Sakrebailu Elephant Camp: ಮರಿಗೆ ಪುನೀತ್ ರಾಜ್‌ಕುಮಾರ್ ಹೆಸರು
ಪುನೀತ್ ನೆನಪಿಗಾಗಿ ಸಕ್ರೇಬೈಲು ಆನೆ ಬಿಡಾರದ ಗಂಡು ಮರಿಯೊಂದಕ್ಕೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೇ ಪುನೀತ್ ಆನೆಗೆ ಸಂಬಂಧಿಸಿದ ಸರ್ಕಾರಿ ಡಾಕ್ಯುಮೆಂಟರಿ ಶೂಟಿಂಗ್ ಹಿನ್ನೆಲೆಯಲ್ಲಿ ಈ ಬಿಡಾರಕ್ಕೆ ಭೇಟಿ ಕೊಟ್ಟಿದ್ದರು.
ಶಿವಮೊಗ್ಗದ ಸಕ್ರೆಬೈಲು ಬಿಡಾರದ ಮರಿಯಾನೆಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಹೆಸರು ನಾಮಕರಣ ಮಾಡಲಾಗಿದೆ. ಕಳೆದೆರೆಡು ತಿಂಗಳ ಹಿಂದೆಯಷ್ಟೇ, ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದ ಪವರ್ ಸ್ಟಾರ್ ಪುನೀತ್, ಈ ಮರಿಯಾನೆಗೆ, ಅಪ್ಪಿ ಮುದ್ದಾಡಿದ್ದರು. ಹೀಗಾಗಿ, ಈ ಮರಿ ಗಜ ರಾಜಕುಮಾರನಿಗೆ ಪವರ್ ಸ್ಟಾರ್ ಹೆಸರು ಇಡಲಾಗಿದೆ. ಬಿಡಾರದ ನೇತ್ರ ಆನೆ ಜನ್ಮವಿತ್ತ ಗಂಡು ಮರಿಯಾನೆ ಇದಾಗಿದ್ದು, ಎರಡು ತಿಂಗಳ ಹಿಂದೆಯಷ್ಟೇ, ವನ್ಯಜೀವಿ ರಕ್ಷಣೆಗೋಸ್ಕರ ಮತ್ತು ಅರಣ್ಯ ಸಂರಕ್ಷಣೆ ಕುರಿತ ಸಾಕ್ಷ್ಯ ಚಿತ್ರಕ್ಕಾಗಿ ಆಗಮಿಸಿ, ಚಿತ್ರೀಕರಣಕ್ಕಾಗಿ ಆಗಮಿಸಿದ್ದರು.ಈ ವೇಳೆ ನೇತ್ರ ಎಂಬ ಹೆಣ್ಣಾನೆ ಮತ್ತು ಅದರ ಮರಿಯಾನೆಯನ್ನು ಕ್ರಾಲ್ ನಲ್ಲಿ ಕಂಡಿದ್ದ ಪುನೀತ್ ತಾಯಿ ಮಗುವಿನ ಬಗ್ಗೆ ಮಾವುತರಿಂದ ವನ್ಯಜೀವಿ ವೈದ್ಯರಿಂದ ಈ ಸಂಬಂಧ ಮಾಹಿತಿ ಪಡೆದಿದ್ದರು.ಈ ವೇಳೆ ಕೆಲ ಸಮಯ ಈ ಗಜ ರಾಜಕುಮಾರನ ಬಳಿ ಆಟವಾಡಿ, ಮುದ್ದಾಡಿದ್ದರು.
ಪುನೀತ್ ಅವರನ್ನು ಸದಾ ನೆನಪಿನಲ್ಲಿ ಇಡಲು ರಸ್ತೆ, ಆಸ್ಪತ್ರೆಗೆ ಹೆಸರಿಡಲು ವಿವಿಧ ಸಂಘ, ಸಂಸ್ಥೆಗಳು, ಗಣ್ಯರು ಉದ್ದೇಶಿಸಿದ್ದಾರೆ. ಅದೇ ರೀತಿ ಶಿವಮೊಗ್ಗ (Shivamogga) ಸಮೀಪದ ಸಕ್ರೆಬೈಲು ಆನೆ ಬಿಡಾರದ (Sakrebailu Elephant Camp) ಗಂಡು ಮರಿಯೊಂದಕ್ಕೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೇ ಪುನೀತ್ ಆನೆಗೆ ಸಂಬಂಧಿಸಿದ ಸರ್ಕಾರಿ ಡಾಕ್ಯುಮೆಂಟರಿ ಶೂಟಿಂಗ್ (government documentary shooting) ಹಿನ್ನೆಲೆಯಲ್ಲಿ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಈ ಆನೆ ಮರಿಯ ಬಗ್ಗೆ ಅಪ್ಪು ವಿಶೇಷ ಪ್ರೀತಿ ತೋರಿದ್ದರು. ಹಾಗಾಗಿ ಈ ಮರಿಗೆ ಪುನೀತ್ ಹೆಸರನ್ನು ನಾಮಕರಣ ಮಾಡಲಾಗಿದೆ.
