ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ' ಮೂಲಕ ಪ್ರೇಕ್ಷಕರ ಮನೆ ಮಗಳಂತಾಗಿದ್ದ ಪುಟ್ಟಗೌರಿ ಅಲಿಯಾಸ್ ರಂಜನಿ ರಾಘವನ್ ಸೀರಿಯಲ್ ಲೋಕದಿಂದ ಗ್ಯಾಪ್ ತೆಗೆದುಕೊಂಡಿದ್ದರು. 

ಆ ನಂತರ ಸಿನಿಮಾದಲ್ಲಿ ಕೆಲಸ ಮಾಡೋಣ ಎಂದು 'ರಾಜಹಂಸ' 'ಟಕ್ಕರ್' ಸಿನಿಮಾಗಳಲ್ಲಿ ನಟಿಸಿದರು. ಧಾರಾವಾಹಿಯಷ್ಟು ಸಿನಿಮಾ ಹಿಟ್ ಆಗಲೇ ಇಲ್ಲ. ಮಲಯಾಳಂ ನಲ್ಲಿ  'ಪೌರ್ಣಮಿ ತಿಂಗಳ್' ಎನ್ನುವ ಧಾರಾವಾಹಿಯಲ್ಲೂ ಮಾಡಿದರು. ಆದರೆ ಅದು ಯಾಕೋ ಹೆಸರು ತಂದು ಕೊಡಲಿಲ್ಲ. 

ರಿಲೀಸ್‌ಗೂ ಮುನ್ನ ಶುರುವಾಯ್ತು ಕೆಜಿಎಫ್ 2 ಕಲೆಕ್ಷನ್ ಲೆಕ್ಕಾಚಾರ!

ಮತ್ತೆ 'ಇಷ್ಟದೇವತೆ' ಸೀರಿಯಲ್ ನಲ್ಲಿ ಕ್ರಿಯೆಟಿವ್ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್, ಕೋ ಪ್ರೊಡ್ಯೂಸರ್ ಆಗಿದ್ದರು. ಕಿರುತೆರೆಯ ಅನುಭವ ಸಾಕಷ್ಟಿದ್ದುದ್ದರಿಂದ ಈ ಧಾರಾವಾಹಿ ಒಂದು ಮಟ್ಟಿಗೆ ಯಶಸ್ಸು ತಂದು ಕೊಟ್ಟಿತು. 

ಈಗ ಮತ್ತೆ ಬ್ಯಾಕ್ ಟು ಪೆವಿಲಿಯನ್ ಆಗುತ್ತಿದ್ದಾರೆ. ಮತ್ತೆ ಸೀರಿಯಲ್‌ಗೆ ಹಿಂತಿರುಗುತ್ತಿದ್ದಾರೆ.  ಈಗ ಸ್ವಲ್ಪ ಡಿಫರೆಂಟಾಗಿ ಕಾಣಿಸಿಕೊಳ್ಳಲಿದ್ದಾರೆ. 'ಪುಟ್ಟಗೌರಿ ಮದುವೆ'ಯಲ್ಲಿ ಕಾಣಿಸಿಕೊಂಡಂತೆ ಸಾಫ್ಟ್ ಪಾತ್ರವಲ್ಲ. ಬದಲಿಗೆ ಸ್ವಲ್ಪ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 

ರಚಿತಾ ರಾಮ್ 'ದಿಸ್​ ಪ್ರಾಪರ್ಟಿ ಬಿಲಾಂಗ್ಸ್​ ಟು ಮಿ' ಅಂತಿರೋದ್ಯಾಕೆ?

ಕಲರ್ಸ್ ಕನ್ನಡದಲ್ಲಿ 'ಕನ್ನಡತಿ' ಎನ್ನುವ ಹೊಸ ಧಾರಾವಾಹಿಯೊಂದು ತೆರೆಗೆ ಬರುತ್ತಿದ್ದು ಅದರಲ್ಲಿ ರಂಜಿನಿ ಅಪ್ಪಟ ಕನ್ನಡತಿ ಭುವನೇಶ್ವರಿಯಾಗಿದ್ದಾರೆ. ಬ್ಯುಸಿನೆಸ್‌ ಮ್ಯಾನ್ ಹಾಗೂ ಭುವನೇಶ್ವರಿ ಸುತ್ತ ನಡೆಯುವ ಕಥೆಯೇ 'ಕನ್ನಡತಿ'. ಈಗಾಗಲೇ ಪ್ರೋಮೋ ಬಿಡುಗಡೆಯಾಗಿದ್ದು ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.