ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ತೆಲುಗಿಗೆ ಹಾರಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಸಕ್ಸಸ್‌ನಲ್ಲಿದ್ದಾರೆ.  ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುತ್ತಿವೆ. ಹೀಗಿರುವಾಗ ಟಾಲಿವುಡ್‌ಗೆ ಹಾರಿದ್ದು ಅಲ್ಲಿಯೂ ಕಮಾಲ್ ಮಾಡಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ. 

ಕೈ ಯಲ್ಲಿ ಗನ್, ಖಡಕ್ ಲುಕ್; ಏನಿದು ದರ್ಶನ್ ಹೊಸ ಅವತಾರ?

ಟಾಲಿವುಡ್‌ಗೆ ಹಾರಿದ ನಂತರ ರಚಿತಾ 'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ' ಎನ್ನುತ್ತಿದ್ದಾರೆ. ಅರೇ! ಇದ್ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದುಕೊಳ್ಳಬೇಡಿ. ಇದು ಸಿನಿಮಾದ ಹೆಸರು.  ಈ ಸಿನಿಮಾ ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ. ರಚಿತಾ ರಾಮ್ ಮೀನಾಕ್ಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಪುಲಿ ವಾಸು ನಿರ್ದೇಶನ ಮಾಡುತ್ತಿದ್ದಾರೆ. 

‘ಪಂಚತಂತ್ರ’ದ ಚೆಲುವೆ ಜೊತೆಗೆ ಉಪ್ಪಿ ಮದುವೆ ಫಿಕ್ಸ್?

ಈ ಸಿನಿಮಾ ತಂದೆ- ಮಗಳ ಸಂಬಂಧದ ಬಗ್ಗೆ ಹೇಳುತ್ತದೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು ಬೆಂಗಳೂರು, ಚಿಕ್ಕಮಗಳೂರು, ಹೈದರಾಬಾದ್ ಹಾಗೂ ವಿಶಾಖಪಟ್ಟಣಂನಲ್ಲಿ ಶೂಟಿಂಗ್ ನಡೆದಿದೆ. 

ಇದೊಂದು ರೊಮ್ಯಾಂಟಿಕ್ ಎಂಟರ್‌ಟೇನಿಂಗ್ ಸಿನಿಮಾ ಇದಾಗಿದ್ದು ಶಿವರಾಜ್ ಕೆ ಆರ್ ಪೇಟೆ ತಂದೆಯಾಗಿ ಕಾಣಿಸಿದ್ದಾರೆ.  ರಚಿತಾ ಜೊತೆಗೆ ರಿಯಾ ಚಕ್ರವರ್ತಿ ನಟಿಸಲಿದ್ದಾರೆ.