ಅಪ್ಪು ಅಗಲುವ ಹಿಂದಿನ ರಾತ್ರಿ ಆದದ್ದೇ ಬೇರೆ, ಮಗಳನ್ನು ರೌಂಡ್ಸ್ ಕರೆದೊಯ್ಯಲೇ ಇಲ್ಲ
ಏನಿದು ವೀನಿಂಗ್: ವೀನಿಂಗ್ ಎಂದರೆ, ಮರಿಯಾನೆಗಳಿಗೆ ಹುಟ್ಟಿದ ಕೂಡಲೇ ನಾಮಕರಣ ಮಾಡುವುದಿಲ್ಲ. ಬದಲಾಗಿ ಮರಿಯಾನೆಯನ್ನು ಅದರ ತಾಯಿಯಾನೆಯಿಂದ ಬೇರ್ಪಡಿಸುವ ಪ್ರಕ್ರಿಯೆ ನಡೆಸಿ, ಅದನ್ನು ಪ್ರತ್ಯೇಕವಾಗಿ ಇರಿಸಿದ ಬಳಿಕ ಮರಿಯಾನೆಗೆ ನಾಮಕರಣ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನ ವೀನಿಂಗ್ ಎಂದು ಕರೆಯುತ್ತಾರೆ. ಇದೀಗ ಸಕ್ರೆಬೈಲು ಆನೆ ಬಿಡಾರದಲ್ಲಿ ನೇತ್ರ ಮತ್ತು ಮರಿಯಾನೆಯನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸುವ ವೀನಿಂಗ್ ಕಾರ್ಯವನ್ನು ಇಂದು ಅರಣ್ಯ ಇಲಾಖೆ ಮಾಡಿದ್ದು, ತಾಯಿಯಿಂದ ಬೇರ್ಪಡುವ ಮರಿಯಾನೆಗೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ.
ಈ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು, ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲಿದ ಪವರ್ ಸ್ಟಾರ್ ಗೆ ಗೌರವ ಸೂಚಿಸಿದೆ. ಸಾಮಾನ್ಯವಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿ ಜನಿಸುವ ಮರಿಯಾನೆಗಳಿಗೆ, ನೆಚ್ಚಿನ ಅರಣ್ಯಾಧಿಕಾರಿಗಳದ್ದೋ, ದೇವರ ಹೆಸರು ಇಡುವುದು ಮಾಮೂಲು, ಆದರೆ, ಇದೇ ಪ್ರಥಮವಾಗಿ ನಟನೊಬ್ಬನ ಅದರಲ್ಲೂ, ಎಲ್ಲರಿಗೂ ಪ್ರೀತಿ ಪಾತ್ರರಾಗಿರುವ ಪವರ್ ಸ್ಟಾರ್ ಪುನೀತ್ ಹೆಸರು ನಾಮಕರಣ ಮಾಡಲಾಗಿದ್ದು, ಇನ್ನು ಮುಂದೆ, ಬಿಡಾರಕ್ಕೆ ಬರುವ ಪ್ರವಾಸಿಗರು, ಈ ಗಜನಿಗೆ ಪುನೀತ್ ಅಥವಾ ಅಪ್ಪು ಎಂದು ಕೂಗಿ ಕರೆಯಬಹುದಾಗಿದೆ.
ಅಪ್ಪು ಇಷ್ಟೊಂದು ಅಭಿಮಾನಿಗಳನ್ನು ಗಳಿಸಿದ್ದ ಅಂತ ನಮಗೇ ಗೊತ್ತಿರಲಿಲ್ಲ: ಶಿವಣ್ಣ
ಬಿಡಾರದ ಕ್ರಾಲ್ ಪ್ರದೇಶದಲ್ಲಿ ಡಾಕ್ಯುಮೆಂಟರಿ ಚಿತ್ರೀಕರಣ ಕಾರ್ಯ ನಡೆಸಲಾಗಿತ್ತು. ಶೂಟಿಂಗ್ ನಡೆಯುತ್ತಿದ್ದ ಕಾರಣಕ್ಕೆ ಕ್ರಾಲ್ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಈ ಚಿತ್ರೀಕರಣದಲ್ಲಿ ಓಪನ್ ಜೀಪ್ನಲ್ಲಿ ಪುನೀತ್ ಆಗಮಿಸಿದ್ದರು. ಆನೆಗಳನ್ನು ಅವರು ಮುದ್ದಾಡುವ ದೃಶ್ಯ, ಕುಂತಿ ಹಾಗೂ ಧನುಷ್ ಹೆಸರಿನ ಆನೆಗೆ ಆಹಾರ ನೀಡುವ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಮುಖ್ಯವಾಗಿ ಪುನೀತ್ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಿಡಾರದ ಬಳಿ ನೆರೆದಿದ್ದರು. ಈ ವೇಳೆ ಪುನೀತ್ ಶೂಟಿಂಗ್ಗೆ ಬ್ರೇಕ್ ಕೊಟ್ಟು, ದೇವರೆನ್ನುವ ಅಭಿಮಾನಿಗಳನ್ನೂ ಭೇಟಿಯಾಗಿ, ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಅಭಿಮಾನಿಗಳ ಜೊತೆ ಪುನೀತ್ ಫೋಟೋ ತೆಗೆಸಿಕೊಂಡಿದ್ದಾರೆ.
