ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. 

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James) ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅಪ್ಪು ನಿಧನಕ್ಕೂ ಮುನ್ನ ಕೊನೆಯದಾಗಿ ನಟಿಸಿರುವ ಸಿನಿಮಾ 'ಜೇಮ್ಸ್' ಆಗಿದ್ದು, ಈ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ 'ಜೇಮ್ಸ್' ಸಿನಿಮಾದ ಪೋಸ್ಟರ್ ರಿವೀಲ್ ಮಾಡಿ ಚಿತ್ರತಂಡ ಭಾರೀ ಸದ್ದು ಮಾಡಿತ್ತು. ಇದೀಗ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು 'ಜೇಮ್ಸ್' ಸಿನಿಮಾದ ಟೀಸರ್ (Teaser) ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರಿನ ಮೇಲೆ ಜೆ ಎಂದು ಸಿಂಬಲ್ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿರುವ ಅಶ್ವಿನಿ ಅವರು ಫೆಬ್ರವರಿ 11 ರಂದು ಬೆಳಿಗ್ಗೆ 11.11 ಕ್ಕೆ ಜೇಮ್ಸ್ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. 'ಜೇಮ್ಸ್' ಸಿನಿಮಾದ ಆಡಿಯೋ ರೈಟ್ಸ್ ಪಿಆರ್‌ಕೆ ಪಾಲಾಗಿದ್ದು, ಪಿಆರ್‌ಕೆ ಆಡಿಯೋ ಯೂಟ್ಯೂಟ್ ಚಾನಲ್‌ನಲ್ಲಿ 'ಜೇಮ್ಸ್' ಟೀಸರ್ ಲಾಂಚ್ ಅಗಲಿದೆ. ವಿಶೇಷವಾಗಿ ಅಪ್ಪು ಸಮಾಧಿ ಬಳಿ 'ಜೇಮ್ಸ್' ಉತ್ಸವವನ್ನೇ ಮಾಡಿ ಟೀಸರ್ ಅನ್ನು ಗ್ರಾಂಡ್ ಆಗಿ ರಿಸೀವ್ ಮಾಡಲು ಅಪ್ಪು ಫ್ಯಾನ್ಸ್ ತಯಾರಿ ನಡೆಸುತ್ತಿದ್ದಾರೆ. ಜೇಮ್ಸ್ ಚಿತ್ರದ ಪೋಸ್ಟರನ್ನು ಗಣರಾಜ್ಯೋತ್ಸವದಂದು (Republic Day) ರಿವೀಲ್ ಮಾಡಲಾಗಿತ್ತು.

Puneeth Rajkumar ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದು ರೋಮಾಂಚನಕಾರಿಯಾಗಿತ್ತು: ಚೇತನ್‌ ಕುಮಾರ್‌

ಪುನೀತ್ ಗನ್ ಹಿಡಿದು ಖಡಕ್ ಆರ್ಮಿ ಆಫೀಸರ್ (Army Officer) ಆಗಿ ಮಿಂಚಿದ್ದರು. ಅದರಲ್ಲಿಯೂ ಪೋಸ್ಟರ್‌ನಲ್ಲಿರುವ ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್ ಎಂಬ ಸಾಲುಗಳು ಎಲ್ಲರ ಗಮನ ಸೆಳೆದಿತ್ತು. ಇನ್ನೂ ಪುನೀತ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. 'ಜೇಮ್ಸ್' ಸಿನಿಮಾ ಮೊದಲಿಗೆ ಕನ್ನಡ ಭಾಷೆಯಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಪುನೀತ್ ಅಕಾಲಿಕ ನಿಧನದಿಂದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಚಿತ್ರತಂಡ ತಿಳಿಸಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.



'ಜೇಮ್ಸ್' ಚಿತ್ರದಲ್ಲಿ ಶಿವರಾಜ್​ಕುಮಾರ್ (Shiva Rajkumar) ಹಾಗೂ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ವಿಶೇಷ ಪಾತ್ರ ಮಾಡಿದ್ದಾರೆ. ಪುನೀತ್ ಪಾತ್ರಕ್ಕೆ ಶಿವರಾಜ್​ಕುಮಾರ್ ಧ್ವನಿ ನೀಡಿದ್ದು,ಇತ್ತೀಚೆಗಷ್ಟೇ ಡಬ್ಬಿಂಗ್ ಮುಗಿಸಿದ್ದಾರೆ. ಮಾತ್ರವಲ್ಲದೇ ರಾಘವೇಂದ್ರ ರಾಜ್​ಕುಮಾರ್ ಸ್ಟುಡಿಯೋಗೆ ಆಗಮಿಸಿ, ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಈ ಸಂದರ್ಭದ ಪೋಟೋಗಳನ್ನು ರಾಘಣ್ಣ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್' ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

James Poster Release: ಆರ್ಮಿ ಆಫೀಸರ್ ಲುಕ್‌ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್

ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದು, ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ಹಾಗೂ ಮುಖೇಶ್ ರಿಷಿ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಕಿಶೋರ್ ಪತ್ತಿಕೊಂಡ (Kishore Pattikonda) 'ಜೇಮ್ಸ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಾರ್ಚ್ 17ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ (Birthday) ದಿನ 'ಜೇಮ್ಸ್‌' ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.

ಸೋಲ್ಜರ್ ಪಾತ್ರದಲ್ಲಿ ನಟಿಸಬೇಕೆಂಬುದು ಪುನೀತ್ ಕನಸು: ದೇಶವೇ ಆರಾಧಿಸುವ, ಅಭಿಮಾನಿಸುವ ನಾಯಕ ನಟನ ಜತೆ ಎರಡುವರೆ ವರ್ಷ ಪ್ರಯಾಣಿಸಿದ್ದೇನೆ, ‘ಜೇಮ್ಸ್ ’ ಎನ್ನುವ ಸಿನಿಮಾ ಮಾಡಿದ್ದೇನೆ ಎಂಬುದೇ ನನ್ನ ಭಾಗ್ಯ. ಅವರು ಇಲ್ಲ ಎನ್ನುವ ನೋವು ಇದ್ದೇ ಇರುತ್ತದೆ. ಆದರೆ, ಅವರು ತಮ್ಮ ಚಿತ್ರಗಳ ಮೂಲಕ ನಮ್ಮೊಂದಿಗೆ ಇರುತ್ತಾರೆ. ಆ ಧೈರ್ಯವೇ ‘ಜೇಮ್ಸ್’ ಚಿತ್ರದ ಹಿಂದೆ ಕೆಲಸ ಮಾಡುತ್ತಿದೆ. ಅಪ್ಪು ಫಾರ್ ಎವರ್ ಎಂದು ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.

Scroll to load tweet…