ದಿ ಕಾಶ್ಮೀರ ಫೈಲ್‌ನಿಂದ ಜೇಮ್ಸ್‌ಗೆ ಸಮಸ್ಯೆಯಾಗುತ್ತಿರುವುದು ನಿಜ, ಬಹಿರಂಗಪಡಿಸಿದ ನಿರ್ಮಾಪಕ
* ದಿ ಕಾಶ್ಮೀರ ಫೈಲ್ ಸಿನಿಮಾದಿಂದ ಪುನೀತ್ ಚಿತ್ರ ಜೇಮ್ಸ್‌ಗೆ ಸಮಸ್ಯೆ
* ಬಹಿರಂಗವಾಗಿಯೇ ಹೇಳಿದ ನಿರ್ಮಾಪಕ ಕಿಶೋರ್ ಪೆತ್ತಿಕೊಂಡ
* ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಕಿಶೋರ್ ಪೆತ್ತಿಕೊಂಡ ಹೇಳಿಕೆ
ವರದಿ:- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ, (ಮಾ.22): ಮೊದಲು ತೆರೆ ಕಂಡ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ (The Kashmir Files Moive) ಭಾರೀ ಸಂಚಲನ ಮೂಡಿಸಿತು.ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ್ದೇ ಮಾತು. ಆದ್ರೆ, ದಿವಂಗತ ಡಾ ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ (James) ಫೀಲ್ಮಂ ರಿಲೀಸ್ ಆಗುತ್ತಿದ್ದಂತೆಯೇ ದಿ ಕಾಶ್ನೀರ್ ಫೈಲ್ಸ್‌ಗೆ ದೊಡ್ಡ ಹೊಡೆತ ಬಿದ್ದಿದೆ.
ಈ ಹಿನ್ನೆಲೆಯಲ್ಲಿ ಕೆಲವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಲುವಾಗಿ ಜೇಮ್ಸ್ ಚಿತ್ರಕ್ಕೆ ಡಿಸ್ಟರ್ಬ್ ಮಾಡ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಹೌದು ಇಂತಹದ್ದೊಂದು ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆಗುತ್ತಿದೆ.ಜೆಮ್ಸ್ ಚಿತ್ರ ತೆಗೆಯುವಂತೆ ಬಿಜೆಪಿ ಶಾಸಕರು ಹಾಗೂ ಮುಖಂಡರುಗಳು ಚಿತ್ರಮಂದಿಗಳ ಮಾಲೀಕರ ಮೇಲೆ ಒತ್ತಡ ಹಾಕುತ್ತಿದ್ದಾರೆ ಅಂತೆಲ್ಲಾ ಆರೋಪಗಳು ಕೇಳಿಬರುತ್ತಿದ್ದು, ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Puneeth Rajkumar James: 'ಜೇಮ್ಸ್ ಜಾಗಕ್ಕೆ ಕಾಶ್ಮೀರ ಫೈಲ್ಸ್ ಹಾಕಿ ಅಂತಿದ್ದಾರೆ.. ಏನಿದು ದೌರ್ಜನ್ಯ?'
ಹೌದು... ಅಂತೆ-ಕಂತೆಗಳಲ್ಲ.. ಜೆಮ್ಸ್ ಚಿತ್ರಕ್ಕೆ ಸಮಸ್ಯೆಯಾಗುತ್ತಿರುವುದು ನಿಜ. ಈ ಬಗ್ಗೆ ಸ್ವತಃ ನಿರ್ಮಾಪ ಕಿಶೋರ್ ಪತ್ತಿಕೊಂಡ ಬಹಿರಂಗಪಡಿಸಿದ್ದಾರೆ.ಹಾಗಾದ್ರೆ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ, ಜೇಮ್ಸ್ ಫೀಲ್ಮಂಗೆ ಯಾವ ರೀತಿ ಡಿಸ್ಟರ್ಬ್ ಮಾಡ್ತಾ ಇದ್ಯಾ?, ನಿರ್ಮಾಪಕ ಏನು ಹೇಳಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ
ಚಿತ್ರದ ಪ್ರಮೋಷನ್ ಗಾಗಿ ಕೊಪ್ಪಳ ಜಿಲ್ಲೆ ಗಂಗಾವತಿಯ ಶಿವೆ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಜೇಮ್ಸ್ ಸಿನಿಮಾ ನೋಡಲು ಆಹ್ವಾನಿಸಲು ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಬೇರೆ ಯಾವುದೇ ಕಾರಣಕ್ಕೂ ಅಲ್ಲ ಎಂದು ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಸ್ಪಷ್ಟಪಡಿಸಿದರು.
