Asianet Suvarna News Asianet Suvarna News

'ಅವರು ಬದುಕಿದ ರೀತಿಯಲ್ಲೇ ನಾವೆಲ್ಲ ಬದುಕಬೇಕು' ಅಪ್ಪು ಅಭಿಮಾನಿಗಳಿಗೆ ರಮ್ಯಾ ಸಂದೇಶ

* ಅಗಲಿದ ನಾಯಕ ಪುನೀತ್ ರಾಜ್ ಕುಮಾರ್ ಗೆ ಎಲ್ಲ ಕಡೆಯಿಂದ ನಮನ
* ಪುನೀತ್ ಅವರೊಂದಿಗಿನ ಒಡನಾಟ ಹಂಚಿಕೊಂಡ ನಟಿ ರಮ್ಯಾ
* ಪುನೀತ್ ಅಭಿಮಾನಿಗಳ ಜತೆ ನಾನು ನಿಲ್ಲುತ್ತೇನೆ
* ರಮ್ಯಾ ಭಾವುಕ ಸಂದೇಶ

Puneeth Rajkumar passes away due to heart attack Actress Ramya Shares memories mah
Author
Bengaluru, First Published Oct 31, 2021, 10:17 PM IST
  • Facebook
  • Twitter
  • Whatsapp

ಬೆಂಗಳೂರು(ಅ. 31)  ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸಿನಿಮಾ ಲೋಕದ ಸ್ನೇಹಿತರು ಗೆಳೆಯನ ಸ್ಮರಿಸಿದ್ದಾರೆ. ಪುನೀತ್ ಅವರೊಂದಿಗೆ ತೆರೆಗೆ ಪರಿಚಯವಾಗಿದ್ದ ನಟಿ ರಮ್ಯಾ ದಿವ್ಯ ಸ್ಪಂದನ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ.,

ಅಪ್ಪು ಜೊತೆಯಲ್ಲಿ ನಾನು ಕಳೆದ ಬಹಳಷ್ಟು ನೆನಪುಗಳು ಅತ್ಯಮೂಲ್ಯ . ನಿಮ್ಮನ್ನು ನಾವು ಎಂದೆಂದಿಗೂ ನೆನೆಯುತ್ತೇವೆ. ಈ ಕಷ್ಟದ ಸಮಯದಲ್ಲಿ ಭಗವಂತ ಅಶ್ವಿನಿ ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮನ್ನು ಅಗಲಿರುವ ಇಂತ ಉನ್ನತ ವ್ಯಕ್ತಿಗೆ ಸಂತಾಪ ಸಲ್ಲಿಸುವ ಸಂದರ್ಭದಲ್ಲಿ ನಾನು ಅವರ ಅಭಿಮಾನಿಗಳ ಜೊತೆ ಇರುವೆನು.

ಪುನೀತ್ ರಾಜ್ ಕುಮಾರ್ ಗೆ ಭಾವುಕ ಪತ್ರ ರೆದ ಕಿಚ್ಚ ಸುದೀಪ್

ಅಪ್ಪು ಅವರ ಬಗ್ಗೆ ಹಲವರು ಬರೆದ ಎಲ್ಲಾ ಭಾವನಾತ್ಮಕ ಸಂದೇಶಗಳನ್ನು ಓದುತ್ತಿದ್ದೇನೆ ಮತ್ತು ಅವೆಲ್ಲವೂ ಅಕ್ಷರಸಹ ನಿಜ. ಕೆಲವಂತು ನನ್ನ ಕಣ್ಣಲ್ಲಿ ನೀರು ತಂದಿತು. ಅದುವೇ ಪುನೀತ್. ಹೌದು, ಅವರೇ ಅಪ್ಪು... ಇವುಗಳನ್ನು ಓದಿದಾಗ ನನ್ನಲ್ಲಿ ಮೂಡಿದ ಕೆಲವು ಆಲೋಚನೆಗಳು ಇವು‌.

ಒಬ್ಬ ವ್ಯಕ್ತಿಯನ್ನು ಜೀವಂತವಾಗಿಡಲು ಉತ್ತಮ ಮಾರ್ಗ ಯಾವುದು? ನೆನಪುಗಳಲ್ಲಿ ಅಲ್ಲ, ಏಕೆಂದರೆ ಅದು ಮಾಸಿ ಹೋಗುತ್ತವೆ, ಆದರೆ ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ- ಅವರು ಬದುಕಿದ ರೀತಿಯಲ್ಲಿ ಪ್ರತಿದಿನ ನಾವು ಬದುಕುವುದು. ಅವರಂತೆಯೇ ನಾವು ಪ್ರೀತಿ ಹಾಗೂ ಕರುಣಾಪೂರ್ಣ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಅವರನ್ನು ಜೀವಂತವಾಗಿ ಇಡುವುದು. ದಿನನಿತ್ಯ ನಾವು ಅವರ ವ್ಯಕ್ತಿತ್ವವನ್ನು ಅನುಸರಿಸುವುದರ ಮೂಲಕ ನಾವು ಅವರನ್ನು ನಮ್ಮಲ್ಲಿ ಜೀವಂತವಾಗಿ ಇಡಲು ಸಾಧ್ಯ. ಈ ರೀತಿ ನಾವು ಅವರ ಮೌಲ್ಯಗಳನ್ನು ಮುಂದುವರಿಸಬಹುದು. ನಾವೆಲ್ಲರು ಅಪ್ಪು ರನ್ನು ಪ್ರತಿ ದಿನವೂ ಆರಾಧಿಸೋಣ... ಇವು ರಮ್ಯಾ ಸಾಲುಗಳು...

 

Follow Us:
Download App:
  • android
  • ios