Asianet Suvarna News Asianet Suvarna News

Rachita Ram ಸಿನಿಮಾ ಸೋತರೂ ನೆಗೆಟಿವ್ ಇದ್ದರೂ ನಾನು ಸುದ್ದಿಯಲ್ಲಿ ಇರ್ತೀನಿ: ರಚಿತಾ ರಾಮ್ ಶಾಕಿಂಗ್ ಹೇಳಿಕೆ

ಕಿರುತೆರೆಯಲ್ಲಿ 10 ವರ್ಷಗಳ ಸಿನಿ ಜರ್ನಿ ಆಚರಿಸಿಕೊಂಡ ಡಿಂಪಲ್ ಕ್ವೀನ್. ಜರ್ನಿ ಏರು ಇಳಿತಗಳ ಬಗ್ಗೆ ಹಂಚಿಕೊಂಡಿದ್ದಾರೆ...............

Rachita Ram talks about 10 years film journey in Super queen reality show vcs
Author
First Published Nov 22, 2022, 5:09 PM IST

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಬುಲ್ ಬುಲ್ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿ ಈಗ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಮಾತ್ರವಲ್ಲದೆ ಗೆಸ್ಟ್‌ ರೂಲ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 22ಕ್ಕೆ ಸಿನಿ ಜರ್ನಿ ಶುರು ಮಾಡಿ 10 ಪೂರೈಸಿದ್ದಾರೆ. ಈ ಕ್ಷಣವನ್ನು ಸಂಭ್ರಮಿಸಬೇಕು ಎಂದು ಸೂಪರ್ ಕ್ವೀನ್‌ ತಂಡ ಸರ್ಪ್ರೈಸ್ ಕೊಟ್ಟಿದೆ. ಜೀ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋಗೆ ವಿಜಯ್ ರಾಘವೇಂದ್ರ ಜೊತೆ ರಚ್ಚು ತೀರ್ಪುಗಾರರಾಗಿದ್ದಾರೆ. ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡುತ್ತಿದ್ದಾರೆ. 

ರಚ್ಚು ಜರ್ನಿ: 

'ಕಿರುತೆರೆಯಲ್ಲಿ ನನ್ನ 10 ವರ್ಷಗಳ ಸಿನಿಮಾ ಜರ್ನಿಯನ್ನು ಆಚರಿಸಿಕೊಂಡ ಖುಷಿ ಇದೆ. ತೀರ್ಪುಗಾರರ ಸ್ಥಾನದಲ್ಲಿ ಕುಳಿತುಕೊಂಡು ಸ್ಪರ್ಧಿಗಳನ್ನು ನೋಡಿದಾಗ ನಾನು ಖುಷಿಯಿಂದ ರಿಯಾಕ್ಟ್‌ ಮಾಡುತ್ತೀನಿ. ನನ್ನ ವೃತ್ತಿ ಜೀವನ ಆರಂಭಿಸಿದ್ದು ಜೀ ಕನ್ನಡ ವಾಹಿನಿ ಮೂಲಕ ಅರಸಿ ಹೆಸರಿನ ಧಾರಾವಾಹಿ ಅದರಲ್ಲಿ ನಾನು ವಿಲನ್ ಪಾತ್ರ ಮಾಡ್ತೀನಿ ಆ ಜರ್ನಿ ನನ್ನ ಸೂಪರ್ ಜರ್ನಿ. ಜೊತೆ ಈ ಪಾಪ್ಯೂಲಾರಿಟಿ ಹೇಗೆ ಅಂದ್ರೆ ಒಂದು ಸಲ ಅದರ ರುಚಿ ಬಂದ್ರೆ ಅದರಲ್ಲೂ ಮೇಕಪ್ ರುಚಿ ಬಂದ್ರೆ ಅದನ್ನು ಬಿಡುವುದಕ್ಕೆ ಅಗೋಲ್ಲ ಕ್ಯಾಮೆರಾ ಮುಂದೆ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಇದು ಗೊತ್ತಿರುತ್ತದೆ. ಇವತ್ತು ಕೂಡ ವಾಹಿನಿಯಿಂದ ಕರೆ ಬಂದ್ರೆ ಮೊದಲು ಒಪ್ಪಿಕೊಳ್ಳುತ್ತೀನಿ' ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