ನಾನು ಭೇಟಿಯಾಗಿರೋ ಉದ್ದೇಶ ಸಿನಿಮಾ ನೋಡಲು ಹೇಳೋಕೆ. ಅವರೇ ಸಿನಿಮಾ ಹೇಗೆ ನಡೆಯುತ್ತಿದೆ ಎಂದು ಕೇಳಿದ್ರು. ಸಿದ್ದರಾಮಯ್ಯ ಬಹಳ ಖುಷಿ ಪಟ್ಟರು ಎಂದರು. ಇನ್ನು ಕೆಲವು ಕಡೆ ಜೇಮ್ಸ್ ಪ್ರದರ್ಶನಕ್ಕೆ ಸಮಸ್ಯೆ ಆಗಿರೋದು ನಿಜ. ನನಗೆ ಚಿತ್ರಮಂದಿರದ ಮಾಲೀಕರು ಒಂದು ಶೋ ಹಾಕ್ತೀನಿ ಎಂದರು. ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಕಿಶೋರ್ ಪತ್ತಿಕೊಂಡ ತಿಳಿಸಿದರು.
ಅವರಿಗೆ ಯಾರು ಒತ್ತಡ ಹಾಕಿದಾರೆ ನನಗೆ ಗೊತ್ತಿಲ್ಲ. ನನ್ನ ಸಿನಿಮಾಗೆ ಡಿಸ್ಟರ್ಬ್ ಮಾಡಬೇಡಿ ಎಂದು ಹೇಳಿದ್ದೇನೆ. ಸಿನಿಮಾ ಪ್ಲಾಫ್ ಆಗಿಲ್ಲ ಹಿಟ್ ಆಗಿದೆ. ಅದಕ್ಕೆ ನನಗೆ ಕಂಪ್ಲೀಟ್ ಶೋ ನಡೆಯಬೇಕು ಎಂದು ಥೇಟರ್ ಮಾಲೀಕರಿಗೆ ತಿಳಿಸಿದ್ದೇನೆ ಎಂದರು.
ಅಣ್ಣನ ಕೊನೆಗೆ ಸಿನಿಮಾ ಗೆ ಸಪೋರ್ಟ್ ಮಾಡಬೇಕಿದೆ. ಮುಂದೆ ನಮಗೆ ಅಪ್ಪು ಜೊತೆ ಸಿನಿಮಾ ಮಾಡಲು ಆಗಲ್ಲ. ಸದ್ಯ ಜೇಮ್ಸ್ ಗೆ ಅವಕಾಶ ಕೊಡಬೇಕು. ನಮಗೆ ಸಮಸ್ಯೆ ಆಗಿರೋದು ನಿಜ. ಒಂದು ಶೋ ಮಾತ್ರ ಬೇರೆ ಚಿತ್ರ ಹಾಕ್ತಿವಿ ಅಂತಾ ಕೇಳಿಕೊಂಡಿದ್ರು. ಎಲ್ಲಿ ಅನ್ನೋದು ಬೇಡ. ದಿ ಕಾಶ್ಮೀರ ಫೈಲ್ ಸಿನಿಮಾದಿಂದ ಸಮಸ್ಯೆ ಆಗಿದೆ. ನಾಲ್ಕು ಶೋ ನನಗೆ ಬೇಕೇ ಬೇಕು. ಈ ಬಗ್ಗೆ ನಾನು ಫಿಲ್ಮ್ ಚೆಂಬರ್ ಗೆ ತಿಳಿಸಿಲ್ಲ. ಸಿನಿಮಾ ಸಕ್ಸಸ್ ಕಂಡಿದೆ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.
ಸಿದ್ದರಾಮಯ್ಯ ಹೇಳಿದ್ದಿಷ್ಟು...
ಕರ್ನಾಟಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಜೇಮ್ಸ್ ಸಿನಿಮಾ ಸಖತ್ ಹಿಟ್ ಆಗಿ ಓಡುತ್ತಿದೆ. ಇದರ ಮಧ್ಯೆ ಆ ಸಿನಿಮಾವನ್ನು ಥಿಯೇಟರ್ ನಿಂದ ತೆಗೆಯುವಂತೆ ಬಿಜೆಪಿ ಶಾಸಕರು ಹಾಗೂ ಕೆಲವೆಡೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇಂದು (ಮಂಗಳವಾರ) ವಿಧಾನಸೌಧದ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ಜೇಮ್ಸ್ ಸಿನಿಮಾದ ವಿರುದ್ಧ ಬಿಜೆಪಿ ನಾಯಕರು ಹುನ್ನಾರ ನಡೆಸುತ್ತಿದ್ದಾರೆ ಎಂದರು.