Asianet Suvarna News Asianet Suvarna News

ಕುಟುಂಬದ ಜೊತೆ ಪುನೀತ್ ರಾಜ್‌ಕುಮಾರ್ ಪಾರ್ಟಿ; ಹಳೆ ವಿಡಿಯೋ ವೈರಲ್!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಅಪ್ಪು ಫ್ಯಾಮಿಲಿ ಪಾರ್ಟಿ ವಿಡಿಯೋ. ಅಭಿಮಾನಿಳಗಳ ಕುತೂಹಲ ಹೆಚ್ಚಿಸಿದ ವಿಡಿಯೋ.....

Puneeth Rajkumar with wife Ashwini at family celebration video goes viral vcs
Author
Bangalore, First Published May 31, 2022, 12:56 PM IST

ಕನ್ನಡ ಚಿತ್ರರಂಗದ (Sandalwood) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಮೇ 29ಕ್ಕೆ 7 ತಿಂಗಳು ಕಳೆದಿದೆ. ಅಪ್ಪು ನೆನಪಿನಲ್ಲಿ  ದಿನ ಕಳೆಯುತ್ತಿರುವ ಕುಟುಂಬಸ್ಥರು ನಿನ್ನೆ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪುನೀತ್‌ರನ್ನು ನೆನಪಿಸಿಕೊಂಡು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳಲ್ಲಿ ಒಂದು ವಿಡಿಯೋದಲ್ಲಿ ಅಪ್ಪು ಮಗುವಿನ ರೀತಿ ಸಂಭ್ರಮಿಸುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ.

ಹೌದು! ಈ ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಅಶ್ವಿನಿ (Ashwini Puneeth Rajkumar) ಮತ್ತು ವಿನಯ್ ರಾಜ್‌ಕುಮಾರ್‌ (Vinay Rajkumar) ಕೂಡ ಕಾಣಿಸಿಕೊಂಡಿದ್ದಾರೆ. ಒಂದು ಸಾಲಿನಲ್ಲಿ ಗಾಜಿನ ಲೋಟದ ತುಂಬಾ ಕೂಲ್‌ ಡ್ರಿಂಕ್ಸ್‌ ಹಾಕಲಾಗಿದೆ. ಮೇಲಿರುವ ಒಂದು ಲೋಟ ಮುಟ್ಟಿದ್ದರೆ ಬೇರೆಲ್ಲಾ ಲೋಟಗಳ ಮೇಲೆ ಇರುವ ಲೋಟಗಳು ಕೆಳಗೆ ಬೀಳುತ್ತದೆ. ಈ ಸಂಪೂರ್ಣ ದೃಶ್ಯವನ್ನು ಅದ್ಭುತವಾಗಿದ್ದು ಅಪ್ಪು ಮುಖದಲ್ಲಿ ನಗು ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಯಾವ ಸಂದರ್ಭದಲ್ಲಿ ಈ ವಿಡಿಯೋ ಚಿತ್ರೀಕರಣ ಮಾಡಿದ್ದು ಎಂದು ತಿಳಿದು ಬಂದಿಲ್ಲ ಆದರೆ ಅಪ್ಪು ಅಭಿಮಾನಿಗಳು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ವಿಡಿಯೋ ಕೃಪೆ: Balureddy Kontikall instagram account (rajuappuraju)

"

ರಸ್ತೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರು:

ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅಗಲಿಕೆ ಬಳಿಕ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ರಸ್ತೆ ಸರ್ಕಲ್‌ಗಳಿಗೆ ಪುನೀತ್ ರಾಜಕುಮಾರ್ ಹೆಸರನ್ನು ಇಡಲಾಗಿದೆ. ಅದರಂತೆ ಬೆಂಗಳೂರಿನ ರಸ್ತೆಗೂ ಪುನೀತ್ ಹೆಸರು ಇಡಬೇಕು ಎಂಬ ಕೂಗು ಕೇಳಿಬಂದಿದ್ದು, ಅಭಿಮಾನಗಳ ಆಶಯದಂತೆ ಬೆಂಗಳೂರಿನ 12 ಕಿ. ಮೀ ಉದ್ದದ ರಸ್ತೆಗೆ ಪವರ್ ಸ್ಟಾರ್ ಪುನೀತ್ ಹೆಸರನ್ನು ಇಡಲಾಗ್ತಿದೆ.