Rachita Ram talks about 10 years film journey in Super queen reality show vcs

'ತೂಗುದೀಪ ನಿರ್ಮಾಣ ಸಂಸ್ಥೆಯಲ್ಲಿ ವೃತ್ತಿ ಜೀವನ ಶುರುವಾಗಿದ್ದು ನನ್ನನ್ನು ಲಾಂಚ್ ಮಾಡಿದ್ದು ತೂಗುದೀಪ..ಬುಲ್ ಬುಲ್ ಸಿನಿಮಾ ಮೂಲಕ ಜರ್ನಿ ಶುರು ಮಾಡಿದೆ ಈ 10 ವರ್ಷ ತುಂಬಾ ಚೆನ್ನಾಗಿತ್ತು ಆದರೆ ಅಷ್ಟು ಸುಲಭವಾಗಿ ಇರಲಿಲ್ಲ ಅದನ್ನು ನಾನು ಅನುಭವಿಸಿದ್ದೀನಿ. ಜೀವನದಲ್ಲಿ ಮಾತ್ರವಲ್ಲ ವೃತ್ತಿ ಜೀವನದಲ್ಲೂ ಅಪ್ಸ್‌ ಆಂಡ್ ಡೌನ್ಸ್‌ ಇರುತ್ತೆ ಬಂದ ಕೂಡಲೇ ಎಲ್ಲಾ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಕೆಲಸ ಮಾಡಿದೆ ದೊಡ್ಡ ತಂತ್ರಜ್ಞರ ಸಿನಿಮಾದಲ್ಲಿದ್ದರು ಒಳ್ಳೆ ಬ್ಯಾನರ್‌ಗಳು ಅವಕಾಶ ಕೊಟ್ಟರು ಆದರೆ ಕೆಲವೊ ಸಿನಿಮಾ ಹಿಟ್ ಆಯ್ತು ಕೆಲಸ ಸಿನಿಮಾ ಫ್ಲಾಪ್ ಆಯ್ತು ಇದು ಎಲ್ಲರೂ ಎದುರಿಸಿರುತ್ತಾರೆ ಅದರೆ ಇದು ವಂಡರ್‌ಫುಲ್‌ ಜರ್ನಿ ಆಗಿತ್ತು. ಹಿಟೋ ಫ್ಲಾಪೋ ಪಾಸಿಟಿವೋ ನೆಗೆಟಿವೋ ಒಟ್ಟಾರೆ ಸುದ್ದಿಯಲ್ಲಿ ಇರುತ್ತೀನಿ ಏನೇ ಆದರೂ ಜನರು ಮಾತನಾಡುತ್ತಾರೆ. ಅದೆಲ್ಲಾ ಬಿಡಿ ಟಿವಿ ಅವರು ನನ್ನನ್ನು ಕರೆದು ಕೂರಿಸುತ್ತಾರೆ ಅಲ್ವಾ ಅಷ್ಟು ಸಾಕು. ಇಷ್ಟು ವರ್ಷ ನನಗೆ ಸಪೋರ್ಟ್ ಮಾಡಿದ ಕನ್ನಡಿಗನಿಗೆ ನಾನು ಕೆಲಸ ಮಾಡಿದ ಪ್ರತಿಯೊಬ್ಬ ಹೀರೋ ಅಭಿಮಾನಿಗೆ ನನ್ನ ದೊಡ್ಡು ನಮಸ್ಕಾರ ಮತ್ತು ಸಲ್ಯೂಟ್' ಎಂದು ಹೇಳಿದ್ದಾರೆ. 

Rachita Ram 30ರ ವಸಂತಕ್ಕೆ ಕಾಲಿಟ್ಟ ಡಿಂಪಲ್,ರಾತ್ರೋರಾತ್ರಿ ಕೇಕ್‌ ಹಿಡಿದು ಮನೆಗೆ ಬಂದ ಫ್ಯಾನ್ಸ್‌

10 ವರ್ಷಗಳ ಸೆಲೆಬ್ರೆಷನ್‌ ಅದ್ಧೂರಿ ಮಾಡಲು ಡ್ರಾಮ ಜೂನಿಯರ್ಸ್‌ ಮಕ್ಕಳು ಸೇರಿಕೊಂಡು ಕೈಯಲ್ಲಿ ಗುಲಾಬಿ ಹಿಡಿದು ರಚ್ಚುಗೆ ಸರ್ಪ್ರೈಸ್ ಕೊಡುತ್ತಾರೆ ಜೊತೆ 10 ಎಂದು ಬರೆದಿರುವ ಕೇಕ್‌ ಕತ್ತರಿಸಿ ಸಂಭ್ರಮಿಸುತ್ತಾರೆ.  

Follow Us:
Download App:
  • android
  • ios