Asianet Suvarna News Asianet Suvarna News

Puneeth Rajkumar ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದು ರೋಮಾಂಚನಕಾರಿಯಾಗಿತ್ತು: ಚೇತನ್‌ ಕುಮಾರ್‌

ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಚಿತ್ರದ ಅಪ್ಪು ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ. ಎರಡೂವರೆ ದಿನದಲ್ಲಿ ಶಿವರಾಜ್‌ಕುಮಾರ್‌ ಡಬ್ಬಿಂಗ್‌ ಮುಗಿಸಿದ್ದು, ಇದೊಂದು ರೋಮಾಂಚನಕಾರಿ ಅನುಭವವಾಗಿತ್ತು ಎಂದು ಚಿತ್ರದ ನಿರ್ದೇಶಕ ಚೇತನ್‌ ಕುಮಾರ್‌ ಹೇಳಿದ್ದಾರೆ. 

Director Chetan Kumar Says Shivarajkumar voice for the role of Puneeth Rajkumar James was Exciting gvd
Author
Bangalore, First Published Feb 3, 2022, 1:30 PM IST

ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನಟನೆಯ ‘ಜೇಮ್ಸ್‌’ (James) ಚಿತ್ರದ ಅಪ್ಪು ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ. ಎರಡೂವರೆ ದಿನದಲ್ಲಿ ಶಿವರಾಜ್‌ಕುಮಾರ್‌ (ShivaRajkumar) ಡಬ್ಬಿಂಗ್‌ (Dubbing) ಮುಗಿಸಿದ್ದು, ಇದೊಂದು ರೋಮಾಂಚನಕಾರಿ ಅನುಭವವಾಗಿತ್ತು ಎಂದು ಚಿತ್ರದ ನಿರ್ದೇಶಕ ಚೇತನ್‌ ಕುಮಾರ್‌ (Chetan Kumar) ಹೇಳಿದ್ದಾರೆ. ಮಾ.17ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ (Birthday) ದಿನ ಈ ಸಿನಿಮಾ ಬಿಡುಗಡೆ ಆಗಲಿದ್ದು, ನಿರ್ದೇಶಕ ಚೇತನ್‌ ನೀಡಿರುವ ಚಿತ್ರದ ಕುರಿತ ಮಾಹಿತಿ ಇಲ್ಲಿದೆ.

- ಶಿವಣ್ಣ ಅವರು ಅಪ್ಪು ಅವರಿಗೆ ದನಿಯಾದ ಸಂದರ್ಭ ಬಹಳ ಭಾವನಾತ್ಮಕವಾದುದು. ಶಿವಣ್ಣ ದುಃಖ ನುಂಗಿಕೊಂಡು ಅದ್ಭುತವಾಗಿ ಡಬ್ಬಿಂಗ್‌ ಮಾಡಿದರು.

- ಅಪ್ಪು ಅವರೇ ಒಂದು ದೊಡ್ಡ ಪವರ್‌, ಎನರ್ಜಿ. ಶಿವಣ್ಣ ಇನ್ನೊಂದು ಪವರ್‌. ಈ ಎರಡು ಪವರ್‌ಗಳ ಮುಖಾಮುಖಿಗೆ ಸಾಕ್ಷಿಯಾದದ್ದು ವರ್ಣಿಸಲಾಗದ ಅನುಭವ. ಅವರ ಅಭಿನಯಕ್ಕೆ ಇವರ ಮಾತುಗಳು ವೈಬ್ರೇಶನ್‌ ಕ್ರಿಯೇಟ್‌ ಮಾಡುತ್ತಿದ್ದವು. ನಾವೆಲ್ಲ ಇಂಥದ್ದನ್ನು ಮೊದಲ ಬಾರಿಗೆ ನೋಡ್ತಿರೋದು.

- ಈ ಅದ್ಭುತದ ಮುಂದೆ ಸಣ್ಣ ಪುಟ್ಟಟೆಕ್ನಿಕಲ್‌ ಸಮಸ್ಯೆಗಳೆಲ್ಲ ಕ್ಷುಲ್ಲಕ. ಶಿವಣ್ಣ ಅವರದು ದೈತ್ಯ ಪ್ರತಿಭೆ. ಅಪ್ಪು ಆ್ಯಕ್ಟ್ ಮಾಡಿರೋದಕ್ಕೆ ದನಿ ನೀಡುವಾಗ ಎಕ್ಸ್‌ಪ್ರೆಶನ್‌ ಎಷ್ಟು ಬೇಕು ಅನ್ನೋದು ಶಿವಣ್ಣ ಅವರಿಗೆ ಗೊತ್ತಾಗುತ್ತೆ. ಅವರ ಅನುಭವ, ಎನರ್ಜಿ ಏನು ಅಂತ ಎಲ್ಲರಿಗೂ ಗೊತ್ತು. ಅಪ್ಪು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಆ ಅಭಿನಯಕ್ಕೆ ತಕ್ಕ ದನಿ ನೀಡಿದ್ದಾರೆ.