ಪುನೀತ್ PRK ಪ್ರೊಡಕ್ಷನ್‌ನ 'ಮ್ಯಾನ್ ಆಫ್ ದಿ ಮ್ಯಾಚ್' ಟ್ರೈಲರ್‌ಗೆ ಫ್ಯಾನ್ಸ್ ಫಿದಾ

ಮರಣೋತ್ತರ ಬಸವ ಶ್ರೀ ಪ್ರಶಸ್ತಿ:

ಮುರುಘಾಮಠದಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರದಾನ ಮಾಡುವ ಪ್ರತಿಷ್ಠಿತ '2021 ರ ಬಸವಶ್ರೀ' ಪ್ರಶಸ್ತಿಯನ್ನು ಡಾ.ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಪ್ರದಾನ ಮಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬಸವಣ್ಣನವರು ನಾಡಿಗೆ ಶರಣ ಸಂಸ್ಕೃತಿಯನ್ನು ನೀಡಿದ್ದಾರೆ. ಬಸವ ಸಂಸ್ಕೃತಿ ಎಂಬುವುದು ಶರಣ ಸಂಸ್ಕೃತಿ, ಮಾನವ ಜನಾಂಗದ ಸಂಸ್ಕೃತಿಯಾಗಿದೆ. ಬಸವಣ್ಣನವರ ವಿಶಾಲತೆಯಿಂದಾಗಿ ಬಸವ ಯುಗದಲ್ಲಿ ನೂರಾರು  ಜನರು ಕಂಗೊಳಿಸಿದ್ದಾರೆ. ಬಸವಣ್ಣ ಜಾತಿಯ ಉದ್ದಾರಕ ಅಲ್ಲ, ಮಾನವ ಕುಲದ ಉದ್ದಾರಕರು. ಕೆಳಸ್ತರದಲ್ಲಿದ್ದ ಜನರನ್ನು ಮೇಲೆತ್ತುವ ಕಾರ್ಯವನ್ನು ಮಾಡಿ, ಸಮಾನತೆಯನ್ನು ಸಾರಿದ ಮಹಾನ್ ವ್ಯಕ್ತಿ ಎಂದರು.

ನನ್ನ ತಮ್ಮ ಅಂತಲ್ಲ ಯಾರದೇ ಆದ್ರೂ ಫೋಟೋ ಕಿತ್ತಾಕಬಾರದು: ತಿರುಪತಿ ಘಟನೆಗೆ ಶಿವಣ್ಣ ರಿಯಾಕ್ಷನ್!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 2021 ಅಕ್ಟೋಬರ್ 29ರಂದು ಇಹಲೋಕ ತ್ಯಜಿಸಿದರು. ಪುನೀತ್ ಹಠಾತ್ ಸಾವಿನ ಸುದ್ದಿ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದು ಅಪ್ಪಳಿಸಿತ್ತು. ಆರೋಗ್ಯವಾಗಿ, ಸಖತ್ ಆಕ್ಟೀವ್ ಆಗಿದ್ದ ನಟ ದಿಢೀರ್ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪುನೀತ್ ನಿಧನಹೊಂದಿ ಅನೇಕ ತಿಂಗಳುಗಳೇ ಕಳೆದಿವೆ. ಆದರೂ ಅವರ ಅಗಲಿಕೆಯ ನೋವು ಇನ್ನು ಮಾಸಿಲ್ಲ. ಕಂಠೀರವ ಸ್ಟೂಡಿಯೋದಲ್ಲಿರುವ ಅವರ ಸಮಾಧಿಗೆ ಇಂದಿಗೂ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಧನ್ಯರಾಗುತ್ತಿದ್ದಾರೆ. ಅಪ್ಪು ಇನ್ಮುಂದೆ ನೆನಪು ಮಾತ್ರ. ಅಭಿಮಾನಿಗಳು ಅವರ ಸಿನಿಮಾಗಳನ್ನು ನೋಡುತ್ತಾ ಅಪ್ಪು ನೆನಪಲ್ಲೇ ಕಾಲಕಳೆಯುತ್ತಿದ್ದಾರೆ. ಇದೀಗ ರಸ್ತೆಗೆ ಪುನೀತ್ ಹೆಸರಿಡುವ ಮೂಲಕ ಅಪ್ಪು ಹೆಸರನ್ನು ಮತ್ತಷ್ಟು ಜೀವಂತವಾಗಿ ಇಡುವ ಕೆಲಸ ಮಾಡಲಾಗಿದೆ.
 

Follow Us:
Download App:
  • android
  • ios