ವಿಶೇಷವಾಗಿ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಂಬ ಖ್ಯಾತಿಗೆ ಪಾತ್ರವಾದ ಸಕ್ರೆಬೈಲಿಗೆ ಶತಮಾನಗಳ ಇತಿಹಾಸವಿದೆ. ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿರುವ ಈ ಶಿಬಿರದಲ್ಲಿ ಆನೆಗಳ ತರಬೇತಿ ಹಾಗೂ ಪ್ರವಾಸಿಗರಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಈ ಬಿಡಾರದಲ್ಲಿ ಆನೆಗಳು ತಮ್ಮ ಪುಟ್ಟ ಮರಿಗಳೊಂದಿಗೆ ನೀರಿನಲ್ಲಿ ಜಳಕ ಮಾಡುವುದನ್ನು ನೋಡಬಹುದು. ಪ್ರತಿ ದಿನವೂ ಬೆಳಿಗ್ಗೆ 8 ರಿಂದ 11ರವರೆಗೆ ಪ್ರವಾಸಿಗರಿಗೆ ಈ ಶಿಬಿರ ತೆರೆದಿರುತ್ತದೆ. ಸ್ವಚ್ಛಂದ ಜೀವನಕ್ಕೆ ಹೆಸರಾದ ಆನೆಗಳು, ಸಕ್ರೇಬೈಲಿನಲ್ಲಿ ಸ್ನೇಹಜೀವಿಗಳಾಗಿ ವಿಹರಿಸುವುದನ್ನು ನೋಡಲೆಂದೇ ನಿತ್ಯವೂ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆನೆಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ನುರಿತ ಮಾವುತರು, ಕವಾಡಿಗಳ ಆರೈಕೆಯಲ್ಲಿ ಇಲ್ಲಿ ದೈತ್ಯದೇಹಿ ಆನೆಗಳು ಮಾನವರ ಒಡನಾಟಕ್ಕೆ ಒಗ್ಗಿ ಕೊಂಡು ಶಿಸ್ತುಬದ್ಧ ಜೀವನ ನಡೆಸುತ್ತಿವೆ.
ಅಶ್ವಿನಿ ಪುನೀತ್ ಅವರ ಬೆಲೆ ಕಟ್ಟಲಾಗದ ನಗು ನೋಡೋದ್ ಯಾವಾಗಪ್ಪ?: ಒಳ್ಳೆ ಹುಡುಗ ಪ್ರಥಮ್
ಪುನೀತ್ ಒಂದು ಸಿನಿಮಾಕ್ಕೆ ಹಾಡುವ ಹಾಡಿನಿಂದ ಬರುವ ಸಂಭಾವನೆ ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ಹೋಗುತ್ತಿತ್ತು. ಅದೇ ರೀತಿ ಜಾಹೀರಾತಿನಿಂದ ಬರುವ ಹಣವನ್ನ ಕೆಲವು ಅನಾಥಶ್ರಮಗಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಕಷ್ಟದಲ್ಲಿರುವ ಬಡ ಕಲಾವಿದರಿಗೆ ಮತ್ತು ಅಭಿಮಾನಿಗಳಿಗೆ ನೀಡುತ್ತಿದ್ದರು. ಸರ್ಕಾರದಿಂದ, ಸಾರ್ವಜನಿಕರಿಗೆ ಒಳಿತಾಗುವ ಜಾಹೀರಾತುಗಳಲ್ಲಿ ಪುನೀತ್ ರಾಜ್‍ಕುಮಾರ್ ಒಂದು ರೂಪಾಯಿಯೂ ಸಂಭಾವನೆ ಪಡೆಯದೆ ಮಾಡಿಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, ಗೋಶಾಲೆ, ವೃದ್ಧಾಶ್ರಮಗಳ ಪೋಷಣೆ ಮಾಡುತ್ತಿದ್ದರು. ಮಾತ್ರವಲ್ಲದೇ 1800ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಹಾಗೂ ಸಾಕಷ್ಟು ಜನರ ಕಷ್ಟಕ್ಕೆ ಸ್ಪಂದಿಸಿ, ಸಮಾಜಮುಖಿ ಕೆಲಸವನ್ನು ಮಾಡಿದ್ದಾರೆ. ಇದೀಗ ಅವರ ಅಭಿಮಾನಿಗಳು ಆ ಕಾರ್ಯವನ್ನು ತಮ್ಮದೇ ಆದ ರೀತಿಯಲ್ಲಿ ಮುಂದುವರಿಸಲು ಯತ್ನಿಸುತ್ತಿದ್ದಾರೆ.
"