ಸಿಂಪಲ್, ಟ್ರೇಡಿಷನಲ್ ಹಾಗೂ ಹೋಮ್ಲಿ ಗರ್ಲ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ರಚಿತಾ ರಾಮ್, ವಿಭಿನ್ನ ಪಾತ್ರ ಆಯ್ಕೆಗೆ ಮುಂದಾಗಿದ್ದಾರೆ. ಕೈಯಲ್ಲಿ 12 ಸಿನಿಮಾಗಳಿದ್ದು ಒಂದಕ್ಕಿಂತ ಒಂದು ಭಿನ್ನವಾದ ಕಥೆಗಳು ಎನ್ನಲಾಗುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಶೇರ್ ಮಾಡಿಕೊಂಡ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿವೆ.

ರಚಿತಾ ರಾಮ್‌ ಖಜಾನೆ 2 ವರ್ಷದಿಂದ ತುಂಬುತ್ತಿರುವುದಕ್ಕೆ ಕಾರಣ ಈ ಬ್ಯಾಗ್? 

ಏಕ್ ಲವ್ ಯಾ  ಚಿತ್ರದಲ್ಲಿ ರಚಿತಾ ರಾಮ್ ಪಾತ್ರ ರಿವೀಲ್ ಆಗಿಲ್ಲವಾದರೂ ಹಾಡೊಂದಕ್ಕೆ ಕೈಯಲ್ಲಿ ಸಿಗರೇಟ್‌ ಹಿಡಿದು ಪಾರ್ಟಿ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ರಚಿತಾ ಇಂಥ ಪಾತ್ರಗಳನ್ನ ಆಯ್ಕೆ ಮಾಡುವುದು ಸರಿಯಲ್ಲ, ಇವೆಲ್ಲಾ ನಿಮಗೆ ಸೂಟ್ ಆಗುವುದಿಲ್ಲ, ಸಿಗರೇಟ್ ಹಿಡಿದ ರಚಿತಾರನ್ನು ಸಿನಿಮಾದಿಂದ ತೆಗೆಯಿರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆದರೀಗ ಮತ್ತೆ ಅದೇ ಲುಕ್‌ನಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿ ಶಾಕ್ ಆಗಿದ್ದಾರೆ.

 

ರಚ್ಚು ನ್ಯೂ ಲುಕ್:
ಮಾಸ್‌ ಲುಕ್‌ನಲ್ಲಿ ಕಾಣಸಿಕೊಂಡಿರುವ ರಚ್ಚು ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಪಿಸ್ತೂಲ್ ಹಿಡಿದಿದ್ದಾರೆ. ಈ ಫೋಟೋಗೆ ಬರೆದ ಸಾಲು ಮತ್ತೊಂದು ರೀತಿಯ ಚರ್ಚೆ ಹುಟ್ಟಿಸುತ್ತಿದೆ. 'ನಾನು ಮಾಡುತ್ತಿರುವುದು ತಪ್ಪು. ಅಪರಾಧಿ  ರೀತಿಯಲ್ಲಿ ನೋಡಿದರೆ, ನಾನು ನಿಮಗೆ ಒಂದು ಸಲಹೆ ನೀಡುತ್ತೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ,' ಎಂದು ಬರೆದಿದ್ದಾರೆ.

ರಚಿತಾ ರಾಮ್‌ ಈಗ ಡಜನ್‌ಸ್ಟಾರ್‌; ಕೈಯಲ್ಲಿದೆ 12 ಚಿತ್ರಗಳು! 

ಏನೋ ಒಟ್ಟಿನಲ್ಲಿ ಏನೂ ಅರ್ಥವಾಗುತ್ತಿಲ್ಲ. ಬರೆದ ಸಾಲುಗಳು ಆ್ಯಂಟಿಸಿಪೇಟರಿ ಬೇಲ್ ತೆಗೆದುಕೊಳ್ಳುವಂತಿದೆ. ಈ ಫೋಟೋಗೆ ಕೆಲವರು ಲವ್ಲಿ ಎಂದರೆ, ಇನ್ನೂ ಕೆಲವರು ಸಿಗರೇಟ್‌ ಸೇದುವುದನ್ನು ಪ್ರಮೋಟ್ ಮಾಡುತ್ತಿದ್ದೀರಾ? ಎಂದು ಪ್ರಶ್ನಸಿದ್ದಾರೆ.