Yash Birthday; ರಾಕಿಭಾಯ್ ಸಿನಿಮಾಗೆ KVN ಪ್ರೊಡಕ್ಷನ್ ಬಂಡವಾಳ; ಭರ್ಜರಿ ಸುದ್ದಿ ಕೊಟ್ಟ ರಾಕಿಂಗ್ ಸ್ಟಾರ್
ರಾಕಿಂಗ್ ಯಶ್ ಮುಂದಿನ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು (ಜನವರಿ 08) ಹುಟ್ಟುಹಬ್ಬದ ಸಂಭ್ರಮ. ಯಶ್ ಈ ಬಾರಿಯ ಹುಟ್ಟುಹಬ್ಬವನ್ನು ದುಬೈನಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕುಟುಂಬದ ಜೊತೆ ದುಬೈಗೆ ಹಾರಿರುವ ಯಶ್ ಅಲ್ಲೇ ಅದ್ದೂರಿಯಾಗಿ ಬರ್ತಡೇ ಸಂಭ್ರಮಿಸಿದ್ದಾರೆ. ಅಂದಹಾಗೆ ಯಶ್ ಹುಟ್ಟುಹಬ್ಬಕ್ಕೆ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಶ್ ಫೋಟೋ, ಕೆಜಿಎಫ್ ವಿಡಿಯೋಗಳೇ ರಾರಾಜಿಸುತ್ತಿವೆ. ಯಶ್ ಫೋಟೋ ಮತ್ತು ವಿಡಿಯೋ ಶೇರ್ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
ರಾಕಿಂಗ್ ಅಭಿಮಾನಿಗಳು ಸದ್ಯ ಕಾಯುತ್ತಿರುವುದು ಮುಂದಿನ ಸಿನಿಮಾಗಾಗಿ. ಹೌದು, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ ಮಾಡ್ತಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆಯ ಕೆಜಿಎಫ್-2 ರಿಲೀಸ್ ಆದ ಬಳಿಕ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಹುಟ್ಟುಹಬ್ಬದ ದಿನ ಯಶ್ ಮುಂದಿನ ಸಿನಿಮಾದ ದೊಡ್ಡ ಸುಳಿವು ನೀಡಿದ್ದಾರೆ. ಈ ಮೂಲಕ ತನ್ನ 19 ಸಿನಿಮಾ ಯಾವುದು ಎನ್ನುವ ಕುತೂಹಲ ತೆರೆ ಎಳೆದಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೆ ಸ್ಯಾಂಡಲ್ ವುಡ್ ದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದೆ ಎನ್ನಲಾಗಿದೆ.
KVN ಬ್ಯಾನರ್ ನಲ್ಲಿ ಯಶ್ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ ಸದ್ಯ ವೈರಲ್ ಆಗಿರುವ ಇಬ್ಬರ ಫೋಟೋ. ಹೌದು, ಕೆವಿಎನ್ ಸಂಸ್ಥೆಯ ವೆಂಕಟ್ ಕೊನಂಕಿ ನಾರಾಯಣ್ ಮತ್ತು ಯಶ್ ಇಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಕಿಂಗ್ 19ನೇ ಸಿನಿಮಾ ಕೆವಿಎನ್ ಸಂಸ್ಥೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಇನ್ನೂ ಯಶ್ ಗೆ ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ನರ್ತನ್ ಮತ್ತು ಯಶ್ ಹೊಸ ಸಿನಿಮಾ ಸದ್ಯದಲ್ಲೇ ಅನೌನ್ಸ್ ಆಗಲಿದೆಯಂತೆ.
Happy Birthday Yash; ದುಬೈನಲ್ಲಿ ರಾಕಿಂಗ್ ಸ್ಟಾರ್ ಹುಟ್ಟುಹಬ್ಬ ಆಚರಣೆ; ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ದುಬೈನಿಂದ ಬಂದ ಬಳಿಕ ಯಶ್ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ. ಅಂದಹಾಗೆ ‘ಕೆವಿಎನ್’ಈಗಾಗಲೇ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ರಾಜಮೌಳಿ ಅವರ‘ಆರ್ಆರ್ಆರ್’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದ ಕೆವಿಎನ್ ಸಂಸ್ಥೆ ಇದೀಗ ಯಶ್ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಯಶ್ ಮುಂದಿನ ಮುಂದಿನ ಸಿನಿಮಾ ಬರೋಬ್ಬರಿ 400 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗಲಿದೆಯಂತೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರಲಿದೆ.
ನೆಪೊಟಿಸಂ ಅಂದ್ರೆ ಬಲದಿಂದ ತುಳಿಯೋದು; ಗೇಲಿ ಮಾಡಬೇಡಿ ಎಂದ ಯಶ್
ಅಂದಹಾಗೆ ಇದೇ ಸಮಯದಲ್ಲಿ ಕೆಜಿಎಫ್: ಚಾಪ್ಟರ್ 3 ಸಿನಿಮಾ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ಈ ಸಿನಿಮಾ ತಡವಾಗುವ ಸಾಧ್ಯತೆ ಇದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅವರೇ ಬಹಿರಂಗ ಪಡಿಸಿದ್ದಾರೆ. ಸದ್ಯ ಕೆವಿಎನ್ ಸಂಸ್ಥೆಯ ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಸಿನಿಮಾ ಹೇಗಿರಲಿದೆ, ಯಾರೆಲ್ಲ ನಟಿಸಲಿದ್ದಾರೆ, ನಾಯಕಿ ಯಾರು ಎನ್ನುವ ಕಾತರಿಂದ ಕಾಯುತ್ತಿದ್ದಾರೆ. ಕೆಜಿಎಫ್ ಸಿನಿಮಾದಿಂದ ಭಾರಿ ನಿರೀಕ್ಷೆ ಮೂಡಿಸಿರುವ ಯಶ್ ಮುಂದಿನ ಸಿನಿಮಾ ನಿರೀಕ್ಷೆಯ ಮಟ್ಟ ಮುಟ್ಟುವಲ್ಲಿ ಸಕ್ಸಸ್ ಕಾಣುತ್ತಾರಾ ಎಂದು ಕಾದು ನೋಡಬೇಕಿದೆ.