟು. ಆದರೆ ರಾಧಿಕಾ ಮಾತ್ರ ಇದಕ್ಕೆ ತದ್ವಿರುದ್ಧ. ಮಗಳು ಶಮಿಕಾ ಹುಟ್ಟಿದ ಮೇಲೆ ಮತ್ತಷ್ಟು ಹಾಟ್​ ಆಗಿದ್ದಾರೆ ರಾಧಿಕಾ. ಈಚೆಗೆ ಅವರ ಭೈರಾದೇವಿ ಚಿತ್ರ ರಿಲೀಸ್​ ಆಗಿದ್ದು, ಅದರಲ್ಲಿನ ರಾಧಿಕಾ ನಟನೆಗೆ ಮನಸೋಲದವರೇ ಇಲ್ಲ. 

ಇದೀಗ ತಮ್ಮ ಸೌಂದರ್ಯದ ಗುಟ್ಟು ಹಾಗೂ ಸ್ಯಾಂಡಲ್​ವುಡ್​ನಲ್ಲಿ ಈ ಎಲ್ಲಾ ಬ್ಯೂಟಿ ಕಾಪಾಡಿಕೊಂಡು ಬರಲು ತಮಗೆ ಟಿಪ್ಸ್​ ನೀಡಿರುವವರ ಬಗ್ಗೆ ರಾಧಿಕಾ ಮಾತನಾಡಿದ್ದಾರೆ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ರಾಧಿಕಾ ಅವರು, 'ನಾನು ಮೊದಲು ಹೀಗಿರಲಿಲ್ಲ. ಬ್ಯೂಟಿ ಬಗ್ಗೆ ಏನೂ ಗೊತ್ತಿರಲಿಲ್ಲ. ನಾನು ಇಷ್ಟೆಲ್ಲಾ ಬದಲಾಗಲು ಕಾರಣ, ನಟಿ ರಮ್ಯಾ ಎಂದಿದ್ದಾರೆ. ರಮ್ಯಾ ಅವರಿಂದ ನಾನು ತುಂಬಾ ಕಲಿತಿದ್ದೇನೆ. ಬ್ಯೂಟಿ ಟಿಪ್ಸ್​ ಎಲ್ಲಾ ಅವರೇ ಹೇಳಿಕೊಟ್ಟಿರುವುದು, ನನಗೆ ನೇಲ್​ ವರ್ಕ್​, ನೇಲ್​ ಪಾಲಿಷ್​ ಕೂಡ ಹೇಗೆ ಮ್ಯಾಚಿಂಗ್​ ಎಲ್ಲಾ ಹಚ್ಚಬೇಕು ಎಂದು ಗೊತ್ತಿರಲಿಲ್ಲ. ಲಕ್ಕಿ ಚಿತ್ರದ ಸಂದರ್ಭದಲ್ಲಿ (2016) ನಟಿ ರಮ್ಯಾ ತುಂಬಾ ಕ್ಲೋಸ್​ ಆದರು. ಆಗ ಅವರು ನನಗೆ ಹೇಗೆ ಹೇರ್​ಸ್ಟೈಲ್​ ಮಾಡಬೇಕು, ಹೇಗೆ ನೇಲ್​ ಪಾಲಿಷ್​ ಹಚ್ಚಬೇಕು ಎಂದೆಲ್ಲಾ ಹೇಳಿಕೊಟ್ಟರು. ನಾನು ಇಂದು ಇಷ್ಟೆಲ್ಲಾ ಸ್ಟೈಲ್​ ಮಾಡುತ್ತೇನೆ ಎಂದರೆ ಅದಕ್ಕೆ ರಮ್ಯಾ ಕಾರಣ ಎಂದಿದ್ದಾರೆ.

ಏಕಾಂಗಿಯಾಗಿ ನ್ಯೂ ಇಯರ್ ಆಚರಿಸಿದ ಚಂದನವನದ ಸ್ವೀಟಿ ರಾಧಿಕಾ ಕುಮಾರಸ್ವಾಮಿ…!