Puneeth Rajkumar: ಮಾ.17ಕ್ಕೆ ಐದು ಭಾಷೆಗಳಲ್ಲಿ 'ಜೇಮ್ಸ್' ಸಿನಿಮಾ ಬಿಡುಗಡೆ: ಚೇತನ್‌ಕುಮಾರ್

ಅಪ್ಪು ಮುಖ ನೋಡ್ಕೊಂಡು ಡಬ್‌ ಮಾಡೋದು ಬಹಳ ಕಷ್ಟ. ಎಲ್ಲರೂ ಕೇಳಿಕೊಂಡಾಗ ಮಾಡಲ್ಲ ಅಂತ ನನ್ನಿಂದ ಹೇಳಲಿಕ್ಕಾಗಲಿಲ್ಲ. ಪ್ರಯತ್ನ ಮಾಡಿದೆ. ಡಬ್ಬಿಂಗ್‌ ಮುಗಿಸಿದೆ. ಆದರೆ ಒಬ್ಬ ನಾಯಕ ನಟನಾಗಿ ಇನ್ನೊಬ್ಬ ಆ್ಯಕ್ಟರ್‌ ಒಳಗೆ ನುಗ್ಗಿ ಅವನ ಮನಸ್ಥಿತಿಗೆ ನನ್ನ ಮನಸ್ಸು ಹೊಂದಿಸಿ ಕಂಠದಾನ ಮಾಡೋದು ಚಾಲೆಂಜಿಂಗ್‌. ನನ್ನ ಪ್ರಯತ್ನ ಮಾಡಿದ್ದೀನಿ. ಜನರಿಗೆ ಇಷ್ಟಆಗಬಹುದು ಎಂಬ ನಂಬಿಕೆ ಇದೆ. -ಶಿವರಾಜ್‌ಕುಮಾರ್‌

Director Chetan Kumar Says Shivarajkumar voice for the role of Puneeth Rajkumar James was Exciting gvd

ಸೋಲ್ಜರ್ ಪಾತ್ರದಲ್ಲಿ ನಟಿಸಬೇಕೆಂಬುದು ಪುನೀತ್ ಕನಸು: ದೇಶವೇ ಆರಾಧಿಸುವ, ಅಭಿಮಾನಿಸುವ ನಾಯಕ ನಟನ ಜತೆ ಎರಡುವರೆ ವರ್ಷ ಪ್ರಯಾಣಿಸಿದ್ದೇನೆ, ‘ಜೇಮ್ಸ್ ’ ಎನ್ನುವ ಸಿನಿಮಾ ಮಾಡಿದ್ದೇನೆ ಎಂಬುದೇ ನನ್ನ ಭಾಗ್ಯ. ಅವರು ಇಲ್ಲ ಎನ್ನುವ ನೋವು ಇದ್ದೇ ಇರುತ್ತದೆ. ಆದರೆ, ಅವರು ತಮ್ಮ ಚಿತ್ರಗಳ ಮೂಲಕ ನಮ್ಮೊಂದಿಗೆ ಇರುತ್ತಾರೆ. ಆ ಧೈರ್ಯವೇ ‘ಜೇಮ್ಸ್’ ಚಿತ್ರದ ಹಿಂದೆ ಕೆಲಸ ಮಾಡುತ್ತಿದೆ. ಅಪ್ಪು ಫಾರ್ ಎವರ್ ಎಂದು ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.

ಜೇಮ್ಸ್ ಚಿತ್ರದ ಪೋಸ್ಟರನ್ನು ಗಣರಾಜ್ಯೋತ್ಸವದಂದು (Republic Day) ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ರಿವೀಲ್ ಮಾಡಿದ್ದರು. ಪುನೀತ್ ಗನ್ ಹಿಡಿದು ಖಡಕ್ ಆರ್ಮಿ ಆಫೀಸರ್ (Army Officer) ಆಗಿ ಮಿಂಚಿದ್ದಾರೆ. ಅದರಲ್ಲಿಯೂ ಪೋಸ್ಟರ್‌ನಲ್ಲಿರುವ 'ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್' ಎಂಬ ಸಾಲುಗಳು ಎಲ್ಲರ ಗಮನ ಸೆಳೆದಿತ್ತು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿ ಐದು ಭಾಷೆಯಲ್ಲಿ 'ಜೇಮ್ಸ್' ಸಿನಿಮಾ ತೆರೆಕಾಣಲಿದೆ. 

James Poster Release: ಆರ್ಮಿ ಆಫೀಸರ್ ಲುಕ್‌ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್

ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್' ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದು, ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ಹಾಗೂ ಮುಖೇಶ್ ರಿಷಿ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಕಿಶೋರ್ ಪತ್ತಿಕೊಂಡ (Kishore Pattikonda) 'ಜೇಮ್ಸ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Follow Us:
Download App:
  • android
  • ios