ಅಷ್ಟಕ್ಕೂ 2016ರಲ್ಲಿ ಬಿಡುಗಡೆಯಾದ ಲಕ್ಕಿ ಚಿತ್ರದ ಸಂದರ್ಭದಲ್ಲಿ, ರಮ್ಯಾ ಮತ್ತು ರಾಧಿಕಾ ತುಂಬಾ ಹತ್ತಿರವಾಗಿದ್ದರು. ಈ ಬಗ್ಗೆ ಹಿಂದೆ ರಮ್ಯಾ ಕೂಡ ಮಾತನಾಡಿದ್ದರು. ರಾಧಿಕಾ ತುಂಬಾ ಅದ್ಭುತ ಹಾಗೂ ಒಳ್ಳೆ ನಟಿ. ಒಳ್ಳೆಯ ಹುಡುಗಿ ಕೂಡ. ಅವರು ನನಗಾಗಿ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದರು. ರಾಧಿಕಾರ ತುಂಬಾ ಕಷ್ಟದಿಂದ ಈ ಮಟ್ಟಿಗೆ ಬೆಳೆದಾಕೆ. ಸಿನಿ ಕ್ಷೇತ್ರಕ್ಕೆ ಆಕೆ ಕಾಲಿಟ್ಟಾಗ ನಾನೂ ಕೂಡ ಸಹಾಯ ಮಾಡಿದ್ದೇನೆ. ಅವರು ತುಂಬಾ ಒಳ್ಳೆಯ ಹುಡುಗಿ ಆಗಿರುವ ಕಾರಣ, ನನಗೆ ಯಾವಾಗಲೂ ಅವರ ಬಗ್ಗೆ ಸಾಫ್ಟ್ ಕಾರ್ನರ್ ಇದ್ದೇ ಇದೆ ಎಂದಿದ್ದರು.

 ಆಕೆ ಸಿನಿಮಾಕ್ಕೆ ಬಂದಾಗ ಅಂದಿನ ದಿನಗಳು ಹೇಗಿದ್ದವು ಎನ್ನುವುದನ್ನು ಡೇ ಒನ್​ನಿಂದ ನಾನು ಅರಿತಿದ್ದೇನೆ. ಹೀಗಾಗಿ ಅವರ ಮೇಲೆ ವಿಶೇಷವಾದ ಪ್ರೀತಿ ಇದೆ. ಚುನಾವಣೆ ಟೈಮ್​ನಲ್ಲಿಯೂ ನನ್ನ ಪರವಾಗಿ ನಿಂತಿದ್ದರು. ನಾನು ಗೆಲ್ಲಬೇಕು ಅನ್ನುವುದು ಅವರ ಆಸೆಯಾಗಿತ್ತು ಎಂದಿದ್ದರು ರಮ್ಯಾ. ಇನ್ನು ನಟಿ ರಮ್ಯಾ ಕುರಿತು ಹೇಳುವುದಾದರೆ, ಸದ್ಯ ಅವರು ಚಿತ್ರರಂಗಕ್ಕೆ ಬೈ ಬೈ ಹೇಳಿದ್ದಾರೆ. ಅವರು ಯಾವಾಗ ವಾಪಸ್​ ಬರುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಸಂಸದೆಯ ಸ್ಥಾನಕ್ಕೆ ಏಕಾಏಕಿ ಏರಿದರೂ, ಯಾವ್ಯಾವುದೋ ಕಾರಣಗಳಿಂದ ಅದನ್ನು ಉಳಿಸಿಕೊಳ್ಳಲು ಆಗದೇ, ರಾಜಕೀಯದಿಂದಲೂ ಸದ್ಯ ದೂರ ಆಗಿದ್ದಾರೆ. ಯುಐ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಟಿ, ಒಳ್ಳೆ ಕಥೆ ಸಿಕ್ರೆ ಅದಷ್ಟು ಬೇಗ ಸಿನಿಮಾಕ್ಕೆ ಬರ್ತಿನಿ ಎಂದಿದ್ದರು. ಅವರ ಮದುವೆಯ ಬಗ್ಗೆಯೂ ಸಾಕಷ್ಟು ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ.

ಕಡಲ ತೀರದಲ್ಲಿ ಕುಣಿದು ಕುಪ್ಪಳಿಸಿದ ಸ್ವೀಟಿ ರಾಧಿಕಾ ಕುಮಾರಸ್ವಾಮಿ; ಹಾಡು ಕೇಳಿ ಶಾಕ್ ಆಗ್ಬೇಡಿ..!